ಬಾಲ್‌ಸೋರ್‌ (ಒಡಿಶಾ):ಮಗಳನ್ನು ಕೊಲೆ ಮಾಡಲು ಹೆತ್ತ ತಾಯಿಯೇ ಸುಪಾರಿ ನೀಡಿರುವ ಘಟನೆಯೊಂದು ಒಡಿಶಾದ ಬಾಲ್‌ಸೋರ್‌ನಲ್ಲಿ ನಡೆದಿದೆ. 50 ಸಾವಿರ ರೂಪಾಯಿಗಳನ್ನು ಕೊಲೆ ಮಾಡಲು ಈಕೆ ನೀಡಿದ್ದಾಳೆ ಎನ್ನಲಾಗಿದೆ.
36 ವರ್ಷದ ಮಗಳು ಶಿವಾನಿ ಕೊಲೆಯಾದವಳು. ಈಕೆಯ ಶವ ಅನುಮಾನಾಸ್ಪದವಾಗಿ ಪೊಲೀಸರಿಗೆ ಸಿಕ್ಕಿತ್ತು. ನಾಗ್ರಾಮ್​ ಗ್ರಾಮದ ಸೇತುವೆಯಲ್ಲಿ ಶಿವಾನಿಯ ಶವ ಪತ್ತೆಯಾಗಿತ್ತು . ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿತ್ತು;
ಅದರ ಬೆನ್ನತ್ತಿ ಹೋದಾಗ ತಾಯಿಯೇ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ. ಸದ್ಯ 58 ವರ್ಷದ ಸುಕುರಿ ಎನ್ನುವ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಸುಪಾರಿ ಪಡೆದಿದ್ದ ಪ್ರಮೋದ್​ ಜೆನಾ ಎಂಬ ವ್ಯಕ್ತಿಯನ್ನೂ ಬಂಧಿಸಿದ್ದಾರೆ.
ಅಷ್ಟಕ್ಕೂ ಇಂಥದ್ದೊಂದು ಕೃತ್ಯವನ್ನು ಮಾಡಲು ಕಾರಣ ಎಂದರೆ ಈ ಮಹಿಳೆಯ 36 ವರ್ಷದ ಮಗಳು ಶಿವಾನಿ ನಾಯಕ್​ ಅಕ್ರಮ ಮದ್ಯ ವ್ಯಾಪಾರದಲ್ಲಿ ಭಾಗಿಯಾದ್ದಳು ಎನ್ನುವ ಕಾರಣಕ್ಕೆ. ಈಕೆ ಇಂಥ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವುದು ಪೊಲೀಸರಿಗೆ ತಿಳಿದುಬಂದಿದೆ. ಇದೇ ವಿಷಯವಾಗಿ ಅಮ್ಮ-ಮಗಳಿಗೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಮಗಳಿಗೆ ಎಷ್ಟೇ ಬುದ್ಧಿ ಹೇಳಲು ಪ್ರಯತ್ನಿಸಿದರೂ ಆಕೆ ಕೇಳದಿದ್ದ ಕಾರಣಕ್ಕೆ ಮಗಳನ್ನೇ ಕೊಲ್ಲುವ ನಿರ್ಧಾರಕ್ಕೆ ತಾಯಿ ಬಂದಿರುವುದಾಗಿ ಬಾಲ್‌ಸೋರ್​ ಸದರ್​ ಉಪವಿಭಾಗದ ಪೊಲೀಸ್​ ಅಧಿಕಾರಿ ಪ್ರವಾಶ್​ ಪಾಲ್​ ಮಾಹಿತಿ ನೀಡಿದ್ದಾರೆ.
ತನ್ನ ಮಗಳನ್ನ ಅಕ್ರಮ ಮದ್ಯ ವ್ಯಾಪಾರ ಮಾಡದಂತೆ ತಡೆಯಲು ತಾಯಿ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ಇದರಿಂದಾಗಿ ಆಕೆ ಪ್ರಮೋದ್​​ನನ್ನ ಸಂಪರ್ಕಿಸಿ 50 ಸಾವಿರ ರೂಪಾಯಿಗೆ ಸುಪಾರಿ ನೀಡಿ ಕೊಲೆ ಮಾಡಲು ಹೇಳಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮುಂಗಡವಾಗಿ 8 ಸಾವಿರ ರೂಪಾಯಿ ನೀಡಿದ್ದಳು. ಇನ್ನಷ್ಟೇ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ ಎಂದಿದ್ದಾರೆ ಪಾಲ್‌.
VIDEO: ಹೆಡ್‌ಫೋನ್‌ನಿಂದ ಕುತ್ತು: ಮಹಿಳೆ ಮೇಲೆ ಹತ್ತಿದ ರೈಲು- ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ

ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡು ಮಗನನ್ನೇ ಮದುವೆಯಾಗಿ ಆತನ ಮಗುವನ್ನು ಹೆತ್ತಳೀ ತಾಯಿ!

13 ಸಾವಿರ ಕಿ.ಮೀ ಹಾರಿಬಂದ ‘ಜೋ ಬೈಡೆನ್‌‘ ಪಾರಿವಾಳಕ್ಕೆ ಮರಣದಂಡನೆ ಭೀತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
