ಬೆಂಗಳೂರು:ಕೆಜಿಎಫ್-2 ಸಿನಿಮಾದ ಟೀಸರ್ ಬಿಡುಗಡೆಯಾಗಿ ರಾಕಿಂಗ್​ ಸ್ಟಾರ್​ ಯಶ್​ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಈ ಟೀಸರ್​ನಲ್ಲಿರುವ ಯಶ್​ ಅಭಿನಯವು ಸಿನಿಪ್ರಿಯರನ್ನು ಮೋಡಿ ಮಾಡಿದೆ.
ರಣಬೇಟೆಗಾರ ರಾಕಿಭಾಯ್ ಅವತಾರದಲ್ಲಿ ತಮ್ಮ ನೆಚ್ಚಿನ ನಾಯಕನ ದೃಶ್ಯ ನೋಡಿದ ಮಂದಿ ವ್ಹಾ ವ್ಹಾ ಎನ್ನುತ್ತಿರುವ ನಡುವೆಯೇ ಈ ನಟನಿಗೆ ಆರೋಗ್ಯ ಇಲಾಖೆ ಶಾಕ್​ ನೀಡಿದೆ. ಇಲಾಖೆಯು ಯಶ್​ಗೆ ನೋಟಿಸ್​ ಜಾರಿ ಮಾಡಿದೆ.
ಬಂದೂಕಿನಿಂದ ರಾಕಿಂಗ್ ಸ್ಟಾರ್ ಸಿಗರೇಟ್ ಹಚ್ಚುವ ದೃಶ್ಯಕ್ಕೆ ಸಹಸ್ರಾರು ಮಂದಿ ಮೋಡಿ ಹೋಗಿದ್ದು ನಿಜ. ಆದರೆ ಇದೇ ದೃಶ್ಯ ಯಶ್​ಗೆ ಮುಳುವಾಗಿದೆ. ಈ ದೃಶ್ಯಕ್ಕೆ ಸಂಬಂಧಿಸಿದಂತೆ ನೋಟಿಸ್​ ಜಾರಿಯಾಗಿದೆ. ಯುವಜನರು ತಮ್ಮ ನೆಚ್ಚಿನ ತಾರೆಯರನ್ನು ಫಾಲೋ ಮಾಡುವುದು, ಅವರಂತೆಯೇ ತಾವೂ ಆಗಬೇಕು ಎನ್ನುವ ಕಾರಣಕ್ಕೆ ನಟ-ನಟಿಯರು ಏನು ಮಾಡುತ್ತಾರೋ ಹಾಗೆಯೇ ತಾವೂ ಮಾಡುವ ಮೂಲಕ ತಮ್ಮನ್ನು ತಾವು ಸ್ಟಾರ್​ ಎಂದು ಬಿಂಬಿಸಿಕೊಳ್ಳುವುದು ಹೊಸತೇನಲ್ಲ. ಹೆಚ್ಚಿನ ಕ್ರಿಮಿನಲ್​ ಪ್ರಕರಣಗಳಲ್ಲಿ ತಾವು ಇಂಥ ಸಿನಿಮಾ ನೋಡಿ ಈ ಕೃತ್ಯ ಎಸಗಿರುವುದಾಗಿ ಹಲವು ಅಪರಾಧಿಗಳು ಹೇಳುತ್ತಿರುವುದನ್ನು ಕಾಣಬಹುದಾಗಿದೆ.

ಇದೀಗ ಈ ಸಿಗರೇಟ್​ ಹಚ್ಚುವ ದೃಶ್ಯ ಕೂಡ ಇದೇ ಸಾಲಿಗೆ ಸೇರಿದೆ ಎಂದಿರುವ ಆರೋಗ್ಯ ಇಲಾಖೆ ನೋಟಿಸ್​ ಜಾರಿಗೊಳಿಸಿದೆ. ಟೀಸರ್​ನಲ್ಲಿ ಇರುವ ಸಿಗರೇಟ್ ಸೇದುವ ದೃಶ್ಯವು ಯುವಕರನ್ನು ಪ್ರಚೋದಿಸುತ್ತದೆ. ಹೀಗಾಗಿ ದೃಶ್ಯ ತೆಗೆಯುವಂತೆ ಸೂಚನೆ ನೀಡಿ ಆರೋಗ್ಯ ಇಲಾಖೆ ನೋಟಿಸ್ ನೀಡಿದೆ. ಆರೋಗ್ಯ ಇಲಾಖೆಯು ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003 ಅಡಿಯಲ್ಲಿ ಈ ನೋಟಿಸ್​ ಜಾರಿಗೊಳಿಸಲಾಗಿದೆ.
ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಕಾಯ್ದೆ 2003, ಸೆಕ್ಷನ್ 5 ರ ಪ್ರಕಾರ ನಿಬಂಧನೆಗಳ ಉಲ್ಲಂಘನೆಯಾಗಿದೆ. ಲಕ್ಷಾಂತರ ಜನ ಯುವ ಅಭಿಮಾನಿಗಳನ್ನ ನೀವು ಹೊಂದಿದ್ದೀರಾ ಹಾಗೂ ಆ ಯುವ ಸಮುದಾಯ ನಿಮ್ಮನ್ನ ಅನುಸರಿಸುತ್ತದೆ. ಯುವ ಸಮುದಾಯ ಸಿಗರೇಟ್ ಸೇದುವ ಪ್ರಚೋದನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಇರುವ ಟೀಸರ್​ನಲ್ಲಿ ಸಿಗರೇಟ್ ಸೇದುವ ದೃಶ್ಯ ತೆಗೆಯಿರಿ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ನಿಮ್ಮ ಖಾಸಗಿ ವಿಷಯ ನೀವೇ ಇಟ್ಕೊಳಿ, ನಮಗೆ ಬೇಡಪ್ಪ ಎಂದ ವಾಟ್ಸ್​ಆ್ಯಪ್​ ಏನು ಹೇಳಿದೆ ನೋಡಿ…

ಎಫ್​ಐಆರ್​ ದಾಖಲಿಸಲು ಒಂದು ಲಕ್ಷ ರೂ. ಲಂಚ: ಲೇಡಿ ಸಬ್​ ಇನ್ಸ್​ಪೆಕ್ಟರ್, ಪೇದೆ ಅರೆಸ್ಟ್​​

ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಪಾಪುವಿನ ಪಾದ ಅದಲುಬದಲು- ಈ ಕಾಲು ಅದಲ್ಲ… ಅದು ಇದಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + three =
Remember me
