ಸೈನ್‌ಪುರ (ಪಂಜಾಬ್​):ರೌಡಿ ಎನ್ನುವ ಕಾರಣಕ್ಕೆ ಮದುವೆಯಾಗಿಲ್ಲ ಎಂದು ಸೋದರ ಮಾವನ ಮಗಳನ್ನೇ ಪಾಗಲ್​ ಪ್ರೇಮಿ ಹತ್ಯೆ ಮಾಡಿರುವ ಭಯಾನಕ ಘಟನೆ ಪಂಜಾಬ್‌ನ ಸೈನ್‌ಪುರ ಗ್ರಾಮದಲ್ಲಿ ನಡೆದಿದೆ.
ಹಲವಾರು ಕ್ರಿಮಿನಲ್​ ಚಟುವಟಿಕೆಗಳಲ್ಲಿ ಆರೋಪಿಯಾಗಿರುವ ರಾಹುಲ್‌, ಜೈಲಿನಲ್ಲಿದ್ದ. ಅವನಿಗೆ ಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಜಾಮೀನಿನ ಮೇಲೆ ಹೊರಕ್ಕೆ ಬಂದು ಈತ ಈ ಕೃತ್ಯ ಎಸಗಿದ್ದಾನೆ. ಈತನ ಈ ದುಷ್ಕೃತ್ಯಕ್ಕೆ ಬಲಿಯಾದವರು ಪೂಜಾ ಎಂಬ ಯುವತಿ.
ರೌಡಿಯಾಗಿದ್ದೂ ಅಲ್ಲದೇ ಜೈಲಿಗೆ ಹೋಗಿರುವ ಈತನನ್ನು ಮದುವೆಯಾಗಲು ಪೂಜಾ ನಿರಾಕರಿಸಿದ್ದಾರೆ. ಜೈಲಿನಿಂದ ಬರುತ್ತಿದ್ದಂತೆಯೇ ರಾಹುಲ್​ ಮದುವೆಗೆ ದುಂಬಾಲು ಬಿದ್ದರೂ ಆಕೆ ಕೇಳಲಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದಾನೆ. ಪೂಜಾಳ ಮನೆಗೆ ನುಗ್ಗಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪೂಜಾಳ ಅಣ್ಣ, ರಾಹುಲ್​ಗೆ ಕ್ರಿಮಿನಲ್‌ ಹಿನ್ನೆಲೆಯಿತ್ತು. ಹೀಗಾಗಿ ಆತನನ್ನು ಮದುವೆಯಾಗಲು ಪೂಜಾ ನಿರಾಕರಿಸಿದ್ದಳು. ಆರೋಪಿಗಳ ವಿರುದ್ಧ ಪೊಲೀಸ್‌ ಆಡಳಿತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಪ್ರಕರಣ ದಾಖಲಾಗಿದೆ. ಆರೋಪಿ ಕೊಲೆಯಾದ ಯುವತಿಯ ಮನೆಯ ಹತ್ತಿರ ಸುಳಿದಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುತ್ತಾತ, ತಾತ, ಅಪ್ಪ, ಮಕ್ಕಳು, ಮೊಮ್ಮಕ್ಕಳು… ಎಲ್ಲ ಸತ್ತರೂ ಕೋರ್ಟ್​ನಲ್ಲಿ ಮುಗಿದಿಲ್ಲ ಈ ಕೇಸು!

ಹನಿಮೂನ್​ಗೂ ನಮ್ದೇ ದುಡ್ಡು ತಗೊಂಡ ಮಗ ಈಗ ಬರೀ ಹೆಂಡ್ತಿ ಮಾತು ಕೇಳ್ತಾನೆ: ಕೋರ್ಟ್​ಗೆ ಅಮ್ಮನ ಅರ್ಜಿ

ಮದರಾಸಾಗಳಲ್ಲಿ ಇನ್ಮುಂದೆ ರಾಷ್ಟ್ರಗೀತೆ ಕಡ್ಡಾಯ: ಮೊದಲು ಜನ ಗಣ ಮನ, ನಂತರ ಕಲಿಕೆ ಎಂದ ಯುಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
