ತಿರುವನಂತಪುರ:ಕೋವಿಡ್‌-19 ನಿರ್ವಹಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ ಕೇರಳ.
ಈ ಹಿನ್ನೆಲೆಯಲ್ಲಿ ಬ್ರಿಟಿಷ್ ನಿಯತಕಾಲಿಕ ಪ್ರಾಸ್ಪೆಕ್ಟ್, ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರನ್ನು ವಿಶ್ವದ ಅತಿ ಉನ್ನತ ಚಿಂತಕಿ ಎಂದು ಬಣ್ಣಿಸಿದೆ.
ನ್ಯೂಜಿಲೆಂಡ್‌ನ ಪ್ರಧಾನಿ ಜಸಿಂಡಾ ಅರ್ಡೆರ್ನ್, ತತ್ವಜ್ಞಾನಿ ಕಾರ್ನೆಲ್ ವೆಸ್ಟ್, ಇತಿಹಾಸಕಾರ ಆಲಿವೆಟ್ ಒಟೆಲ್ ಸೇರಿದಂತೆ ಜಗತ್ತಿನ ಒಟ್ಟು 50 ವ್ಯಕ್ತಿಗಳನ್ನು ವಿವಿಧ ಕ್ಷೇತ್ರಗಳಿಂದ ಆಯ್ಕೆ ಮಾಡಲಾಗಿದ್ದು, ಅದರಲ್ಲಿ ಶೈಲಜಾ ಅವರ ಹೆಸರೂ ಇದೆ.
ಪ್ರಾಸ್ಪೆಕ್ಟ್ ಮ್ಯಾಗಜೀನ್ ‘ಸರಿಯಾದ ಸ್ಥಳದಲ್ಲಿರುವ ಸರಿಯಾದ ಮಹಿಳೆ ( ರೈಟ್ ವುಮೆನ್ ಇನ್ ರೈಟ್ ಪ್ಲೇಸ್) ಎಂದು ಶೈಲಜಾ ಅವರನ್ನು ಬಣ್ಣಿಸಲಾಗಿದೆ.ಜನವರಿಯಲ್ಲಿ ಕರೊನಾ ವೈರಸ್‌ ಇನ್ನೂ ಚೀನಾದಲ್ಲಿಯೇ ಇದ್ದಾಗ, ನಿಖರವಾಗಿ ಇದರ ಆಗಮನವನ್ನು ಗಮನಿಸಿ ಅದರಿಂದ ಉಂಟಾಗುವ ಪರಿಣಾಮಗಳ ಮುನ್ಸೂಚನೆ ನೀಡಿದ್ದರು ಎಂದು ಮ್ಯಾಗಜೀನ್ ತಿಳಿಸಿದೆ.
ಇದನ್ನೂ ಓದಿ:ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿರ ಅಡಿ ಪ್ರಪಾತಕ್ಕೆ ಬಿದ್ದರು!
ಈ ವೈರಸ್‌ ನಿರ್ವಹಣೆಯಲ್ಲಿ ಕೇರಳ ವಹಿಸಿದ ಪಾತ್ರದ ಹಾಗೂ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಬಿಬಿಸಿ, ದಿ ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ ಮತ್ತಿತರ ಅಂತಾರಾಷ್ಟ್ರೀಯ ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿದ್ದವು.
ಅಂದಹಾಗೆ ಕೇರಳದಲ್ಲಿ ಇದುವರೆಗೆ 78,072 ಕರೊನಾ ಪ್ರಕರಣಗಳು ದಾಖಲಾಗಿವೆ. 55,782 ಮಂದಿ ಗುಣಮುಖರಾಗಿದ್ದರೆ, 305 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಹುಲಿಯಾದ ನಾಯಿ- ಬೇಸ್ತುಬಿದ್ದ ಜನ: ಕುಕೃತ್ಯ ಎಸಗಿದವರ ಹುಡುಕಿಕೊಟ್ಟರೆ ಸೂಕ್ತ ಬಹುಮಾನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + 13 =
Remember me
