ಕೊಚ್ಚಿ:ಇನ್ನೊಂದು ವಾರದಲ್ಲಿ ಮನೆಗೆ ಮರಳಲಿದ್ದೇನೆ. ಮನೆಗೆ ಬಂದ ಮೇಲೆ ಕ್ವಾರಂಟೈನ್​ನಲ್ಲಿ ಇರಬೇಕು, ನನಗಾಗಿ ಒಂದು ಕೋಣೆ ತಯಾರಿಮಾಡಿಡು ಎಂದು ಮೊನ್ನೆಯಷ್ಟೇ ಈ ಯೋಧ ಪತ್ನಿಗೆ ಕರೆ ಮಾಡಿ ಹೇಳಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಯೋಧ ವಾಪಸ್​ ಮನೆ ಸೇರಿದ್ದು ಶವವಾಗಿ!
ಪಾಕಿಸ್ತಾನದ ಕುತಂತ್ರ ಬುದ್ಧಿಗೆ ಕೇರಳದ 36 ವರ್ಷದ ಯೋಧ ಬಲಿಯಾಗಿದ್ದಾರೆ. ಅನೀಶ್​ ಥಾಮಸ್​ ನಾಯಕ್​ ಎಂಬ ಈ ಯುವ ಯೋಧ, ರಜೆ ಪಡೆದುಕೊಂಡಿದ್ದರು. ಕೊಲ್ಲಂನ ಎಟಿವಾ ಗ್ರಾಮದಲ್ಲಿರುವ ಮನೆಗೆ ಬರಲು ತಯಾರಿ ನಡೆಸಿದ್ದರು. ಆದರೆ ಅಕ್ರಮವಾಗಿ, ಕದನವಿರಾಮ ಉಲ್ಲಂಘಿಸಿ ಪಾಕಿಸ್ತಾನದ ಉಗ್ರರು ನಡೆಸಿದ ದಾಳಿಗೆ ಇವರು ಬಲಿಯಾಗಿದ್ದಾರೆ!
ಸತತವಾಗಿ ಪಾಕಿಸ್ತಾನವು ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಲೇ ಇದೆ. ಇದಕ್ಕೆ ಉತ್ತರವಾಗಿ ಭಾರತೀಯ ಯೋಧರು ಇದಾಗಲೇ ಹಲವಾರು ಉಗ್ರರನ್ನ ಹೊಡೆದು ಉರುಳಿಸಿದ್ದಾರೆ. ಆದರೆ ಕೆಲವು ಯೋಧರು ಕಾರ್ಯಾಚರಣೆ ವೇಳೆ ಹುತಾತ್ಮರಾಗುತ್ತಿದ್ದಾರೆ. ಅಂಥವರಲ್ಲಿ ಒಬ್ಬರು ಅನೀಶ್​.
ಇದನ್ನೂ ಓದಿ:ಚೀನಾದಿಂದ 38 ಸಾವಿರ ಚ.ಕಿ.ಮೀ ಜಾಗ ಅತಿಕ್ರಮಣ: ರಾಜ್ಯಸಭೆಗೆ ಮಾಹಿತಿ
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನದ ಪಡೆಗಳು ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿ ಗಾರೆಗಳಿಗೆ ಶೆಲ್ ಹಾಕಿದ್ದರು. ಇದು ಸಿಡಿದು ಅನೀಶ್ ಹುತಾತ್ಮರಾಗಿರುವುದಾಗಿ ಸೇನೆ ಹೇಳಿದೆ. ಘಟನೆಯಲ್ಲಿ ಸೇನಾಧಿಕಾರಿ ಸೇರಿದಂತೆ ಇತರ ಮೂವರು ಯೋಧರಿಗೂ ಗಾಯಗಳಾಗಿವೆ.
ಅನೀಶ್​ ಅವರು ಪತ್ನಿ ಎಮಿಲಿ ಹಾಗೂ ಆರು ವರ್ಷದ ಮಗಳು ಹಾನ್ನಾಳನ್ನು ಅಗಲಿದ್ದಾರೆ.
ಆಕೆ ಕರೆನ್ಸಿ ಹಾಕಿಸಿಕೊಂಡಳು, ಅಂಗಡಿಯವ ಮೆಸೇಜ್​ ಕಳಿಸಿದ – ಹತ್ತಿರ ಕರೆದಾಕೆ ಮಾಡಿದ್ದೇನು?

ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮಾಹಿತಿ ಹ್ಯಾಕಿಂಗ್​: ಐವರು ಚೀನಿಯರು ಅಂದರ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 14 =
Remember me
