ಸಿಯೋಲ್:ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೃತಪಟ್ಟಿರುವುದಾಗಿ ಕೆಲವು ತಿಂಗಳ ಹಿಂದೆ ವರದಿಯಾಗಿತ್ತು. ಈತನ ಶವವನ್ನು ತರುವ ವೇಳೆ ಅಲ್ಲಿಯ ಜನರು ಬಿಕ್ಕಿಬಿಕ್ಕಿ ಅಳುತ್ತಿದ್ದರು ಎನ್ನುವ ದೃಶ್ಯ ಕೂಡ ವೈರಲ್‌ ಆಗಿತ್ತು.ಆದರೆ ಈತ ಸತ್ತೇ ಇಲ್ಲ, ಬದುಕಿದ್ದಾನೆ ಎಂದು ಕೆಲವು ಮಾಧ್ಯಮಗಳು ಅಚ್ಚರಿ ವ್ಯಕ್ತಪಡಿಸಿದ ಬೆನ್ನಲ್ಲೇ ಕಿಮ್‌ ದಿಢೀರ್‌ ಪ್ರತ್ಯಕ್ಷನಾಗಿದ್ದ. ಈಗ ಬಂದಿರುವುದು ಅಸಲಿ ಕಿಮ್‌ ಅಲ್ಲ, ಬದಲಿಗೆ ಆತನ ತದ್ರೂಪಿ ವ್ಯಕ್ತಿ ಎಂದೇ ಬಿಂಬಿತವಾಗಿತ್ತು.ಇದು ನಿಜವೋ, ಸುಳ್ಳೋ ಎಂದು ಇನ್ನೂ ಚರ್ಚೆಯಲ್ಲಿ ಇರುವಾಗಲೇ ಕೆಲ ದಿನಗಳ ಹಿಂದೆ ಕಿಮ್‌ ಮತ್ತೆ ಕೋಮಾಕ್ಕೆ ಹೋಗಿರುವ ಸುದ್ದಿಯಾಗಿತ್ತು. ನಿನ್ನೆಯಷ್ಟೇ ಈತ ಸತ್ತೇ ಹೋಗಿರುವುದಾಗಿ ಕೊರಿಯಾ ಸೇರಿದಂತೆ ಇಡೀ ವಿಶ್ವದಲ್ಲಿಯೇ ಸುದ್ದಿಯಾಗಿತ್ತು. ಇನ್ನು ಆತನ ತಂಗಿ ಸರ್ವಾಧಿಕಾರಿಯಾಗಲು ಸಿದ್ಧತೆ ನಡೆಸಿದ್ದಾಳೆ ಎನ್ನುವ ಬಗ್ಗೆಯೂ ಸುದ್ದಿ ಬಿತ್ತರಗೊಂಡಿದೆ. ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಕಿಮ್ ಡೇ-ಜಂಗ್ ಅವರ ಆಪ್ತ ಸಹಾಯಕೊರೊಬ್ಬರು, ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೃತಪಟ್ಟಿರುವುದಾಗಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಘೋಷಿಸಿದ್ದರು ಕೂಡ.
ಇದನ್ನೂ ಓದಿ:ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್ ಸಾವು? ಇನ್ನು ಸಹೋದರಿಯದ್ದೇ ಆಧಿಪತ್ಯ?ಇದರ ನಡುವೆಯೇ ಕಿಮ್‌ ಪುನಃ ದಿಢೀರ್‌ ಪ್ರತ್ಯಕ್ಷನಾಗಿದ್ದಾನೆ ಎಂದು ಉತ್ತರ ಕೊರಿಯಾ ಮೀಡಿಯಾಗಳು ತೋರಿಸಿವೆ. ಇಂದು ಕಿಮ್ ಜಾಂಗ್ ಉನ್ನತ ಸಭೆಯೊಂದರಲ್ಲಿ ಪ್ರತ್ಯಕ್ಷನಾಗಿರುವ ಬಗ್ಗೆ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಸರ್ಕಾರಿ ಮಾಧ್ಯಮ ಈ ಕುರಿತು ಸುದ್ದಿ ಬಿತ್ತರ ಮಾಡಿದ್ದು, ಕಿಮ್ ಜಾಂಗ್ ಉನ್ ಸಭೆಯಲ್ಲಿ ಮಾತನಾಡುತ್ತಿರುವ ದೃಶ್ಯಾವಳಿಗಳನ್ನು ತೋರಿಸಿದೆ. ಈ ಮೂಲಕ ಸರ್ವಾಧಿಕಾರಿ ಇನ್ನೂ ಜೀವಂತವಾಗಿದ್ದಾನೆ ಎಂದೇ ಉತ್ತರ ಕೊರಿಯಾ ವಾದಿಸುತ್ತಿದೆ.ಆದರೆ ಕಿಮ್ ಯೋ ಜಾಂಗ್ ಸಂಪೂರ್ಣ ಆಧಿಕಾರವನ್ನು ತನ್ನ ಸುಪರ್ದಿಗೆ ಪಡೆದ ಕುರಿತು ಉತ್ತರ ಕೊರಿಯಾ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಅಲ್ಲದೇ ಕಿಮ್ ಜಾಂಗ್ಉನ್‌ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿರುವ ವಿಡಿಯೋ ಪ್ರದರ್ಶಿಸಿ ತನ್ನ ಸರ್ವಾಧಿಕಾರಿ ಜೀವಂತವಾಗಿದ್ದಾನೆ ಎಂದು ಬಿಂಬಿಸುತ್ತಿದೆ.ಒಟ್ಟಿನಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ ಸವಿನ ರಹಸ್ಯ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು, ಆತನ ಜೀವಂತವಾಗಿದ್ದಾನೋ ಇಲ್ಲವೋ ಎಂಬ ಪ್ರಶ್ನೆ ಕಾಡುತ್ತಿದೆ.
ನನಗೆ ನಾಯಿ ಬೇಕು ನಾಯಿ- ಕಿಮ್‌ನ ಭಯಾನಕ ಆದೇಶ: ಶ್ವಾನಪ್ರಿಯರ ಕಣ್ಣೀರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 6 =
Remember me
