ತಿರುವನಂತಪುರ (ಕೇರಳ):ಮಗುವಿನ ಜೀವ ಉಳಿಸಲು ಹೋಗಿ ಟೆರೇಸ್ ಮೇಲಿನಿಂದ ಹಾರಿ ಮಹಿಳೆಯೊಬ್ಬರು ಪ್ರಾಣ ಬಿಟ್ಟ ದಾರುಣ ಘಟನೆ ತಿರುವನಂತಪುರದಲ್ಲಿ ನಡೆದಿದೆ.
ನೀಮಾ ಎನ್ನುವವರ ಆರು ತಿಂಗಳ ಮಗು ಟೆರೇಸ್​ ಮೇಲೆ ಆಟವಾಡುತ್ತಿತ್ತು. ಈ ಸಂದರ್ಭದಲ್ಲಿ ಮಗು ಕಾಲು ಜಾರಿ ಬೀಳುತ್ತಿದ್ದಂತೆಯೇ ತಾಯಿ ನೀಮಾ ಅದನ್ನು ಹಿಡಿಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರೇ ಟೆರೇಸ್​ ಮೇಲಿನಿಂದ ಬಿದ್ದು ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಘಟನೆ ಕಳೆದ ಗುರುವಾರ ಮಧ್ಯಾಹ್ನ 12 ಗಂಟೆಯ ವೇಳೆ ನಡೆದಿದೆ. ನೀಮಾ ಅವರ ಪತಿ ಅಬು ಫಜಲ್ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ಮನೆಯನ್ನು ಈಚೆಗೆ ಮಾರಿದ್ದರು. ಈ ಕಾರಣದಿಂದ ನೀಮಾ ಅವರು ಸಹೋದರಿಯ ಮನೆಯಲ್ಲಿ ಮಗುವಿನ ಜತೆ ವಾಸವಾಗಿದ್ದರು.
ಮಧ್ಯಾಹ್ನ ಮಗುವಿನ ಜತೆ ನೀಮಾ ಟೆರೇಸ್​ ಮೇಲೆ ಹೋಗಿದ್ದಾಗ, ಬೀಳುತ್ತಿದ್ದ ಮಗು ರಕ್ಷಿಸಲು ಹೋಗಿದ್ದಾರೆ. ಈ ಸಮಯದಲ್ಲಿ ತಲೆಗೆ ಪೆಟ್ಟು ಬಿದ್ದಿದೆ. ಆಸ್ಪತ್ರೆಗೆ ಕೂಡಲೇ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.
100 ಅಡಿ ಸುನಾಮಿ ಅಲೆಗೆ ಕೊಚ್ಚಿಹೋಗಿದ್ದ ಪೊಲೀಸ್​ ಅಧಿಕಾರಿ 17 ವರ್ಷಗಳ ಬಳಿಕ ಜೀವಂತ ಪತ್ತೆ!

ಸಿಎಂ ಸಾಹೇಬ್ರೆ… ಹೊಗಳುಭಟ್ಟರ ಕಾಲ ಹೋಯ್ತು… ನಿಮ್​ ಸುತ್ತಲೂ ಇರೋ ಬ್ಯಾಂಡ್​ಸೆಟ್​ನವ್ರನ್ನ ನಿಯಂತ್ರಿಸಿ…

VIDEO: ಚಿನ್ನ ಬೇಡ.. ದುಡ್ಡು ಬೇಡ… ಒಂದು ಲಕ್ಷ ಮೌಲ್ಯದ ಪುಸ್ತಕ ಕೊಟ್ಟುಬಿಡಿ ಎಂದ ಪಾಕ್​ ವಧು

ಪಿವಿಸಿ ಪೈಪ್​ ಎಂದು ಬಾಕ್ಸ್​​​ ತೆರೆದರೆ ಸಿಕ್ಕಿದ್ದು 21 ಲಕ್ಷ ನವಿಲುಗರಿ! ಚೀನಾದೊಂದಿಗೆ ಐದೂವರೆ ಕೋಟಿ ರೂ ವ್ಯವಹಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
