ಹೈದರಾಬಾದ್:ಗಂಡನ ವರದಕ್ಷಿಣೆ ಕಿರುಕುಳ ತಾಳಲಾರದೆ ವೈದ್ಯೆಯಾಗಿದ್ದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೈದರಾಬಾದ್‌ನ ಮಲಕಪೇಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಮನಕಲಕುವ ಘಟನೆ ನಡೆದಿದೆ.
ಗಂಡನೂ ಡಾಕ್ಟರ್​, ಪತ್ನಿಯೂ ಡಾಕ್ಟರ್​. ಹೀಗಿದ್ದರೂ ಗಂಡನ ಹಣದ ದಾಹ ನಿಲ್ಲಲಿಲ್ಲ. ಪದೇ ಪದೇ ತವರಿನಿಂದ ಇನ್ನಷ್ಟು ಹಣವನ್ನು ತರುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಪತ್ನಿ ಡಾ. ಸಪ್ನಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ನಲ್ಗೊಂಡದ ದಾಮರಚಾರ್ಲವಾಸಿ ನಿವಾಸಿ ಸಪ್ನಾ ಮೊದಲ ಪತಿಗೆ ವಿಚ್ಛೇದನ ನೀಡಿ 2015ರ ಏಪ್ರಿಲ್​ ತಿಂಗಳಲ್ಲಿ ಕರ್ನೂಲ್​​ನ ನಿವಾಸಿ ಉಸ್ಮಾನಿಯಾ ವೈದ್ಯಕೀಯ ಕಾಲೇಜ್​​ನಲ್ಲಿ ಎಂಡಿಯಾಗಿರುವ ಡಾ.ಶ್ರೀಧರ್​​ ಜತೆ ಎರಡನೇ ಮದುವೆಯಾಗಿದ್ದರು. ಡಾ.ಶ್ರೀಧರ್​ಗೂ ಇದು ಎರಡನೆಯ ಮದುವೆ. ಮದುವೆಯ ಸಂದರ್ಭದಲ್ಲಿ ಸಪ್ನಾ ಮನೆಯವರು 10 ಲಕ್ಷ ರೂ. ನಗದು ಹಾಗೂ 14 ತೊಲ ಚಿನ್ನಾಭರಣ ನೀಡಲಾಗಿತ್ತು.
ಇಷ್ಟಾದರೂ ಆತನ ಹಣದ ದಾಹ ನಿಂತಿರಲಿಲ್ಲ. ಒಂದು ವರ್ಷದಿಂದಲೂ ಹೆಂಡತಿಗೆ ವರದಕ್ಷಿಣೆ ವಿಚಾರವಾಗಿ ನಿತ್ಯ ಮಾನಸಿಕ, ದೈಹಿಕ ಕಿರುಕುಳ ನೀಡಲು ಶುರು ಮಾಡಿದ್ದ. ಇದರಿಂದ ಡಾ.ಸಪ್ನಾ ಮೊದಲಿಗೆ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಆಕೆಯ ಪಾಲಕರು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಕೌನ್ಸೆಲಿಂಗ್​ ಮಾಡಿಸಿದ್ದರು. ತಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರಲ್ಲಿ ದೂರು ಕೂಡ ನೀಡಿದ್ದರು. ಆದರೂ ಕಿರುಕುಳ ಮುಂದುವರೆದಿದ್ದರಿಂದ ಸ್ವಪ್ನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಣ್ಣಾಗಿ ಹುಟ್ಟಿದಾಕೆ 47ನೇ ಹುಟ್ಟುಹಬ್ಬವನ್ನು ಗಂಡಾಗಿ ಆಚರಿಸಿಕೊಂಡಳು! ಮಹಿಳೆ ಬಾಳಲ್ಲಿ ಹೀಗೊಂದು ವಿಚಿತ್ರ…

ಮುಸ್ಲಿಂ ಯುವತಿಯನ್ನು ಮದ್ವೆಯಾದದ್ದೇ ತಪ್ಪಾಯ್ತಾ? ತಂಗಿಯ ಬಾಳಿಗೆ ಕೊಳ್ಳಿ ಇಡಲು ಜೈಲಿನಿಂದಲೇ ಅಣ್ಣನ ಸ್ಕೆಚ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
