ತಿರುವನಂತಪುರ (ಕೇರಳ):ನಾಲ್ವರು ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಕೇರಳದ ಕೊಲ್ಲಂ ಜಿಲ್ಲೆಯ ಪಾದ್ರಿಗೆ 18 ವರ್ಷಗಳ ಶಿಕ್ಷೆ ವಿಧಿಸಿ ಕೇರಳ ಹೈಕೋರ್ಟ್‌ ಆದೇಶಿಸಿದೆ. ಜತೆಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
2012ರಲ್ಲಿ ನಡೆದ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಥಾಮಸ್ ಪರೆಕ್ಕುಳಂ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ಅಡಿ ಅಸ್ವಾಭಾವಿಕ ಅಪರಾಧಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಚರ್ಚ್​ಗೆ ಬರುತ್ತಿದ್ದ ವಿದ್ಯಾರ್ಥಿಗಳ ಮೇಲೆ ಈತ ಅತ್ಯಾಚಾರ ಎಸಗುತ್ತಿದ್ದುದು ಬೆಳಕಿಗೆ ಬಂದಿತ್ತು. ತಾನು ಮಾಡಿದ ಕೃತ್ಯದ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ಪಾದ್ರಿ ಬೆದರಿಕೆ ಹಾಕುತ್ತಿದ್ದ. ಆದ್ದರಿಂದ ಮಕ್ಕಳೆಲ್ಲರೂ ಹೆದರಿ ಸುಮ್ಮನೇ ಉಳಿದಿದ್ದರು.
ಆದರೆ ಮಕ್ಕಳ ಪಾಲಕರಿಗೆ ಈ ಬಗ್ಗೆ ಸಂದೇಹ ಬಂದಿತ್ತು. ಮಾತ್ರವಲ್ಲದೇ ಮಕ್ಕಳ ನಡವಳಿಕೆ ನೋಡಿದ ಕೆಲವರು ಮಕ್ಕಳ ಬಾಯಿ ಬಿಡಿಸಿದ್ದರು. ನಂತರ ಪಾದ್ರಿ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿ ದೂರು ನೀಡಲಾಗಿತ್ತು. ಕಲ್ಯಾಣ ಸಮಿತಿ ಸದಸ್ಯರು ವಿಚಾರಣೆ ನಡೆಸಿದಾಗಿ ಆ ಹುಡುಗರು ಅತ್ಯಾಚಾರದ ಕುರಿತು ಮಾಹಿತಿ ನೀಡಿದ್ದರು.
ಕೇಸ್​ ದಾಖಲಾಗುತ್ತಿದ್ದಂತೆಯೇ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ ಅಲ್ಲಿಂದ ಪರಾರಿಯಾಗುವಲ್ಲಿ ಆತ ಯಶಸ್ವಿಯಾಗಿದ್ದ. ಚೆನ್ನೈಗೆ ಓಡಿ ಹೋಗಿದ್ದ ಪಾದ್ರಿಯನ್ನು ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದರು.
ವಿಚಾರಣೆ ನಡೆಸಿದ ಕೋರ್ಟ್​ ಶಿಕ್ಷೆ ವಿಧಿಸಿದೆ. ಜತೆಗೆ, ಸಂತ್ರಸ್ತ ಬಾಲಕರಿಗೆ ಸೂಕ್ತ ಪರಿಹಾರವನ್ನು ನೀಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಕೋರ್ಟ್​ ಸೂಚಿಸಿದೆ.
https://www.vijayavani.net/s-property-matter-about-deanapatra-nd/
‘ನಮ್ಮ ಸಾವಿನ ರಹಸ್ಯ ಈ ಟೇಬಲ್​ ಮೇಲಿದೆ… ಡಾಕ್ಟರ್​ ಕೊಟ್ಟಿರೋ ರಿಪೋರ್ಟ್​ ಇಲ್ಲಿದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
