ತಿರುವನಂತಪುರ:ಕೇರಳದ ವಿವಾದಾತ್ಮಕ ಇಸ್ಲಾಮಿಕ್ ಪಾದ್ರಿಯೊಬ್ಬರು ಇದೀಗ ಮಹಿಳೆಯರ ಕುರಿತಾಗಿ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾತ್ರಿ 9 ಗಂಟೆಯ ನಂತರ ರಾತ್ರಿ ಹೊರಗೆ ಹೋಗುವ ಮಹಿಳೆಯರು ವೇಶ್ಯೆಯರು, ಅವರು ಅತ್ಯಾಚಾರ ಎಸಗಲು ಮಾತ್ರವಲ್ಲದೇ ಕೊಲೆ ಮಾಡಲು ಕೂಡ ಅರ್ಹರು ಎಂದಿದ್ದಾರೆ ಈ ಪಾದ್ರಿ.
ಕೇರಳದ ಪ್ರಸಿದ್ಧ ಧರ್ಮಗುರು ಎಂದೇ ಹೆಸರಾಗಿರುವ ಮೌಲಾನಾ ಸ್ವಾಲಿಹ್ ಬಾಥೆರಿ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ. ಹಚಿನ್ಸನ್-ಗಿಲ್ಫೋರ್ಡ್ ಪ್ರೊಜೆರಿಯಾ ಸಿಂಡ್ರೋಮ್ (ಎಚ್‌ಜಿಪಿಎಸ್) ಎಂಬ ಸಮಸ್ಯೆಯಿಂದ ಬಳಲುತ್ತಿರುವ ಈ ಪಾದ್ರಿಗೆ 27 ವರ್ಷ ವಯಸ್ಸು. ಆದರೆ ಈ ರೋಗದಿಂದಾಗಿ ಬಾಲಕನ ಥರ ಇವರು ಕಾಣುತ್ತಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡುವಲ್ಲಿ ಇವರು ಪ್ರಸಿದ್ಧರು!
ಅತ್ಯಾಚಾರದ ಕುರಿತಂತೆ ಈ ಪಾದ್ರಿ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
2011 ರಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಗೋವಿಂದಚಾಮಿ ಮಾಡಿದ್ದನ್ನು ಈ ಧರ್ಮಗುರು ಸಮರ್ಥಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅಪರಾಧಿಯ ವಿರುದ್ಧ ನ್ಯಾಯಾಲಯ ನೀಡಿದ್ದ ತೀರ್ಪನ್ನು ಟೀಕಿಸಿರುವ ಮೌಲಾನಾ, ಯುವತಿ ರಾತ್ರಿ ವೇಳೆ ಪ್ರಯಾಣಿಸುತ್ತಿದ್ದ ಕಾರಣ ಗೋವಿಂದಚಾಮಿ ಅತ್ಯಾಚಾರ ಮಾಡಿದ್ದಾನೆ. ಇದು ಸರಿಯಾಗಿದೆ. ರಾತ್ರಿ ತಿರುಗಾಡುವ ಪ್ರತಿ ಹುಡುಗಿಯೂ ವೇಶ್ಯೆಯೇ ಎಂದಿದ್ದಾರೆ!ಎರ್ನಾಕುಲಂನ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮನೆಗೆ ರೈಲಿನಲ್ಲಿ ಹೋಗುತ್ತಿದ್ದ ಯುವತಿ ಮೇಲೆ ಈತ ದಾಳಿ ನಡೆಸಿದ್ದ. ಭಯದಲ್ಲಿ ಯುವತಿ ರೈಲಿನಿಂದ ಕೆಳಕ್ಕೆ ಜಿಗಿದಿದ್ದಳು. ನಂತರ ಈತನೂ ಜಿಗಿದು ಕಲ್ಲಿನಿಂದ ಹೊಡೆದು ಅತ್ಯಾಚಾರ ಮಾಡಿದ್ದ. ಐದು ದಿನಗಳ ನಂತರ ಯುವತಿ ಮೃತಪಟ್ಟಿದ್ದಳು.
2016 ರಲ್ಲಿ ಗೋವಿಂದಚಾಮಿಗೆ ಮರಣದಂಡನೆಯಾಗಿತ್ತು. ಆದರೆ ಸೂಕ್ತ ಸಾಕ್ಷಾಧಾರಗಳ ಕೊರತೆಯಿಂದ ಕೋರ್ಟ್​ ಈ ಶಿಕ್ಷೆಯನ್ನು 7 ವರ್ಷಗಳ ಜೈಲು ಶಿಕ್ಷೆಗೆ ಇಳಿಸಿತ್ತು.
ಹೀಗೊಂದು ಭಯಾನಕ ಆದೇಶ: ಪಾಕ್​ಗೆ ರವಾನಿಸಲು ಹೆಣ್ಣುಮಕ್ಕಳ, ವಿಧವೆಯರ ಪಟ್ಟಿ ಮಾಡಲು ಸೂಚನೆ

ಪ್ರಿಯಕರನೊಂದಿಗೆ ಹೋಗಿದ್ದಾಕೆಯನ್ನು ಬೆತ್ತಲೆಗೊಳಿಸಿದ ಗಂಡ: ಆತನನ್ನು ಹೊತ್ತು ತಿರುಗುವಂತೆ ಹೇಳಿದ ಗ್ರಾಮಸ್ಥರು!

VIDEO: ಜೋಕಾಲಿ ಆಡುವಾಗ ಅವಘಡ: 6,300 ಅಡಿ ಕೆಳಕ್ಕೆ ಬಿದ್ದ ಮಹಿಳೆಯರು- ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + six =
Remember me
