ಮುಂಬೈ:ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಅವರು ಬ್ಲೂ ಫಿಲ್ಮ್​ ಹಗರಣದಲ್ಲಿ ಸಿಲುಕಿರುವ ಬೆನ್ನಲ್ಲೇ ಅವರ ಜತೆ ಒಡನಾಟ ಇರುವ ಎಲ್ಲರಿಗೂ ಇದೀಗ ಸಂಕಷ್ಟ ಶುರುವಾಗಿದೆ. ಅವರ ಜತೆಗೆ ವ್ಯವಹರಿಸುತ್ತಿರುವ ನಟ-ನಟಿಯರು ಸೇರಿದಂತೆ ಎಲ್ಲರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.
ಇದೀಗ ಕನ್ನಡ, ಹಿಂದಿ ಸೇರಿದಂತೆ ಕೆಲವು ಭಾಷೆಗಳಲ್ಲಿ ನಟಿಸಿರುವ ನಟಿಯೀಗ ಫ್ಲೋರಾ ಸೈನಿ ಕೂಡ ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಾಜ್ ಕುಂದ್ರಾ ಮತ್ತು ಪೋರ್ನ್​ ವಿಡಿಯೋ ಕೇಸಲ್ಲಿ ಸಿಲುಕಿರುವ ಉಮೇಶ ಕಾಮತ್ ನಡುವೆ ನಡೆದ ವಾಟ್ಸ್​ಆ್ಯಪ್​ ಚಾಟ್ ರೆಕಾರ್ಡ್​ನಲ್ಲಿ ಈ ನಟಿಯ ಹೆಸರು ಉಲ್ಲೇಖವಾಗಿರುವುದೇ ಇದಕ್ಕೆ ಕಾರಣ, ಈ ವಾಟ್ಸ್​ಆ್ಯಪ್​ ಚಾಟ್​ ಅನ್ನು ಹಿಂದಿ ವಾಹಿನಿಯೊಂದು ಬಿಡುಗಡೆ ಮಾಡಿತ್ತು, ಈ ಚಾಟ್​​ನಲ್ಲಿ ಕುಂದ್ರಾ ಮತ್ತು ಕಾಮತ್​ ಇಬ್ಬರೂ ಬೊಲ್ಲಿಫೇಮ್ ಚಿತ್ರದಲ್ಲಿನ ಹಾಡಿಗಾಗಿ ಫ್ಲೋರಾ ಅವರನ್ನು ಆಯ್ಕೆ ಮಾಡಬಹುದೇ ಎಂದು ಚರ್ಚಿಸುತ್ತಿದ್ದಾರೆ ಅಷ್ಟೇ. ಆದರೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ, ಅಯ್ಯೋ ನನ್ನನ್ನು ಬಿಟ್​ಬಿಡಿ. ನನಗೂ ಪೋರ್ನ್ ವಿಡಿಯೋಗಳಿಗೂ ಸಂಬಂಧವಿಲ್ಲ. ನಾನು ಎಂದಿಗೂ ಕುಂದ್ರಾರೊಂದಿಗೆ ಸಂವಹನ ನಡೆಸಿಲ್ಲ. ನಾನು ಸುಮ್ಮನಿದ್ದರೆ, ಜನರು ನಾನು ಏನೋ ಮುಚ್ಚಿಡುತ್ತೇನೆ ಎಂದು ಜನ ಭಾವಿಸುತ್ತಾರೆ. ಅದಕ್ಕೇ ಹೇಳುತ್ತಿದ್ದೇನೆ. ನನಗೂ ಇಂಥ ಅಶ್ಲೀಲ ವಿಡಿಯೋಗಳಿಗೂ ಸಂಬಂಧವಿಲ್ಲ ಎಂದಿದ್ದಾರೆ.
‘ನಾನು ಗಂಧಿ ಬಾತ್ ಎಂಬ ಒಂದು ವೆಬ್ ಸರಣಿ ಮಾಡಿದ್ದೇನೆ, ರಾಜ್ ಕುಂದ್ರಾ ಅವರ ಸಂಸ್ಥೆ ಆರ್ಮ್ಸ್ ಪ್ರೈಮ್ ಮೀಡಿಯಾ ಹಾಟ್ ಶಾಟ್ಸ್ ಆ್ಯಪ್​ಗಾಗಿ ನನ್ನನ್ನು ಸಂಪರ್ಕಿಸಿತ್ತು. ಆದರೆ ಅದನ್ನು ನಾನು ನಿರಾಕರಿಸಿದ್ದೆ ಅಂದಿದ್ದಾರೆ. ಅಂದ ಹಾಗೆ ಫ್ಲೋರಾ ಸೈನಿ ಕನ್ನಡ ಹಿಂದಿ ಸೇರಿ ಹಲವು ಭಾಷೆಗಳ ಚಿತ್ರದಲ್ಲಿ ನಟಿಸಿದ್ದಾರೆ. ಸುದೀಪ್ ಅಭಿನಯದ ‘ನಮ್ಮಣ್ಣ’ ಚಿತ್ರದಲ್ಲಿ, ರವಿಚಂದನ್ ಮತ್ತು ಶಿವರಾಜ್ ಕುಮಾರ್ ಅಭಿನಯದ ಕೋದಂಡ ರಾಮ ಚಿತ್ರದಲ್ಲಿ ಅವರು ನಟಿಸಿದ್ದಾರೆ.
‘ಉಳಿದವ್ರನ್ನ ಬಿಟ್ರು, ಕುಂದ್ರಾರನ್ನ ಹಿಡ್ಕೊಂಡ್ರು… ಅದೇನು ಬ್ಲೂಫಿಲ್ಮ್​ ಅಲ್ಲ, ಸಾಫ್ಟ್​ ಪೋರ್ನ್​ ಅಷ್ಟೇ…’

ಅಕ್ಕ ಬೆಳಗಿನ ಯೋಗದ ಪೋಸ್‌, ಭಾವ ರಾತ್ರಿಯ… ಜಾಲತಾಣದಲ್ಲಿ ಶಮಿತಾ ಶೆಟ್ಟಿ ಟ್ರೋಲ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 5 =
Remember me
