ಚೆನ್ನೈ:ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವಕನೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದ ಉತ್ತರಾಖಾಂಡದ ಹರಿದ್ವಾರದ ಯುವತಿಯೊಬ್ಬಳು ಮದುವೆಯ ಹಿಂದಿನ ದಿನ ಮನೆಯಿಂದ ಎಸ್ಕೇಪ್‌ ಆಗಿ ತಮಿಳುನಾಡಿನವರೆಗೆ ಬಂದಿರುವ ಘಟನೆ ನಡೆದಿದೆ.
ಹರಿದ್ವಾರದ ಯುವತಿಗೆ ಫೇಸ್‌ಬುಕ್‌ನಲ್ಲಿ ಚೆನ್ನೈನ ಯುವಕನ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಯುವತಿಗೆ ಬೇರೆ ಯುವಕನ ಜತೆ ಮದುವೆಯನ್ನು ಪಾಲಕರು ಗೊತ್ತುಮಾಡಿದ್ದಾರೆ. ಮುಹೂರ್ತ ಕೂಡ ನಿಗದಿಯಾಗಿತ್ತು.
ಇದರಿಂದ ಆತಂಕಗೊಂಡ ಯುವತಿ, ಮದುವೆಯ ಹಿಂದಿನ ದಿನವೇ ಮನೆಯಿಂದ ಓಡಿ ಟ್ರೇನ್‌ ಹತ್ತಿ ಬಂದುಬಿಟ್ಟಿದ್ದಾಳೆ. ಮದುಮಗಳಿಗಾಗಿ ಮನೆಯವರು ಹುಡುಕಾಟ ನಡೆಸಿ ಗಾಬರಿಯಾಗಿದ್ದಾರೆ. ಎಲ್ಲಿಯೂ ಆಕೆ ಸಿಗದಾದಾಗ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ನಂತರ ಪೊಲೀಸ್‌ ವಿಚಾರಣೆ ವೇಳೆ ಆಕೆ ಸದಾ ಮೊಬೈಲ್‌ನಲ್ಲಿ ತಲ್ಲೀನ ಆಗಿರುವುದು, ಆಗ ಆಕೆಯ ನಡವಳಿಕೆಯಲ್ಲಿ ಬದಲಾವಣೆ ಆಗುತ್ತಿದ್ದ ವೇಳೆ ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಆಕೆಯ ಫೇಸ್​​ಬುಕ್​ ಅಕೌಂಟ್​ ಚೆಕ್‌ ಮಾಡಲಾಗಿದೆ. ಇದರಲ್ಲಿ ತಮಿಳುನಾಡಿನ ಯುವಕನ ಜತೆ ಪ್ರೀತಿಯ ಮಾತುಕತೆ ನಡೆಸಿರುವುದು ತಿಳಿದಿದೆ.
ಇದರ ಆಧಾರದ ಮೇಲೆ ಪೊಲೀಸರು ಸಾಕಷ್ಟು ತನಿಖೆ ನಡೆಸಿ, ತಮಿಳುನಾಡಿನಲ್ಲಿರುವ ಆ ಯುವಕನ ಮನೆಯನ್ನು ಪತ್ತೆ ಮಾಡಿ, ಅಲ್ಲಿಗೆ ತೆರಳಿ ಯುವತಿಯನ್ನು ವಾಪಸ್‌ ಕರೆದುಕೊಂಡು ಬಂದಿದ್ದಾರೆ.
ಪಿಸ್ತೂಲ್‌ ಹಿಡಿದು ಸರ್ಕಾರಿ ಕಚೇರಿಯಲ್ಲಿ ಪೋಸ್‌ ಕೊಟ್ಟ ಟಿಎಂಸಿ ನಾಯಕಿ! ಪಕ್ಷಕ್ಕೆ ಭಾರಿ ಮುಜುಗರ

ಕನ್ಯೆ ನೋಡುವ ಖುಷಿಯಲ್ಲಿದ್ದ ಕಾನ್ಸ್‌ಟೆಬಲ್‌ ಜೀವ ಕಸಿದ ಜವರಾಯ! ಕನಸುಹೊತ್ತು ಮನೆಗೆ ತೆರಳುತ್ತಿದ್ದಾಗ ಅಪಘಾತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − three =
Remember me
