ಚೆನೈ:ತಮಿಳು ನಟ ಅಜಿತ್ ಕುಮಾರ್ ಅವರ ಮನೆಯ ಮುಂದೆ ಖಾಸಗಿ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಕೆಲಸದ ನಿಮಿತ್ತ ನಟನನ್ನು ಭೇಟಿಯಾಗಲು ಬಂದಿದ್ದ ಮಹಿಳೆಗೆ ಅವರು ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಫರ್ಜಾನಾ ಎಂಬ ಮಹಿಳೆ ತೇನಂಪೇಟೆ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ನಟ ಅಜಿತ್ ಮತ್ತು ಅವರ ಪತ್ನಿ ಶಾಲಿನಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ತಮ್ಮ ಆಸ್ಪತ್ರೆಗೆ ನಟ ದಂಪತಿ ಬಂದಿದ್ದನ್ನು ಕಂಡು ಖುಷಿ ತಾಳದೇ ವಿಡಿಯೋ ಮಾಡಿದರು ಫರ್ಜಾನಾ. ನಂತರ ಸಾಮಾಜಿಕ ಜಾಲತಾಣದಲ್ಲಿ ಅದನ್ನು ಅಪ್‌ಲೋಡ್‌ ಮಾಡಿಬಿಟ್ಟರು.
ಅವರ ಗ್ರಹಚಾರ ಕೆಟ್ಟಿತ್ತು. ಈ ರೀತಿಯಾಗಿ ಆಸ್ಪತ್ರೆಗೆ ಬಂದವರ ವಿಡಿಯೋ ಮಾಡುವುದು ಅವರ ಆಸ್ಪತ್ರೆಯ ನಿಯಮದ ವಿರುದ್ಧವಾಗಿದೆ. ಇದೇ ಕಾರಣಕ್ಕೆ ಫರ್ಜಾನಾರನ್ನು ಕೆಲಸದಿಂದ ವಜಾ ಮಾಡಲಾಯಿತು. ನಂತರ ಅವರು ನಟ ದಂಪತಿಯಲ್ಲಿ ಕ್ಷಮೆ ಕೋರಿ ತಮ್ಮ ಕೆಲಸವನ್ನು ವಾಪಸ್‌ ಪಡೆದುಕೊಳ್ಳಲು ಹರಸಾಹಸ ಪಟ್ಟರು.
ಆದರೆ ಅದು ಸಾಧ್ಯವಾಗಿರಲಿಲ್ಲ. ಆದ ಕಾರಣ ಅಜಿತ್‌ ಅವರ ಮನೆಗೆ ಹೋದರು. ಅಲ್ಲಿಯೂ ಅವರ ಭೇಟಿಯಾಗಲಿಲ್ಲ. ಇದರಿಂದ ನೊಂದು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದಾಗ ಅದನ್ನು ನೋಡಿದ ಪೊಲೀಸ್‌ ಸಿಬ್ಬಂದಿ ಬಂದು ನೀರು ಹಾಕಿ ಬೆಂಕಿ ನಂದಿಸಿದ್ದಾರೆ.
ನಂತರ ಅವರನ್ನು ಸಮಾಧಾನ ಮಾಡಿ ಕಳುಹಿಸಿಕೊಡಲಾಗಿದೆ. ಮಹಿಳೆಯ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಎಸ್‌ಎಸ್‌ಎಲ್‌ಸಿ, ಐಟಿಐ ಉತ್ತೀರ್ಣರಿಗೆ ಭರ್ಜರಿ ಅವಕಾಶ: ರೈಲ್ವೆಯಲ್ಲಿ 4 ಸಾವಿರ ಹುದ್ದೆಗಳಿಗೆ ಆಹ್ವಾನ

ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದರೆ ನಗದು ಬಹುಮಾನ: ಕೇಂದ್ರದ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 1 =
Remember me
