ಕನ್ನೂರ (ಕೇರಳ):ಜೀವನದಲ್ಲಿ ಹಲವಾರು ಕನಸುಗಳನ್ನು ಕಂಡಿದ್ದು, ಒಳ್ಳೆಯ ಭವಿಷ್ಯದ ಬಗ್ಗೆ ಸದಾ ಆಲೋಚಿಸುತ್ತಿದ್ದ ನವವಿವಾಹಿತೆಯೊಬ್ಬಳು ದಾರುಣವಾಗಿ ಅಂತ್ಯ ಕಂಡಿದ್ದಾಳೆ. ಗಂಡನ ಮನೆಯಲ್ಲಿನ ಕಿರುಕುಳ ತಾಳದೇ ನೇಣಿಗೆ ಕೊರಳೊಡಿದ್ದಾಳೆ.
ಇದು ನಡೆದಿರುವುದು ಕೇರಳದ ಕನ್ನೂರಿನಲ್ಲಿ. 26 ವರ್ಷದ ಯುವತಿ ಸುನೀಶಾ ಆತ್ಮಹತ್ಯೆ ಮಾಡಿಕೊಂಡವಳು. ಗಂಡ ಹಾಗೂ ಗಂಡ ವಿಜೇಶ್‌ ಹಾಗೂ ಆತನ ಮನೆಯವರ ದೌರ್ಜನ್ಯ ತಾಳದೇ ಸುನೀಶಾ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಒಂದು ವಾರ ಮುಂಚಿತವಾಗಿ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಪೊಲೀಸರು ಕೌಟುಂಬಿಕ ದೌರ್ಜನ್ಯ ಕೇಸ್​ ದಾಖಲು ಮಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದೇ ತಮ್ಮ ಮಗಳ ಸಾವಿಗೆ ಕಾರಣ ಎಂದು ಆಕೆಯ ಪಾಲಕರು ಆರೋಪಿಸುತ್ತಿದ್ದಾರೆ.
ಸಾಲದು ಎಂಬುದಕ್ಕೆ ಆತ್ಮಹತ್ಯೆ ಮಾಡಿಕೊಂಡ ಬಳಿಕವೂ ಪೊಲೀಸರು ಇದೊಂದು ಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಗಂಡನ ಮನೆಯ ದೌರ್ಜನ್ಯ ತಾಳದೇ ಸುನೀಶಾ ಪತಿ ವಿಜೀಶ್ ಜತೆ ಜಗಳವಾಡಿದ್ದ ಹಾಗೂ ಆತನ ತಾಯಿ ಕಿರುಕುಳ ನೀಡುತ್ತಿರುವ ಕೆಲವೊಂದು ಆಡಿಯೋ ತುಣುಕು ಕೂಡ ಇದೀಗ ಪೊಲೀಸರಿಗೆ ಲಭ್ಯವಾಗಿದೆ. ಗಂಡನ ಮನೆಯವರು ಮೇಲಿಂದ ಮೇಲೆ ತನ್ನ ಮೇಲೆ ಹಲ್ಲೆ ನಡೆಸುತ್ತಿರುವುದಾಗಿ ಸುನೀಶಾ ತನ್ನ ಸಹೋದರನೊಂದಿಗೆ ಕರೆ ಮಾಡಿ ಕೂಡ ಮಾತನಾಡಿದ್ದು, ಅದು ಕೂಡ ರೆಕಾರ್ಡಿಂಗ್​ಇದೆ.
ಇಷ್ಟೆಲ್ಲಾ ಆದರೂ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ. ತನ್ನ ಮಗಳ ಸಾವಿಗೆ ಅವರೇ ಕಾರಣ ಎಂದು ಸುನೀಶಾ ಪಾಲಕರು ಆರೋಪಿಸುತ್ತಿದ್ದಾರೆ. ಆದರೆ ಪೊಲೀಸರು ಹೇಳುತ್ತಿರುವುದೇ ಬೇರೆ. ಸುನೀಶಾ ತಮಗೆ ದೂರು ನೀಡುತ್ತಿದ್ದಂತೆಯೇ ಎರಡೂ ಕುಟುಂಬದವರನ್ನ ಕರೆದು ಸಮಾಲೋಚನೆ ನಡೆಸಲಾಗಿತ್ತು. ಇದಾದ ಬಳಿಕ ಸುನೀಶಾ ಪತಿಯೊಂದಿಗೆ ವಾಸ ಮಾಡುವುದಾಗಿ ಹೇಳಿ ಹೋಗಿದ್ದರು ಎಂದು ತಿಳಿಸಿದ್ದಾರೆ. ಸದ್ಯ ತನಿಖೆ ಮುಂದುವರೆದಿದೆ. ಆದರೆ ಬಾರದ ಲೋಕಕ್ಕೆ ಹೋಗಿರುವ ಮಗಳನ್ನು ನೆನೆದು ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.
ಗಂಡ ಪ್ರೀತಿಯಿಂದ ತಂದ ಪಾನಿಪುರಿಯೇ ಪತ್ನಿಯ ಆತ್ಮಹತ್ಯೆಗೆ ಕಾರಣವಾಯ್ತು! ಅಷ್ಟಕ್ಕೂ ಆಗಿದ್ದೇನು?

ಗಂಡ-ಹೆಂಡತಿ ತಮಾಷೆಗಾಗಿ ಮಾಡಿಸಿದರು ಮಕ್ಕಳ ಡಿಎನ್‌ಎ ಪರೀಕ್ಷೆ- ವರದಿ ನೋಡಿ ಕಕ್ಕಾಬಿಕ್ಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
