ವಾಷಿಂಗ್ಟನ್​ (ಅಮೆರಿಕ):ಅಪರಾಧ ಪ್ರಕರಣವೊಂದರಲ್ಲಿ ಜೈಲುಪಾಲಾಗಿದ್ದ ಪ್ರಿಯಕರನನ್ನು ನೋಡಿಕೊಂಡು ಬರಲು ಹೋದ ಪ್ರೇಯಸಿ, ಆತನಿಗೆ ಮುತ್ತು ಕೊಟ್ಟದ್ದೇ ತಡ… ಅವನು ಅಲ್ಲಿಯೇ ಸತ್ತು ಹೋಗಿದ್ದು, ಆ ಪ್ರೇಯಸಿ ಈಗ ಜೈಲು ಪಾಲಾಗಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಇದು ಸಂಭವಿಸಿರುವುದು ಅಮೆರಿಕದ ಟೆನ್ನೆಸ್ಸಿಯಲ್ಲಿ. ಈ ಪ್ರಕರಣದಲ್ಲಿ ಮೃತಪಟ್ಟಿರುವವನು ಜಾಷುಯಾ ಬ್ರೌನ್​ ಹಾಗೂ ಸಾವಿಗೆ ಕಾರಣವಾಗಿ ಈಗ ಜೈಲು ಪಾಲಾಗಿರುವವಳು ರಾಷೆಲ್​ ಡೊಲ್ಲಾರ್ಡ್​.
ಅಷ್ಟಕ್ಕೂ ಪ್ರಿಯಕರನನ್ನು ಕೊಲ್ಲಲು ಪ್ರೇಯಸಿ ಜೈಲಿಗೆ ಹೋದವಳಲ್ಲ, ಅಥವಾ ಕಿಸ್​ ಕೊಟ್ಟಿದ್ದು ಕೂಡ ಆತನನ್ನು ಸಾಯಿಸಲು ಅಲ್ಲ, ಅವಳ ಉದ್ದೇಶ ಒಳ್ಳೆಯದ್ದೇ ಇತ್ತು. ಅಪರೂಪಕ್ಕೆ ಕಾಣಸಿಕ್ಕ ಪ್ರಿಯತಮನ ಮೇಲೆ ಪ್ರೀತಿ ಉಕ್ಕಿ ಮುತ್ತು ಕೊಟ್ಟಿದ್ದಳಷ್ಟೇ. ಆದರೆ ಆದದ್ದೇ ಬೇರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಈ ಪ್ರಿಯಕರ ಡ್ರಗ್ಸ್​ ಪ್ರಿಯ. ಇದೇ ಕೇಸ್​ನಲ್ಲಿ ಆತ ಒಳಕ್ಕೆ ಹೋಗಿದ್ದ. 11 ವರ್ಷಗಳ ಶಿಕ್ಷೆಯನ್ನು ಈತ ಅನುಭವಿಸುತ್ತಿದ್ದ. 2029ರ ವರೆಗೆ ಅವನಿಗೆ ಶಿಕ್ಷೆ ವಿಧಿಸಲಾಗಿತ್ತು. ಜೈಲಿನಲ್ಲಿ ಡ್ರಗ್ಸ್​ ಸಿಗದೇ ಒದ್ದಾಡುತ್ತಿದ್ದ. ಇದನ್ನು ನೋಡಲಾಗದ ಪ್ರಿಯತಮೆ ಬಾಯಲ್ಲಿ ಡ್ರಗ್ಸ್​ ಇಟ್ಟುಕೊಂಡು ಹೋಗಿದ್ದಳು. ಪ್ರಿಯತಮನಿಗೆ ಇಷ್ಟವಾದ ಹಲವಾರು ಬಗೆಯ ಡ್ರಗ್ಸ್​ ಆಕೆಯ ಬಾಯಲ್ಲಿ ಇತ್ತು. ಕಿಸ್​ ಕೊಡುವ ನೆಪದಲ್ಲಿ ತನ್ನ ಬಾಯಿಯಿಂದ ಆತನ ಬಾಯಿಗೆ ಡ್ರಗ್ಸ್​ ಹಾಕುವ ಪ್ಲ್ಯಾನ್​ ಈಕೆ ಮಾಡಿದ್ದಳು.
ಆದರೆ ಅಪರೂಪಕ್ಕೆ ತನಗೆ ಡ್ರಗ್ಸ್​ ಸಿಕ್ಕಿದ ಖುಷಿಗೆ ಈ ಪ್ರಿಯಕರ ಎಲ್ಲವನ್ನೂ ಒಟ್ಟಿಗೇ ನುಂಗಿಬಿಟ್ಟ! ಅದೇ ವಿಷವಾಗಿ ಪರಿಣಮಿಸಿತು. ಒಟ್ಟಿಗೇ ಅಷ್ಟೊಂದು ಮಾದಕದ್ರವ್ಯ ಸೇವನೆ ಮಾಡಿದ್ದರಿಂದ ಅದು ಆತನ ಹೊಟ್ಟೆ ಸೇರುತ್ತಲೇ ವಿಷವಾಗಿ ಕೂಡಲೇ ಪ್ರಾಣ ಬಿಟ್ಟ. ಮಾದಕ ದ್ರವ್ಯಕ ತೂಕವು ಸುಮಾರು 14 ಗ್ರಾಂಗಳಷ್ಟಿತ್ತು.
ಆತ ಹೇಗೆ ಪ್ರಾಣ ಬಿಟ್ಟ ಎಂಬ ಬಗ್ಗೆ ತನಿಖೆ ಮಾಡಿದಾಗ ವಿಷಯ ಬಹಿರಂಗಗೊಂಡಿದೆ. ಅವನ ಹೊಟ್ಟೆಯಲ್ಲಿ ಡ್ರಗ್ಸ್​ ಪತ್ತೆಯಾಗಿದ್ದು, ಪ್ರೇಯಸಿ ಸಿಕ್ಕಿಬಿದ್ದಿದ್ದಾಳೆ. ಈ ಹಿಂದೆ ಕೂಡ ಇದೇ ರೀತಿ ಕಿಸ್​ ಮಾಡುವ ಮೂಲಕ ಡ್ರಗ್ಸ್​ ನೀಡಿದ್ದಳು ಎನ್ನುವ ವಿಷಯ ಕೂಡ ಇದೀಗ ಬಹಿರಂಗಗೊಂಡಿದೆ. ಈ ಕೇಸ್​ನಲ್ಲಿ ಪ್ರಿಯತಮೆಗೆ ಶಿಕ್ಷೆ ವಿಧಿಸಲಾಗಿದೆ.(ಏಜೆನ್ಸೀಸ್​)
ಎರಡು ಸಾವಿರ ರೂ.ಗೆ ಯುವತಿಯ ಜತೆ ಮಂಚಕ್ಕೆ ಹೋದ ಇನ್ಸ್​ಪೆಕ್ಟರ್​: ಪೊಲೀಸರ ಬಲೆಗೆ ಗಂಡ-ಹೆಂಡ್ತಿ, ಅಪ್ಪ!
ಸೌದಿಗೆ ಹಾರಿದ 3 ಮಕ್ಕಳ ತಾಯಿ: ನೊಂದ ಪತಿಯಿಂದ ಘೋರ ಕೃತ್ಯ, ಕಂದಮ್ಮಗಳಿಗೆ ಇದೆಂಥ ಅನ್ಯಾಯ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × one =
Remember me
