ತಿರುವನಂತಪುರ:ಆಹಾರ ಪೊಟ್ಟಣಗಳನ್ನು ಹೊತ್ತು ಮನೆಗೆ ಭೇಟಿ ನೀಡುತ್ತ ಬಹುಭಾಷಾ ತಾರೆ ಪಾರ್ವತಿ ತಿರುವೋತುಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ನಟಿಯನ್ನು ಹಿಂಬಾಲಿಸಿ, ಆಕೆಯ ಮನೆಗೆ ಬರುವುದೂ ಅಲ್ಲದೇ, ನಟಿಗೆ ನಿರಂತರ ಫೋನ್ ಕರೆಗಳ ಮೂಲಕ ಕಿರುಕುಳ ನೀಡುತ್ತಿದ್ದ ಕೊಲ್ಲಂ ಮೂಲದ ಅಫ್ಸಲ್‌ನನ್ನು (34) ಪೊಲೀಸರು ಬಂಧಿಸಿದ್ದಾರೆ.
ತಿಂಡಿ ಪೊಟ್ಟಣವೆಲ್ಲಾ ತಮಗೆ ಬೇಡ ಎಂದು ಹಲವು ಬಾರಿ ಈತನಿಗೆ ಪಾರ್ವತಿ ಹೇಳಿದ್ದರೂ ಪುನಃ ಪುನಃ ಅದನ್ನು ತರುವ ನೆಪದಲ್ಲಿ ಮನೆಗೆ ಭೇಟಿ ನೀಡುತ್ತಿದ್ದ. ಅಲ್ಲಿರುವ ಭದ್ರತಾ ಸಿಬ್ಬಂದಿ ಜತೆ ಕ್ಯಾತೆ ತೆಗೆದು ಒಳಗೆ ನುಗ್ಗುತ್ತಿದ್ದ. ಈತನ ವಿರುದ್ಧ ಈ ಹಿಂದೆಯೇ ನಟಿ ದೂರು ದಾಖಲಿಸಿದ್ದರು. ಅಂತೂ ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.ಮಹಿಳೆಯರ ಮೇಲೆ ನಾನಾ ವಿಧದಲ್ಲಿ ಆಗುತ್ತಿರುವ ದೌರ್ಜನ್ಯದ ಕುರಿತು ಪಾರ್ವತಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದರು.
ಮಲಯಾಳಿ ನಟಿಯಾಗಿರುವ ಪಾರ್ವತಿ, ಕನ್ನಡದಲ್ಲಿಯೂ ನಟಿಸಿದ್ದಾರೆ. ಪುನೀತ್‌ ರಾಜ್‌ಕುಮಾರ್‌ ಜತೆ ಮಿಲನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೂ ಅಲ್ಲದೇ ‘ಪೃಥ್ವಿ’, ‘ಮಳೆ ಬರಲಿ ಮಂಜೂ ಇರಲಿ’, ‘ಅಂದರ್ ಬಾಹರ್’ ಮೊದಲಾದ ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ.
ಭಾವಿ ಪತ್ನಿ ವೈಯಾರದಿಂದ ಕೊಟ್ಟ ಚಹ ಕುಡಿದ: ಕೊನೆಗೆ ಆಕೆಯ ತಂಗಿಗೆ ತಾಳಿ ಕಟ್ಟಿದ! ಹೀಗೊಂದು ಮದುವೆ…

VIDEO: ಆಗಸದಲ್ಲಿ ಖುಷಿಯಿಂದ ಹಾರುತ್ತಿದ್ದ ಮಹಿಳೆಯರು ಧೊಪ್‌ ಎಂದು ಬಿದ್ದರು- ಭಯಾನಕ ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 8 =
Remember me
