ಮೀರತ್ (ಉತ್ತರ ಪ್ರದೇಶ): ಯಾವುದ್ಯಾವುದೋ ದ್ವೇಷದಿಂದಾಗಿ ಕೊಲೆ ನಡೆಯುವುದು ಸಹಜ. ಆದರೆ ಇಲ್ಲೊಬ್ಬ ತಮ್ಮ ಮನೆಯಲ್ಲಿರುವ ನಾಯಿಗೆ ರೊಟ್ಟಿ ಮಾಡಿಕೊಡಲು ನಿರಾಕರಿಸಿದ ಅಕ್ಕನನ್ನೇ ಗುಂಡಿಕ್ಕಿ ಕೊಂದಿರುವ ವಿಚಿತ್ರ ಘಟನೆ ನಡೆದಿದೆ. ಇದು ನಡೆದಿರುವುದು ಉತ್ತರ ಪ್ರದೇಶದ ಮೀರತ್​ನ ಗಂಗಾಸಾಗರ್ ಬಳಿಯ ಕೈಲಾಸ್​ ವಟಿಕಾ ಪ್ರದೇಶದಲ್ಲಿ.
ಆಶಿಶ್​ ಎಂಬ 26 ವಯಸ್ಸಿನ ಕುದುವೆ ವ್ಯಾಪಾರಿ ಈ ಕೃತ್ಯ ಎಸಗಿದ್ದಾನೆ. ಅಕ್ಕನನ್ನು ಕೊಂದ ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿರುವ ಈಗ ತಾನು ಮಾಡಿರುವ ಕೃತ್ಯದ ಬಗ್ಗೆ ವಿವರಿಸಿದ್ದಾನೆ. ಮನೆಗೆ ಬಂದ ಪೊಲೀಸರು ಅವನನ್ನು ಬಂಧಿಸಿದ್ದು, ಅಕ್ಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ:ಟ್ವಿಟರ್​ ಬಳಸಿ 9 ಕೊಲೆ ಮಾಡಿದ್ದ ಈತ! ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​; ಟ್ವಿಟರ್​ ಕಿಲ್ಲರ್​ನ ವಿಚಿತ್ರ ಕಥೆ ಇಲ್ಲಿದೆ…
ಸೋಮವಾರ ರಾತ್ರಿ, ಆಶಿಶ್ ಮನೆಯಲ್ಲಿರುವ ಸಾಕು ನಾಯಿಗೆ ರೊಟ್ಟಿ ಮಾಡಿಕೊಡಲು ಹೇಳಿದ್ದಾನೆ. ಆದರೆ ಆತನ ಅಕ್ಕ ಬೇರೆ ಕೆಲಸದಲ್ಲಿ ನಿರತರಾಗಿದ್ದ ಹಿನ್ನೆಲೆಯಲ್ಲಿ ರೊಟ್ಟಿ ತಯಾರಿಸಲು ನಿರಾಕರಿಸಿದ್ದಾಳೆ. ಇಷ್ಟೇ ಕಾರಣ. ಕೋಪದಿಂದ ಕುದಿಯುತ್ತಿದ್ದ ತಮ್ಮ ಅಲ್ಲಿಯೇ ಇರುವ ಗನ್‌ ತೆಗೆದು ಆಕೆಯ ತಲೆಗೆ ಗುಂಡು ಹಾರಿಸಿದ್ದಾನೆ, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಅಷ್ಟು ಹೊತ್ತಿಗೆ ತಾನೇ ಖುದ್ದು ಪೊಲೀಸರಿಗೆ ಕರೆ ಮಾಡಿರುವ ಆತ, ಮನೆಗೆ ಬರಲು ಹೇಳಿದ್ದಾನೆ. ಅಷ್ಟೊತ್ತಿಗಾಗಲೇ ಗುಂಡಿನ ಶಬ್ದಕ್ಕೆ ಬೆಚ್ಚಿಬಿದ್ದಿದ್ದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದಾರೆ. ಇವರ ತಾಯಿ ಕೆಲಸದ ನಿಮಿತ್ತ ಹೊರಕ್ಕೆ ಹೋದವರು ಮನೆಗೆ ಬಂದಾಗ ಮಗಳ ಶವ ನೋಡಿ ತತ್ತರಿಸಿ ಹೋಗಿದ್ದಾರೆ. ಸದ್ಯ ಆಶೀಶ್​ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗುಪ್ತಾಂಗದಲ್ಲಿ ತುರಿಕೆ, ಮೂತ್ರ ವಿಸರ್ಜನೆಯಲ್ಲಿ ಉರಿ- ಸಮಸ್ಯೆಯಾದರೆ ಹೀಗೆ ಮಾಡಿ…

ಉಲ್ಟಾ ಹೋದ ಮದುಮಗನ ಕುರ್ತಾ ಎಳೆದ ವಧು- ಫನ್ನಿ ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + 1 =
Remember me
