ಲಖನೌ:ತಮಗಿಂತ ದೊಡ್ಡವರಿರಲಿ, ಚಿಕ್ಕವರೇ ಇರಲಿ… ಮಹಿಳೆಯರನ್ನು ‘ಆಂಟಿ’ ಎಂದು ಕರೆಯುವುದು ಹಲವು ಊರುಗಳಲ್ಲಿ ಮಾಮೂಲು. ಅದು ಮಹಿಳೆಯರಿಗೆ ಕೊಡುವ ಗೌರವ ಎಂದು ಅವರು ಅಂದುಕೊಂಡಿರಲಿಕ್ಕೆ ಸಾಕು.
ಅಜ್ಜ-ಅಜ್ಜಿಯಂತೆ ಇರುವವರು ಕೂಡ ತಮ್ಮ ಮಗಳ ವಯಸ್ಸಿನವರನ್ನೂ ಆಂಟಿ ಎಂದು ಕರೆದಾಗ ‘ಆಂಟಿ’ ಸಂಪ್ರದಾಯ ಇಲ್ಲದ ಊರಿನಲ್ಲಿ ಬೆಳೆದವರಿಗೆ ಇರುಸು- ಮುರುಸು, ಕಿರಿಕಿರಿ ಎನ್ನಿಸದೇ ಇರಲಾರದು. ಆದರೂ ಹೋಗಲಿ ಬಿಡು ಎಂದು ಹಲವರು ಎಂದುಕೊಂಡರೆ, ಇನ್ನು ಕೆಲವರು ಕಣ್ಣು ಕೆಂಪಗೆ ಮಾಡಿಕೊಂಡು ಬರುತ್ತಾರೆ.
यूपी के एटा में आंटी कहने पर भड़की महिला, करवा चौथ की खरीददारी छोड़ बाल पकड़कर पीटा#UttarPradeshpic.twitter.com/yIr9werUzW
— Hindustan (@Live_Hindustan)November 3, 2020

ಆದರೆ ಇಲ್ಲಿ ಮಾತ್ರ ಹಾಗಾಗಲಿಲ್ಲ. ಸುಮಾರು 40 ವರ್ಷ ಪ್ರಾಯದ ಮಹಿಳೆಯೊಬ್ಬಳಿಗೆ ತನ್ನನ್ನು ಹುಡುಗಿಯೊಬ್ಬಳು ಆಂಟಿ ಎಂದು ಕರೆದಾಗ ಸಹಿಸಲಾರದ ಕೋಪ ಬಂತು. ತಡೆ ಮಾಡಲೇ ಇಲ್ಲ… ಆಂಟಿ ಎಂದು ಕೂಗಿದ ಹುಡುಗಿಯ ಜುಟ್ಟು ಹಿಡಿದು ಹಿಗ್ಗಾಮುಗ್ಗ ಥಳಿಸಿದಳು. ನಂತರ ಎಲ್ಲರೂ ನೆರವಿಗೆ ಬಂದು ಈ ಮಹಿಳೆಯ ಹಿಡಿತವನ್ನು ತಪ್ಪಿಸುವಲ್ಲಿ ಸುಸ್ತೋ ಸುಸ್ತಾದರು.
ಅಷ್ಟಕ್ಕೂ ಈ ಹುಡುಗಿ ಚಿಕ್ಕವಳೇ ಆಗಿದ್ದಳು. ಆದರೆ ಆ ಮಹಿಳೆಗೆ ಮಾತ್ರ ಈ ಶಬ್ದದ ಮೇಲೆ ವಿಪರೀತ ಕೋಪ ಇತ್ತೆಂತು ಕಾಣಿಸುತ್ತದೆ. ಆಕೆಯ ಕೂದಲನ್ನು ಹಿಡಿದು ಎಳೆದಾಡಿಬಿಟ್ಟಳು. ಹುಡುಗಿ ಎಷ್ಟು ಬೊಬ್ಬೆ ಹೊಡೆದರೂ ಈಕೆ ಕೇಳಿಸಿಕೊಳ್ಳಲಿಲ್ಲ. ನಂತರ ಇವರನ್ನು ಬಿಡಿಸಲು ಲೇಡಿ ಪೊಲೀಸೇ ಬರಬೇಕಾಯ್ತು!
ಈ ಮಹಿಳೆ ಹಾಗೂ ಹುಡುಗಿ ಶಾಪಿಂಗ್‌ಗೆ ಬಂದಾಗ ಘಟನೆ ನಡೆದಿದೆ. ಇದು ನಡೆದಿರುವುದು ಉತ್ತರ ಪ್ರದೇಶದ ಇತಾನ ಬಾಬುಗಂಜ್ ಮಾರುಕಟ್ಟೆ ಬಳಿ. ಇದರ ಮಜಾ ನೋಡುತ್ತಿದ್ದ ಕೆಲವರು ಇದರ ವಿಡಿಯೋ ಮಾಡಿದ್ದು, ಅದೀಗ ವೈರಲ್‌ ಆಗಿದೆ.ಸದ್ಯ ಪೊಲೀಸ್‌ ಬಂದುದ್ದರಿಂದ ಸಮಸ್ಯೆ ಬಗೆಹರಿದಿದೆ. ಸದ್ಯ ಯಾವುದೇ ಕೇಸ್‌ ದಾಖಲು ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕೆಫೆ ಕಾಫಿ ಡೇ ಕೇಸ್‌: ಬಂಧನದ ಭೀತಿಯಲ್ಲಿ ಮಾಜಿ ಸಿಎಂ ಪುತ್ರಿ!

ನೀನೂ ಬೇಡ, ಡಿವೋರ್ಸೂ ಕೊಡಲ್ಲ ಅಂತಿದ್ದಾಳೆ… ನನಗೇನು ಪರಿಹಾರವಿದೆ?

ಕಾಲೇಜು ಬೋಧಕರಿಗೆ ವರ್ಕ್‌ ಫ್ರಂ ಹೋಂ: ಸರ್ಕಾರದ ಆದೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − four =
Remember me
