ಮುಂಬೈ:ಅತ್ತ ಇಡೀ ಕೇರಳ ಸರ್ಕಾರವನ್ನೇ ಅಲ್ಲೋಲ ಕಲ್ಲೋಲ ಮಾಡಿರುವ ಚಿನ್ನದ ಸ್ಮಗ್ಲಿಂಗ್​ ಕೇಸ್​ ವಿಚಾರಣೆ ಇನ್ನೂ ನಡೆಯುತ್ತಿರುವ ನಡುವೆಯೇ ಇತ್ತ ಕರ್ನಾಟಕದಲ್ಲಿ ಡ್ರಗ್ಸ್​ ದಂಧೆ ಭಾರಿ ಸದ್ದು ಮಾಡುತ್ತಿದೆ.
ಆದರೆ ಅಚ್ಚರಿಯ ಸಂಗತಿ ಎಂದರೆ, ಚಿನ್ನದ ಸ್ಮಗ್ಲಿಂಗ್​ನಲ್ಲಿ ಅತಿ ದೊಡ್ಡ ಪಾತ್ರ ವಹಿಸಿರುವ ಸ್ವಪ್ನಾ ಸುರೇಶ್​ಗೂ, ಕರ್ನಾಟಕದಲ್ಲಿ ಡ್ರಂಗ್ಸ್​ ದಂಧೆ ನಡೆಸುತ್ತಿರುವವರಿಗೆ ಭಾರಿ ಲಿಂಕ್​ ಇದೆ ಎನ್ನುವ ಮಾಹಿತಿ ತನಿಖಾಧಿಕಾರಿಗಳಿಗೆ ತಿಳಿದಿದೆ.
ಕೇರಳದ ಸ್ಮಗ್ಲಿಂಗ್​ ದಂಧೆ ಕುರಿತಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ಕುರಿತು ಕೋರ್ಟ್​ಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಕುರಿತಂತೆ ವಿಚಾರಣೆ ನಡೆಸುತ್ತಿರುವ ಕೊಚ್ಚಿಯ ವಿಶೇಷ ಕೋರ್ಟ್​ಗೆ ಈ ಮಾಹಿತಿ ನೀಡಲಾಗಿದೆ. ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ಡ್ರಗ್ಸ್ ಜಾಲದ ನಂಟು ಇದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕೇರಳ ಸಿಎಂ, ಮುಖಂಡರ ಗಡಗಡ ನಡುಗಿಸಿರುವ ಸ್ಮಗ್ಲಿಂಗ್​ ರಾಣಿಗೆ ಎದೆನೋವು! ಆಸ್ಪತ್ರೆಗೆ ದಾಖಲು
ಬೆಂಗಳೂರು ಡ್ರಗ್ಸ್ ದಂಧೆಯಲ್ಲಿ ಈಗಾಗಲೇ ಸಿಕ್ಕಿ ಬಿದ್ದಿರುವ ಪ್ರಭಾವಿ ವ್ಯಕ್ತಿಯೊಬ್ಬರು ಕೇರಳ ಚಿನ್ನ ಕಳ್ಳಸಾಗಣಿಕೆಗೆ ಪ್ರಮುಖ ರೂವಾರಿಗಳಾಗಿರುವ ಸ್ವಪ್ನಾ ಸುರೇಶ್​ ಹಾಗೂ ಪಿ.ಎಸ್​.ಸರಿತಾ ಜತೆ ಸಂಪರ್ಕ ಸಾಧಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕೇರಳ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಆರೋಪಿಗಳಾಗಿರುವ ಸರಿತಾ ಮತ್ತು ಸಪ್ನಾ ಸೇರಿದಂತೆ ಮೂವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಬೇಕೆಂದು ಜಾರಿ ನಿರ್ದೇಶನಾಲಯವು ಕೋರ್ಟ್​ಗೆ ಇಂದು ಕೋರಿಕೊಂಡಿದ್ದು, ಅದರ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಈ ಮಾಹಿತಿ ನೀಡಲಾಗಿದೆ.
ರಾಜತಾಂತ್ರಿಕ ಮಾರ್ಗಗಳ ಮೂಲಕ ಕೇರಳ ರಾಜ್ಯದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪ ಸ್ವಪ್ನಾ ಸುರೇಶ್ ಮೇಲಿದೆ. 14.82 ಕೋಟಿ ರೂಪಾಯಿ ಮೌಲ್ಯದ 30 ಕೆಜಿ ಚಿನ್ನವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಕಳ್ಳಸಾಗಣೆ ಮಾಡಿದ್ದಳು. ಜುಲೈ 5 ರಂದು ಪ್ರಕರಣ ದಾಖಲಾಗಿ ನಂತರದಲ್ಲಿ ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಲಾಗಿದ್ದು, ಇದರ ವಿಚಾರಣೆ ನಡೆಯುತ್ತಿದೆ.
ಪಬ್​ಜಿಗಾಗಿ ಅಜ್ಜನ ಜೀವಮಾನದ ಹಣ ಕದ್ದ ಮೊಮ್ಮಗ- ಪಾಸ್​ವರ್ಡ್​ ಹೇಳುವ ಮುನ್ನ ಎಚ್ಚರ!

11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + 19 =
Remember me
