ಇಡುಕ್ಕಿ (ಕೇರಳ):ತುಂಬಾ ಪ್ರೀತಿಸಿದ ಯುವಕ ಕೈಕೊಟ್ಟಾಗ ಜೀವನವೇ ಬೇಡ ಎಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಬೆಟ್ಟದ ತುದಿಗೆ ಹೋದಾಗ ತಕ್ಷಣವೇ ಧಾವಿಸಿದ ಪೊಲೀಸ್​ ಅಧಿಕಾರಿಯೊಬ್ಬರಿಂದ ಯುವತಿಯ ಪ್ರಾಣ ಉಳಿದಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ನಡೆದಿದೆ. ಪೊಲೀಸ್​ ಹೇಳಿದ ಆ ಮಾತು ಯುವತಿಯ ಮನಸ್ಸನ್ನು ಪರಿವರ್ತನೆ ಮಾಡಿದೆ.
ಇಡುಕ್ಕಿಯ ಆದಿಮಾಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರ ಸಮಯೋಚಿತ ಮಧ್ಯಸ್ಥಿಕೆಯಿಂದ 26 ವರ್ಷದ ಆದಿವಾಸಿ ಮಹಿಳೆ ಪ್ರಾಣ ಉಳಿಸಿಕೊಂಡಿದ್ದಾಳೆ. ಈಕೆಯ ಪ್ರಾಣ ಕಾಪಾಡಿದವರು ಸಬ್ ಇನ್ಸ್‌ಪೆಕ್ಟರ್ ಕೆ ಎಂ ಸಂತೋಷ್. ಇವರ ಕಾರ್ಯಕ್ಕೆ ಇದೀಗ ಎಲ್ಲೆಡೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಇಡುಕ್ಕಿಯ ಆದಿಮಲಿ ಸಮೀಪದ ಕುತಿರಾಲಂ ಕುಡಿ ಬಳಿ ಯುವತಿಯೊಬ್ಬಳು ಬರಿಗಾಲಿನಲ್ಲಿ ಅಳುತ್ತಾ ಹೋಗುತ್ತಿರುವುದನ್ನು ಕಂಡ ದಾರಿಹೋಕರು ಪೊಲೀಸ್ ಠಾಣೆಗೆ ಕರೆ ಮಾಡಿ ಹೇಳಿದ್ದಾರೆ. ಕರೆ ಸ್ವೀಕರಿಸಿದ ಠಾಣಾಧಿಕಾರಿ ಸುಧೀರ್ ಅವರು ವಿಷಯವನ್ನು ಸಂತೋಷ್‌ ಅವರಿಗೆ ಹೇಳಿದ್ದಾರೆ. ಕೂಡಲೇ ಸಂತೋಷ್​ ಅವರು ಸ್ಥಳಕ್ಕೆ ಧಾವಿಸಿದ್ದಾರೆ.
ಸಂತೋಷ್​ ಅವರು ಮೊದಲು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿಗೆ ವಿಷಯ ತಿಳಿಸಿದ್ದರು. ಆದರೆ ಅವರು ಬರುವಷ್ಟರಲ್ಲಿ ಯುವತಿ ಜೀವ ಕಳೆದುಕೊಳ್ಳಬಹುದು ಎಂದು ತಾವೇ ದೌಡಾಯಿಸಿದರು. ಆಕೆಯನ್ನು ಕೂಗಿ ಕರೆದು ಬುದ್ಧಿಮಾತು ಹೇಳಿದರು. ಆದರೆ ತನ್ನನ್ನು ರಕ್ಷಿಸಲು ಯಾರೋ ಬರುತ್ತಿರುವುದನ್ನು ಗಮನಿಸಿದ ಯುವತಿ ಮತ್ತಷ್ಟು ವೇಗದಲ್ಲಿ ಹೋದಳು.
ಕೊನೆಗೆ ಸಂತೋಷ್​ ಅವರು, ನೋಡಮ್ಮಾ… ನನಗೂ ನಿನ್ನಂತೆಯೇ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಏನಾದರೂ ಹೆಚ್ಚೂ ಕಡಿಮೆಯಾದರೆ ನನ್ನಂಥ ಅಪ್ಪನ ಸ್ಥಿತಿ ಹೇಗಿರಬಹುದು ಎಂದು ಊಹಿಸಿಕೊಂಡಿರುವೆಯಾ? ಅವರನ್ನು ನಾನು ತುಂಬಾ ಪ್ರೀತಿಯಿಂದ ಸಲಹಿದ್ದೇನೆ. ನನ್ನ ಸ್ಥಿತಿ ನಿನ್ನ ಪಾಲಕರಿಗೂ ಬರಬಹುದು ಅಲ್ಲವೆ ಎಂದು ಕೇಳಿದರು. ಆತ್ಮಹತ್ಯೆಯ ಕಾರಣ ಕೇಳಿದಾಗ ಆಕೆ ಏನನ್ನೂ ಹೇಳಲಿಲ್ಲ. ಆದರೂ ಛಲಬಿಡದ ಸಂತೋಷ್​ ಅವರು, ಆಕೆಯಿಂದ ಸುಮಾರು ಐದು ಅಡಿ ದೂರದಲ್ಲಿಯೇ ನಿಂತು ಅಲ್ಲಿಂದಲೇ ಮನಸ್ಸನ್ನು ಪರಿವರ್ತಿಸಲು ಕೌನ್ಸೆಲಿಂಗ್​ ಮಾಡಿದರು.
ನನ್ನ ಮಕ್ಕಳು ಏನೇ ಸಮಸ್ಯೆ ಬಂದರೂ ನನ್ನ ಬಳಿ ಹೇಳುತ್ತಾರೆ. ಅವರ ಪ್ರತಿಯೊಂದು ಸಮಸ್ಯೆಗೂ ನಾನು ಪರಿಹಾರ ಹೇಳುತ್ತೇನೆ. ಅವರೂ ನಿನ್ನಂತೆಯೇ ಒಮ್ಮೊಮ್ಮೆ ಎಡವಟ್ಟು ಮಾಡಿಕೊಳ್ಳುತ್ತಾರೆ. ಆದರೆ ಜೀವನದಲ್ಲಿ ಪರಿಹಾರ ಇಲ್ಲದ ಸಮಸ್ಯೆಯೇ ಇಲ್ಲ. ಇದನ್ನೇ ನಾನೂ ನನ್ನ ಮಕ್ಕಳಿಗೆ ಹೇಳುತ್ತೇನೆ. ನೀನು ಸತ್ತರೆ ಯಾರಿಗೆ ಏನು ಪ್ರಯೋಜನ ಹೇಳು? ನೀನು ಯಾರಿಂದಾದರೂ ನೊಂದುಕೊಂಡು ಸಾಯಲು ಹೋಗಿದ್ದೇ ಆದರೆ, ನೀನು ಸತ್ತು ಏನು ಸಾಧಿಸುತ್ತಿ? ನಿನಗೆ ಯಾರಾದರೂ ಅವಮಾನ ಮಾಡಿದ್ದರೆ, ಅವರ ಎದುರು ತಲೆಎತ್ತಿ ಬದುಕಬೇಕಲ್ಲ. ಅದನ್ನು ಬಿಟ್ಟು ಹೇಡಿಯಂತೆ ಸಾಯಲು ಹೋದರೆ ನಿನಗೆ ಅನ್ಯಾಯ ಮಾಡಿದವರಿಗೆ ಜಯ ಸಿಕ್ಕಂತೆ ಅಲ್ಲವೆ ಎಂದರು.
ಈ ಮಾತನ್ನು ಕೇಳಿ ಯುವತಿಗೆ ಇದು ನಿಜ ಎನಿಸಿದೆ. ತಾನು ಸತ್ತು ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದುಕೊಂಡು, ನನಗೆ ಅವಮಾನ ಮಾಡಿದವರ ಎದುರೇ ತಲೆಎತ್ತಿ ಬದುಕುವೆ ಎಂದಿದ್ದಾಳೆ. ಅನೇಕ ವರ್ಷಗಳಿಂದ ಪ್ರೀತಿ ಮಾಡಿದ ಯುವಕನೊಬ್ಬ ತನಗೆ ಮೋಸ ಮಾಡಿದ್ದರಿಂದ ನೊಂದು ಈ ನಿರ್ಧಾರ ತೆಗೆದುಕೊಂಡೆ ಎಂದಿರುವ ಯುವತಿ ಈಗ ಸಾಯುವ ಯೋಚನೆ ಬಿಟ್ಟಿದ್ದಾಳೆ.
ಒಂದು ಪ್ರಾಣವನ್ನು ಉಳಿಸಿರುವ ಸಂತೋಷ್​ ಅವರಿಗೆ ಶ್ಲಾಘನೆಗಳ ಸುರಿಮಳೆಯೇ ಆಗಿದೆ.
ಮೈಸೂರಿನ ಕಾನ್ವೆಂಟ್​ನಲ್ಲಿ ಲೈಂಗಿಕ ದೌರ್ಜನ್ಯ, ಕೊಲೆ? ಕಣ್ಣಾರೆ ಕಂಡ ಸಿಸ್ಟರ್​ಗೆ ಜೀವ ಬೆದರಿಕೆ- ದೂರು ದಾಖಲು

ಪತ್ನಿಗೆ ಟಾರ್ಚರ್​ ಕೊಡ್ತಿದ್ದ- ಯುವತಿಯನ್ನು ಮಂಚಕ್ಕೆ ಕರೀತಿದ್ದ: ಅಸಲಿಯತ್ತು ಗೊತ್ತಾಗಿ ತಲೆತಿರುಗಿ ಬಿದ್ದ ಪೊಲೀಸಪ್ಪ​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
