ತಿರುವನಂತಪುರ:ಪತ್ನಿ ಮತ್ತು ಆಕೆಯ ಸ್ನೇಹಿತೆಯರ ಕಾಟವನ್ನು ಸಹಿಸಿಕೊಳ್ಳಲಾಗದೇ ತನ್ನ ಕಾರಿನಿಂದ ಟ್ರಕ್​ಗೆ ಗುದ್ದಿ ಮಗನೊಂದಿಗೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
ಪ್ರಕಾಶ್ ಎನ್ನುವ 48 ವರ್ಷದ ವ್ಯಕ್ತಿ ತಮ್ಮ 11 ವರ್ಷದ ಮಗ ಶಿವದೇವ್ ಜತೆ ಅಪಘಾತ ಮಾಡಿಕೊಂಡು ಮೃತಪಟ್ಟಿದ್ದಾರೆ!
ಕೃತ್ಯಕ್ಕೂ ಮುನ್ನ ಫೇಸ್‌ಬುಕ್ ಪೋಸ್ಟ್ ಮಾಡಿದ್ದು ಅದರಲ್ಲಿ ಪತ್ನಿ ಮತ್ತು ಆಕೆಯ ಸ್ನೇಹಿತರ ಫೋಟೋ ಶೇರ್​ ಮಾಡಿರುವ ಪ್ರಕಾಶ್​, ನಾನು ಸಾಯುತ್ತಿದ್ದೇನೆ. ಈ ವ್ಯಕ್ತಿಗಳೇ ನನ್ನ ಸಾವಿಗೆ ಕಾರಣರು. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದಿದ್ದಾರೆ.
ದಂಪತಿ ನಡುವೆ ಸಂಬಂಧ ಚೆನ್ನಾಗಿ ಇರಲಿಲ್ಲ. ಪತ್ನಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಊರಿಗೆ ಮರಳಲು ಒಪ್ಪುತ್ತಿರಲಿಲ್ಲ. ಬದಲಿಗೆ ತನ್ನ ಐಷಾರಾಮಿ ಜೀವನಕ್ಕೆ ಪತಿಯಿಂದ ಸಾಕಷ್ಟು ಬೇಡಿಕೆ ಇಡುತ್ತಿದ್ದಳು. ಊರಿಗೆ ಮಾತ್ರ ಬರುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕಾರಿನಲ್ಲಿಯೂ ಡೆತ್​ನೋಟ್​ ಪತ್ತೆಯಾಗಿದ್ದು, ಅದರಲ್ಲಿ ನಾಲ್ಕು ಮಂದಿ ಹೆಸರು ಇದೆ. ನನ್ನ ಪತ್ನಿ ಮತ್ತು ಆಕೆಯ ಸ್ನೇಹಿತರು ನನಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ. ಈ ಸ್ನೇಹಿತರು ಯಾರು? ಅವರು ಏನು ಹಿಂಸೆ ಕೊಡುತ್ತಿದ್ದರು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

ಅಗ್ನಿಪಥ್​ ಯೋಜನೆ: ಪ್ರತಿಭಟನೆ ಹೆಸರಲ್ಲಿ ಹಿಂಸಾಚಾರಕ್ಕಿಳಿದ ಗಲಭೆಕೋರರಿಗೆ ಬಿಗ್​ ಶಾಕ್​ ನೀಡಿದ ಯೋಗಿ

ಮಹಿಳೆಯರು ಅಂದ್ರೆ ಅಲರ್ಜಿ: ಮುಟ್ಟಿದ್ರೆ ಸಾಕು ಮೂರ್ಛೆ ಹೋಗೋ ಅರ್ಚಕ- ಅಷ್ಟಕ್ಕೂ ಆಗಿದ್ದು ಇಷ್ಟೇ…

2ನೇ ಪತಿ ಜತೆ ಮಜವಾಗಿರಲು 12 ವರ್ಷದ ಮಗಳನ್ನು ಎರಡೆರಡು ಬಾರಿ ಮದ್ವೆ ಮಾಡಿಸಿದ ತಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
