ತಿರುವನಂತಪುರ:ಕೇರಳದ ಮಾಜಿ ಸಚಿವ ಹಾಗೂ ರಾಜ್ಯ ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಕೇರಳದ ಅತ್ಯಂತ ಪ್ರಭಾವಶಾಲಿ ಕಮ್ಯೂನಿಸ್ಟ್ ಮುಖಂಡರಲ್ಲೊಬ್ಬರೆನಿಸಿರುವ ಕೋಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೀಶ್​ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್ ಕೇಸ್​ನಲ್ಲಿ ಮಗ ಅರೆಸ್ಟ್​ ಆಗಿದ್ದರು. ಬಿನೀಶ್​ ಅವರನ್ನು ಅಕ್ಟೋಬರ್​ 19ರಂದು ಬಂಧಿಸಲಾಗಿದೆ.
ಡ್ರಗ್ ಪೆಡ್ಲರ್​ ಮೊಹಮ್ಮದ್​ ಅನೂಪ್​ ಅವರ ನಿವಾಸದಲ್ಲಿ ಬಿನೀಶ್​ ಅವರ ಡೆಬಿಟ್​ ಕಾರ್ಡ್​ ಸಿಕ್ಕ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.
ಇದಾದ ಮೇಲೆ ಕೋಡಿಯೇರಿ ಅವರಿಗೆ ಸರ್ಕಾರ ರಜೆ ನೀಡಿ ಕಳುಹಿಸಿತ್ತು. ಆರೋಗ್ಯ ಹದಗೆಟ್ಟಿರುವ ಕಾರಣಕ್ಕೆ ರಜೆ ನೀಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಇದರ ವಿರುದ್ಧ ಆನೇಕ ಆರೋಪಗಳು ಕೇಳಿಬಂದಿದ್ದು, ಸರ್ಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.
ಬಿನೀಶ್​ ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿಕೊಂಡಿದ್ದರೆ, ಕೋಡಿಯೇರಿ ಬಾಲಕೃಷ್ಣನ್ ಅವರ ಇನ್ನೋರ್ವ ಪುತ್ರ ಬಿನೋಯ್ ಬಾಲಕೃಷ್ಣನ್​ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾರೆ. ಮುಂಬೈನ ಮಾಜಿ ಬಾರ್ ಡ್ಯಾನ್ಸರ್ ಮಹಿಳೆಯೊಬ್ಬಳು ಅತ್ಯಾಚಾರದ ದೂರು ದಾಖಲಿಸಿದ್ದಳು.
ಇದನ್ನೂ ಓದಿ:ಒವೈಸಿ ಎಂಟ್ರಿ: ಮುಸ್ಲಿಂ ಮತದಾರರನ್ನು ಕಳೆದುಕೊಳ್ಳೋ ಟೆನ್ಷನ್​ನಲ್ಲಿ ದೀದಿ!
ಮದುವೆಯಾಗುತ್ತೇನೆಂದು ಭರವಸೆ ನೀಡಿ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಗರ್ಭವತಿ ಮಾಡಿ ವಂಚಿಸಿದನೆಂದು ಆಕೆ ಆರೋಪ ಮಾಡಿದ್ದಾಳೆ. ಆದರೆ, ಮುಂಬೈ ಕೋರ್ಟ್​ವೊಂದರ ಆದೇಶದಂತೆ ಆಕೆಯ ಮಗುವಿನ ಅಪ್ಪನ ಪತ್ತೆಗೆ ಡಿಎನ್​ಎ ಪರೀಕ್ಷೆ ನಡೆಸಲಾಗಿತ್ತು. ಆದರೆ ವಿಚಿತ್ರ ಎಂದರೆ ಪರೀಕ್ಷೆ ನಡೆದು ಎರಡು ವರ್ಷವಾದರೂ ಇನ್ನೂ ವರದಿ ಬಂದಿಲ್ಲ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಯ ನಂತರ ಅವರನ್ನು ರಜೆಯ ಮೇಲೆ ಕಳುಹಿಸಲಾಗಿತ್ತು. ಸರ್ಕಾರ ಅವರನ್ನು ಪೋಷಿಸುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು.
ಇದೀಗ ತಮ್ಮ ಹುದ್ದೆಗೆ ಕೋಡಿಯೇರಿ ರಾಜೀನಾಮೆ ನೀಡಿದ್ದು. ಇದಕ್ಕೆ ಅನಾರೋಗ್ಯದ ಕಾರಣ ನೀಡಿದ್ದಾರೆ. ಲಾಕ್​ಡೌನ್​ಗೆ ಮುನ್ನ ಅವರು ಅಮೆರಿಕದಲ್ಲಿ ಮೂರು ವಾರ ಕಾಲ ಚಿಕಿತ್ಸೆ ಪಡೆದುಕೊಂಡಿದ್ದರು. ಬಾಲಕೃಷ್ಣನ್ ಅವರು ಕೆಲ ಸಮಯದ ಹಿಂದೆ ಕ್ಯಾನ್ಸರ್​ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಕೋಡಿಯೇರಿ ಬಾಲಕೃಷ್ಣನ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಎಲ್​ಡಿಎಫ್ ಸಂಚಾಲಕ ಹಾಗೂ ಮಾಜಿ ಸಂಸದ ಎ ವಿಜಯರಾಘವನ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯಾಗಿ ವಹಿಸಲಾಗಿದೆ.
ಅಂದಹಾಗೆ ಬಾಲಕೃಷ್ಣನ್​ ಅವರು 2015ರಿಂದಲೂ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. 2001ರಿಂದ ಅವರು ಪಕ್ಷದ ಉನ್ನತ ಹುದ್ದೆಗಳನ್ನ ನಿರ್ವಹಿಸಿದ್ದಾರೆ. 2006ರಿಂದ 2011ರವರೆಗೆ ಅವರು ಅಚ್ಯುತಾನಂದನ್ ಅವರ ಸಂಪುಟದಲ್ಲಿ ಗೃಹ ಖಾತೆ ಮತ್ತು ಪ್ರವಾಸೋದ್ಯಮ ಖಾತೆಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.
ರೈಲು ಹಳಿಯ ಮೇಲೆ ಪತ್ರಕರ್ತನ ಶವ- ಲೇಡಿ ಇನ್ಸ್​ಪೆಕ್ಟರ್​ ವಿರುದ್ಧ ಎಫ್​ಐಆರ್​

ಗಡಿಯಲ್ಲಿ ಮತ್ತೆ ಕದನವಿರಾಮ ಉಲ್ಲಂಘನೆ: ನಾಲ್ವರು ಹುತಾತ್ಮ- ಏಳು ಪಾಕ್​ ಸೈನಿಕರು ಹತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
