ಬರೇಲಿ (ಉತ್ತರ ಪ್ರದೇಶ):ತನ್ನ ಗೆಳೆಯ ತನ್ನ ಸಲುವಾಗಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟನೆಂದು ತಿಳಿದುಕೊಂಡ 17 ವರ್ಷದ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.
ದೇವಿದಾಸ್ ಎನ್ನುವವರ ಪುತ್ರಿ ಇಂಥದ್ದೊಂದು ಕೃತ್ಯ ಎಸಗಿದ್ದಾಳೆ. ಆಗಿದ್ದೇನೆಂದರೆ, ಯುವತಿ ಕಾಲೇಜಿನಲ್ಲಿ ಕಲಿಯುತ್ತಿದ್ದಳು. ಈಕೆ ಅಲೋಕ್ ನಗರದ ಯುವಕ ಸಂಚಿತ್ ಅರೋರಾ ಎಂಬುವವನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೇಮ ವರ್ಷಗಟ್ಟಲೆ ಮುಂದುವರೆದಿದೆ.
ಇವರು ವಾಟ್ಸ್​ಆ್ಯಪ್​ ಚಾಟಿಂಗ್​ ಮಾಡುತ್ತಿದ್ದರು, ಫೋನ್​ನಲ್ಲಿ ಮಾತನಾಡುತ್ತಿದ್ದರು. ಕೆಲ ದಿನಗಳ ಹಿಂದೆ ಇಬ್ಬರ ನಡುವೆ ಸಣ್ಣದೊಂದು ಜಗಳವಾಗಿದೆ. ಸಂಚಿತ್​ ಎಷ್ಟು ಕರೆ ಮಾಡಿದರೂ ಯುವತಿ ಕಾಲ್​ ರಿಸೀವ್​ ಮಾಡಲಿಲ್ಲ. ಮೆಸೇಜ್​ಗೆ ರಿಪ್ಲೈ ಮಾಡಲಿಲ್ಲ. ವಿಡಿಯೋ ಕಾಲ್​ ಮಾಡಿದರೂ ಅದನ್ನು ರಿಸೀವ್​ ಮಾಡಲಿಲ್ಲ. ಇದರಿಂದ ಬೇಸತ್ತ ಸಂಚಿತ್ ನೀನು ಹೀಗೆ ರಿಪ್ಲೈ ಮಾಡದೇ ಹೋದರೆ ನಾನು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾನೆ.
ಇದಾದ ಮರುದಿನ ಯುವತಿ ಆತನಿಗೆ ಕರೆ ಮಾಡಿದ್ದಾಳೆ. 40ಕ್ಕೂ ಅಧಿಕ ಬಾರಿ ಕರೆ ಮಾಡಿದರೂ ಯುವಕ ಫೋನ್​ ರಿಸೀವ್​ ಮಾಡಲಿಲ್ಲ. ಆಗ ಹೆದರಿದ ಯುವತಿ, ಆತ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ನಿರ್ಧಾರಕ್ಕೆ ಬಂದುಬಿಟ್ಟಿದ್ದಾಳೆ. ತನ್ನಿಂದಾಗಿ ಯುವಕ ಸತ್ತುಹೋದ ಎಂದು ಅಂದುಕೊಂಡು ತುಂಬಾ ನೊಂದುಕೊಂಡ ಯುವತಿ ವಿಷ ಸೇವಿಸಿದ್ದಾಳೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಆಕೆ ಸ್ಪಂದಿಸದೇ ಮೃತಪಟ್ಟಿದ್ದಾಳೆ. ಸಾಯುವ ಮುನ್ನ ವಿಷಯವನ್ನು ತಿಳಿಸಿದ್ದಾಳೆ.
ಯುವತಿ ಮೃತಪಟ್ಟ ಸುದ್ದಿ ಸಂಚಿತ್​ಗೆ ಗೊತ್ತಿರಲಿಲ್ಲ. ತಾನು ಬೇರೊಂದು ಕೆಲಸದಲ್ಲಿ ಬಿಜಿ ಇದ್ದುದರಿಂದ ಫೋನ್​ ರಿಸೀವ್​ ಮಾಡಲು ಸಾಧ್ಯವಾಗಲಿಲ್ಲ ಎಂದು ಆತ ಮೆಸೇಜ್​ ಮಾಡಿದ್ದಾನೆ. ಆದರೆ ಅದಾಗಲೇ ಯುವತಿ ಇಹಲೋಕ ತ್ಯಜಿಸಿ ಆಗಿತ್ತು. ದುಡುಕಿನ ನಿರ್ಧಾರದಿಂದ ಯುವತಿ ಪ್ರಾಣ ಕಳೆದುಕೊಂಡಳು. ಈಗ ಆಕೆಯ ಪಾಲಕರು ಸಂಚಿತ್​ ವಿರುದ್ಧ ಕೇಸ್​ ದಾಖಲು ಮಾಡಿದ್ದಾರೆ.
ಉದ್ಯೋಗಸ್ಥ ಮಗ ಸತ್ತರೆ ಪಿಂಚಣಿ ಹಣದಲ್ಲಿ ಯಾರಿಗೆ ಹಕ್ಕು ಇದೆ?ಕಾನೂನು ಹೀಗೆ ಹೇಳಿದೆ…

ಕೋರ್ಟ್​ ಮೆಟ್ಟಿಲೇರಲಾಗದ ವೃದ್ಧೆಯ ಬಳಿ ಬಂದು ವಿಚಾರಣೆ ನಡೆಸಿದ ನ್ಯಾಯಾಧೀಶ: ಉಡುಪಿಯಲ್ಲಿ ಕುತೂಹಲದ ಘಟನೆ

ಕರ್ನಾಟಕದ ಖಜಾನೆಯಲ್ಲಿ ಕೊಳೀತಿದೆ ಜಯಲಲಿತಾ ಸೀರೆ, ಚಪ್ಪಲಿ, ಶಾಲು! ಹರಾಜಿಗೆ ಕೋರಿ ಸುಪ್ರೀಂಗೆ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + nine =
Remember me
