ಹೈದರಾಬಾದ್:ಚಲಿಸುತ್ತಿದ್ದ ರೈಲನ್ನು ಹತ್ತುವ ಭರದಲ್ಲಿ ಅಥವಾ ರೈಲು ಚಲಿಸುತ್ತಿರುವಾಗಲೇ ಇಳಿಯುವ ಅವಸರದಲ್ಲಿ ಪ್ರಾಣವನ್ನು ಕಳೆದುಕೊಳ್ಳುವವರು ಇದ್ದಾರೆ. ಅಂಥದ್ದೇ ಒಂದು ಘಟನೆ ಇಲ್ಲಿಯೂ ನಡೆಯುತ್ತಿತ್ತು. ಆದರೆ ಅಲ್ಲಿದ್ದ ಲೇಡಿ ಪೊಲೀಸ್​ ಒಬ್ಬರು ವ್ಯಕ್ತಿಯ ಪ್ರಾಣವನ್ನು ಕಾಪಾಡಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕಾಲುಜಾರಿ ಕೆಳಗೆ ಬಿದ್ದ ವ್ಯಕ್ತಿ ಪ್ರಾಣವನ್ನು ರೈಲ್ವೆ ರಕ್ಷಣಾ ಪಡೆಯ ಮಹಿಳಾ ಕಾನ್ಸ್‌ಟೆಬಲ್ ಉಳಿಸಿದ್ದಾರೆ. ಈ ಕುರಿತು ರೈಲ್ವೆ ಸಚಿವಾಲಯವು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಮಹಿಳಾ ಕಾನ್ಸ್‌ಟೆಬಲ್ ಕಾರ್ಯವನ್ನು ಶ್ಲಾಘಿಸಿದೆ. ಪರರ ಪ್ರಾಣವನ್ನು ಉಳಿಸುವುದು ಮೊದಲ ಕರ್ತವ್ಯ ಎಂದು ಶೀರ್ಷಿಕೆ ನೀಡಲಾಗಿದೆ.
Serving Humanity First:
An alert RPF woman constable of "Meri Saheli" team at Visakhapatnam Railway station rescued a passenger falling under a moving train.The episode was caught on the body-worn camera of RPF personnel.pic.twitter.com/05FJvP8Xju
— Ministry of Railways (@RailMinIndia)February 10, 2021

ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲನ್ನು ಏರಲು ಮುಂದಾಗಿ ಕಾಲು ಜಾರಿ ಕೆಳಗೆ ಬೀಳುತ್ತಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ಮಹಿಳಾ ಕಾನ್ಸ್‌ಟೆಬಲ್ ಓಡಿ ಹೋಗಿ ಪ್ರಯಾಣಿಕನನ್ನು ಹಿಂದಕ್ಕೆ ಎಳೆದುಕೊಳ್ಳುತ್ತಾರೆ. ಇಲ್ಲದಿದ್ದರೆ ಆ ಪ್ರಯಾಣಿಕ ರೈಲಿನ ಅಡಿ ಆಗಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇತ್ತು.
ಮಹಿಳಾ ಕಾನ್ಸ್‌ಟೆಬಲ್ ಅವರನ್ನು ಮೇರಿ ಸಾಹೇಲಿ ಎಂದು ಗುರುತಿಸಲಾಗಿದ್ದು, ಆರ್​ಪಿಎಫ್​ ಕಾನ್ಸ್​ಟೆಬಲ್​ ಆಗಿರುವ ಮೇರಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಶ್ಲಾಘನೆ ವ್ಯಕ್ತವಾಗಿದೆ. ಚಲಿಸುವ ರೈಲನ್ನು ಹತ್ತುವಾಗ ಹಾಗೂ ಇಳಿಯುವಾಗ ಎಷ್ಟು ಜಾಗೃತರಾಗಿರಬೇಕು ಎನ್ನುವುದನ್ನು ಈ ವಿಡಿಯೋ ತೋರಿಸುತ್ತದೆ. ಎಲ್ಲರಿಗೂ ಈ ಪ್ರಯಾಣಿಕನಂತೆ ಅದೃಷ್ಟ ಸಿಗದೇ ಹೋಗಬಹುದಲ್ಲವೆ?
ರೈತ ಮುಖಂಡರಿಂದ ಜೀವಕ್ಕೆ ಅಪಾಯವಿದೆ- ಹಿಂಸಾಚಾರದ ಕುರಿತು ನಟ ದೀಪ್​ ಸಿಧು ಹೇಳಿರುವ ಮಾಹಿತಿ ಇಲ್ಲಿದೆ…

ಮುದ್ದು ಕಂದನ ಜೀವ ಉಳಿಸಲು ₹6 ಕೋಟಿ ಜಿಎಸ್​ಟಿ ಮನ್ನಾ ಮಾಡಿದ ಪ್ರಧಾನಿ ಮೋದಿ

ರೈತರ ವಿಷಯದಲ್ಲಿ ಮೋದಿ ವಿರುದ್ಧ ಹೇಳಿಕೆ ನೀಡಿದ್ದ ಕೆನಡಾ ಪ್ರಧಾನಿ ಮಾಡಿಕೊಂಡರೊಂದು ಕಳಕಳಿಯ ಮನವಿ…

ಕಾರಿನ ಹ್ಯಾಂಡ್​ಬ್ರೇಕ್​ ಹಾಕದೇ ಮೂತ್ರವಿಸರ್ಜನೆಗೆ ಹೋದ ಚಾಲಕ- ನಾಲ್ವರ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
