ಬೆಂಗಳೂರು:ನಟ ಸುದೀಪ್‌ ಅವರ ಅಭಿನಯದ ಕೋಟಿಗೊಬ್ಬ-3 ಸಿನಿಮಾ ಇಂದು ಇಡೀ ರಾಜ್ಯಾದ್ಯಂತ ತೆರೆ ಕಾಣಬೇಕಿತ್ತು. ಆದರೆ ಯಾವ ಚಿತ್ರಮಂದಿರಗಳಲ್ಲಿಯೂ ಇದು ತೆರೆ ಕಾಣದೇ ಸಾವಿರಾರು ಅಭಿಮಾನಿಗಳು ನಿರಾಸರಾಗಿದ್ದಾರೆ. ಕೆಲವೆಡೆ ಭಾರಿ ಪ್ರತಿಭಟನೆ ನಡೆದರೆ, ಇನ್ನು ಕೆಲವೆಡೆ ಅಭಿಮಾನಿಗಳು ಆತ್ಮಹತ್ಯೆ ಬೆದರಿಕೆ ಹಾಕಿರುವ ಘಟನೆಗಳು ನಡೆದಿವೆ. ಇನ್ನು ಕೆಲವೆಡೆ ಪರಿಸ್ಥಿತಿ ವಿಕೋಪಕ್ಕೂ ಹೋಗಿದೆ.
ತಾಂತ್ರಿಕ ದೋಷದಿಂದ ಚಿತ್ರ ಬಿಡುಗಡೆಯಾಗಿಲ್ಲ. ಈ ಕುರಿತಂತೆ ನಟ ಸುದೀಪ್‌ ಹಾಗೂ ನಿರ್ಮಾಪಕ ಸೂರಪ್ಪಬಾಬು ಅವರು ಅಭಿಮಾನಿಗಳ ಕ್ಷಮೆ ಕೋರಿದ್ದಾರೆ. ಈ ಕುರಿತು ಮಾತನಾಡಿರುವ ಸೂರಪ್ಪಬಾಬು, ‘ಇಂದು ಹೀಗೆ ಆಗಲು ಕಾರಣ ಕೆಲವು ವಿತರಕರು ಮಾಡಿದ ಮೋಸ. ಹಲವರು ಷಡ್ಯಂತ್ರ ನಡೆಸಿ ಚಿತ್ರ ಬಿಡುಗಡೆಯನ್ನು ತಡೆದಿದ್ದಾರೆ. ನನ್ನನ್ನು ಕ್ಷಮಿಸಿ. ಇದರಲ್ಲಿ ನಮ್ಮ ತಪ್ಪು ಇಲ್ಲ. ಚಿತ್ರ ಬಿಡುಗಡೆಗೆ ಎಲ್ಲಾ ಪ್ರಯತ್ನ ಮಾಡಲಾಗಿತ್ತು. ಆದರೆ ಷಡ್ಯಂತ್ರದ ಹಿನ್ನೆಲೆಯಲ್ಲಿ ಹೀಗಾಗಿದೆ. ಎಂದಿನಂತೆ ನಾಳೆ ಫ್ಯಾನ್ ಷೋವನ್ನು ಆರಂಭಿಸುತ್ತಿದ್ದೇವೆ ಎಂದಿದ್ದಾರೆ.
ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಬೆಳಗ್ಗೆ 6 ಗಂಟೆಯಿಂದಲೇ ಚಿತ್ರ ಪ್ರದರ್ಶನ ಆರಂಭವಾಗಲಿದೆ. ಎಲ್ಲರೂ ಸಿನಿಮಾ ನೋಡಿ ಹಾರೈಸಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಸುದೀಪ್ ಕೂಡ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದು, ಕೆಲವೊಂದು ವಿಚಾರಗಳಿಂದ ಸಿನಿಮಾದ ಮೊದಲ ಷೋ ವಿಳಂಬವಾಗಿದೆ. ನಾನು ವೈಯಕ್ತಿವಾಗಿ ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಇದರಲ್ಲಿ ಥಿಯೇಟರ್ ಮಾಲೀಕ ತಪ್ಪಿಲ್ಲ. ಹೀಗಾಗಿ ಅಲ್ಲಿ ಅಹಿತರ ಘಟನೆಗಳನ್ನು ನಡೆಸಬೇಡಿ. ಚಿತ್ರಮಂದಿರಗಳಿಗೆ ಹಾನಿ ಮಾಡಬೇಡಿ ಎಂದು ಹೇಳಿದ್ದಾರೆ.
ಇದು ಅತ್ಯಂತ ವಿಚಿತ್ರ ಸನ್ನಿವೇಶವಾಗಿದೆ. ನಿರ್ಲಕ್ಷ್ಯಕ್ಕಾಗಿ ಕ್ಷಮೆಯಾಚಿಸುತ್ತೇನೆ. ಚಿತ್ರ ಬಿಡುಗಡೆಗೆ ನಾನು ಕೂಡ ಉತ್ಸುಕನಾಗಿರುವೆ. ಅಭಿಮಾನಿಗಳು ಶಾಂತಿಯಿಂದ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.
‘ಕೋಟಿಗೊಬ್ಬ’ನ ಕಾಣದೇ ರಾಜ್ಯದೆಲ್ಲೆಡೆ ರೊಚ್ಚಿಗೆದ್ದ ಕಿಚ್ಚನ ಅಭಿಮಾನಿಗಳು- ಆತ್ಮಹತ್ಯೆ ಬೆದರಿಕೆ!

ಸಮಂತಾರಿಂದ ಡಿವೋರ್ಸ್‌ ಬೆನ್ನಲ್ಲೇ ಟ್ವೀಟರ್‌ನಲ್ಲಿ ಕಾಣಿಸಿಕೊಂಡ ನಾಗಚೈತನ್ಯ: ಅಭಿಮಾನಿಗಳಿಗೆ ನಿರಾಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
