ಲಡಾಖ್‌:ಭಾರತ ಸೇರಿದಂತೆ ಬಹುತೇಕ ರಾಷ್ಟ್ರಗಳಿಂದ ಛೀಮಾರಿ ಹಾಕಿಸಿಕೊಂಡರೂ, ತಲೆ ಮೇಲೆ ಆಕಾಶ ಕಳಜಿಬಿದ್ದರೂ, ಕುತಂತ್ರ ಬುದ್ಧಿಯಿಂದ ಲಡಾಖ್‌ನಲ್ಲಿ ಪುನಃ ಭಾರತದ ಜತೆ ಚೀನಾ ಸಂಘರ್ಷಕ್ಕೆ ಇಳಿದಿದೆ.
ಭಾರತ-ಚೀನಾ ಮಧ್ಯೆ ಪೂರ್ವ ಲಡಾಖ್‌ನ ಗಡಿ ವಾಸ್ತವ ರೇಖೆಯಲ್ಲಿ ಪುನಃ ಉದ್ವಿಗ್ನ ವಾತಾವರಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಅವರು ಲೇಹ್‌ ನಗರವನ್ನು ತಲುಪಿದ್ದಾರೆ.
ಇದನ್ನೂ ಓದಿ:ಇಬ್ಬರು ಭಾರತೀಯರನ್ನು ಉಗ್ರಪಟ್ಟಿಗೆ ಸೇರಿಸುವ ಪಾಕ್​ ಪ್ರಯತ್ನಕ್ಕೆ ಪಂಚ ರಾಷ್ಟ್ರಗಳ ಪಂಚ್​
ಲಡಾಖ್‌ನ ಅತಿದೊಡ್ಡ ನಗರ ಎಂದೇ ಕರೆಸಿಕೊಳ್ಳುತ್ತಿರುವ ಲೇಹ್ ನಗರವನ್ನು ತಲುಪಿರುವ ನರವಣೆ ಅವರು ಉದ್ವಿಗ್ನ ವಾತಾವರಣದ ಕುರಿತು ಪರಾಮರ್ಶೆ ನಡೆಸಲಿದ್ದಾರೆ. ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೇನೆಯ ಭದ್ರತಾ ಸ್ಥಿತಿಗತಿಗಳ ಕುರಿತು ಅವರು ಚರ್ಚಿಸಲಿದ್ದಾರೆ.
ಎರಡು ದಿನಗಳವರೆಗೆ ಸ್ಥಳದಲ್ಲಿ ಇರುವ ಅವರು, ವಸ್ತುಸ್ಥಿತಿಯ ಕುರಿತು ಪರಾಮರ್ಶಿಸಲಿದ್ದಾರೆ. ಗಡಿಯಲ್ಲಿ ಮತ್ತೆ ಉಲ್ಭಣಗೊಂಡಿರುವ ಸ್ಥಿತಿಗತಿ ಬಗ್ಗೆ ಅವರಿಗೆ ಹಿರಿಯ ಕಮಾಂಡರ್‌ಗಳು ವಿವರಿಸಲಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಆಗಸ್ಟ್ 29 ಮತ್ತು 30 ರ ಮಧ್ಯರಾತ್ರಿಯಲ್ಲಿ ಲಡಾಖ್‌ನ ಚುಶುಲ್ ಬಳಿಯ ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೊ ಬಳಿ ಚೀನಾ ಸೈನಿಕರ ಭಾರತದ ಪ್ರದೇಶಗಳಿಗೆ ಅತಿಕ್ರಮಣ ಪ್ರವೇಶ ಮಾಡಲು ಸಂಚುರೂಪಿಸಿದ್ದರು. ಈ ಪ್ರಯತ್ನವನ್ನು ಭಾರತೀಯ ಸೇನೆಯು ವಿಫಲಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ, ಸೇನಾ ಮುಖ್ಯಸ್ಥರು ಭೇಟಿಯಾಗಿದ್ದು, ಸಂಪೂರ್ಣ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಹುಲಿಯಾದ ನಾಯಿ- ಬೇಸ್ತುಬಿದ್ದ ಜನ: ಕುಕೃತ್ಯ ಎಸಗಿದವರ ಹುಡುಕಿಕೊಟ್ಟರೆ ಸೂಕ್ತ ಬಹುಮಾನ

ನಾಲ್ಕು ಲಕ್ಷ ರೂ. ಕೊಟ್ಟು ಒಂದು ಗಿಡ ಖರೀದಿಸಿದ- ಅಷ್ಟಕ್ಕೂ ಏನಿದರ ವಿಶೇಷತೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 4 =
Remember me
