ಗಾಂಧಿನಗರ (ಗುಜರಾತ್): ದೆಹಲಿ ಮತ್ತು ಪಂಜಾಬ್​ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿದ ನಂತರ ಭಾರಿ ಹುಮ್ಮಸ್ಸಿನಲ್ಲಿ ಇರುವ ಆಮ್​ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಇದೀಗ ಪ್ರಧಾನಿ ಮೋದಿಯವರ ತವರು ಗುಜರಾತ್​ ಚುನಾವಣೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಜನರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್​, ಗುಜರಾತ್‌ನ ಶಾಲೆಗಳ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ. ಇಲ್ಲಿ ನನಗೆ ಒಂದು ಅವಕಾಶ ಕೊಟ್ಟುನೋಡಿ. ಗುಜರಾತ್​ ಶಾಲೆಗಳನ್ನು ಬದಲಾಯಿಸದಿದ್ದರೆ ನನ್ನನ್ನು ಒದ್ದು ಹೊರಕ್ಕೆ ಹಾಕಿ ಎಂದು ಗುಡುಗಿದರು.
ಗುಜರಾತ್​ನಲ್ಲಿ ಆರು ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ಲಕ್ಷಾಂತರ ಮಕ್ಕಳ ಭವಿಷ್ಯ ಅವನತಿಯತ್ತ ಸಾಗಿದೆ. ಹಲವಾರು ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ. ನನ್ನನ್ನು ಗೆಲ್ಲಿಸಿದರೆ ಸಂಪೂರ್ಣ ಚಿತ್ರಣ ಬದಲಾಯಿಸುತ್ತೇನೆ. ದೆಹಲಿಯಲ್ಲಿ 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ದೆಹಲಿ ಸರ್ಕಾರ ನಡೆಸುವ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ದೆಹಲಿಯಲ್ಲಿ, ಶ್ರೀಮಂತರು ಮತ್ತು ಬಡವರ ಮಕ್ಕಳು ಒಟ್ಟಿಗೆ ಓದುತ್ತಿದ್ದಾರೆ, ದೆಹಲಿಯಲ್ಲಿ ಈ ಬಾರಿ ಶೇಕಡ 99.7ರಷ್ಟು ಫಲಿತಾಂಶ ಬಂದಿದೆ ಎಂದರು.
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಕೇಜ್ರಿವಾಲ್​, ಪೇಪರ್ ಸೋರಿಕೆಯಾಗದಂತೆ ಒಂದೇ ಪರೀಕ್ಷೆ ನಡೆಸುವಂತೆ ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ ಎಂದು ಸವಾಲು ಎಸೆದರು. ಗುಜರಾತ್‌ನಲ್ಲಿ ಪರೀಕ್ಷೆ ವೇಳೆ ಪೇಪರ್ ಸೋರಿಕೆಯಲ್ಲಿ ಬಿಜೆಪಿ ವಿಶ್ವದಾಖಲೆ ಮಾಡುತ್ತಿದೆ ಎಂದು ಲೇವಡಿ ಮಾಡಿದರು.
ಪಿಎಸ್ಐ ನೇಮಕಾತಿ ಅಕ್ರಮ: ಒಳ ಉಡುಪಲ್ಲಿ ಬ್ಲೂಟೂಥ್​, ಕೆಮ್ಮಿದರೆ ಉತ್ತರ! ಕಿಂಗ್​ಪಿನ್​ ಇಂಜಿನಿಯರ್​ ಶರಣು

ಕೋರ್ಟ್​ ಕಟಕಟೆಯಲ್ಲಿ ನೆಹರೂ, ಎಡ್ವಿನಾ ಲವ್​ ಸ್ಟೋರಿ: ಇಬ್ಬರ ನಡುವಿನ ಪತ್ರ ಬಹಿರಂಗಕ್ಕೆ ನಕಾರ

ಬಾಲಕರನ್ನು ರೇಪ್​ ಮಾಡಿ ಪರಾರಿಯಾಗಿದ್ದ ಪಾದ್ರಿಗೆ ಹೈಕೋರ್ಟ್​ನಿಂದ 18 ವರ್ಷಗಳ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
