ಕರಾಚಿ (ಪಾಕಿಸ್ತಾನ):ಇದು 73 ವರ್ಷಗಳ ಹಿಂದಿನ ಕಥೆ. 1947ರ ಆಗಸ್ಟ್​ 14ರ ಮಧ್ಯರಾತ್ರಿ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಆದರೆ ಆಗ ಭಾರತ-ಪಾಕಿಸ್ತಾನ ವಿಭಜನೆಯಾದಾಗ ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡವರು ಅದೆಷ್ಟೋ ಮಂದಿ. ಇಲ್ಲಿಂದ ಅಲ್ಲಿ, ಅಲ್ಲಿಂದ ಇಲ್ಲಿ… ಹೀಗೆ ಒಂದೇ ಕುಟುಂಬದ ಜನರು ವಿಭಜನೆಗೊಂಡು ವರ್ಷಾನುಗಟ್ಟಲೆ ಕಣ್ಣೀರಲ್ಲೇ ಕೈತೊಳೆದವರು ಲೆಕ್ಕಕ್ಕಿಲ್ಲ.ಅಂಥವರಲ್ಲಿ ಒಬ್ಬಾಕೆ ದಾಫಿಯಾ ಬಾಯಿ ಅಲಿಯಾಸ್ ಆಯೇಷಾ. ಆಗ ಈಕೆ ಇನ್ನೂ 13 ವರ್ಷದ ಬಾಲೆ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಪಾಕಿಸ್ತಾನದ ಪಾಪಿಗಳಿಂದ ಅಪಹರಣಗೊಂಡವಳ ಪೈಕಿ ಈ ಬಾಲೆಯೂ ಒಬ್ಬಳು. ಈಕೆಗೆ ಪಡಬಾರದ ಕಷ್ಟ ಕೊಟ್ಟು, ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ ಪಾಕಿಗಳು, ನಂತರ 13 ವರ್ಷದ ಬಾಲಕಿಯನ್ನೇ ವಿವಾಹವಾದರು.ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೈಲ್ಸಿ ಎಂಬ ಪಟ್ಟಣದಲ್ಲಿ ಬಾಲಕಿಯ ಸಂಸಾರ ಶುರುವಾಯಿತು. ಮತಾಂತರದ ನಂತರ ದಾಫಿಯಾ ಬಾಯಿ ಆಯೇಷಾ ಆದಳು. ಅಲ್ಲಿಂದ ಏಳು ದಶಕಗಳ ಕಾಲವೂ ಈಕೆಯದ್ದು ಒಂದೇ ಒಂದು ಆಸೆ, ತನ್ನ ತವರೂರು ಭಾರತವನ್ನು ಕಾಣುವುದು, ಅಲ್ಲಿರುವ ತನ್ನ ಕುಟುಂಬವನ್ನು ಸೇರುವುದು.
ಇದನ್ನೂ ಓದಿ:ಹಲ್ಲುಜ್ಜುವಾಗ ಪೇಸ್ಟ್​ ಅಲ್ಲ… ಟೂಥ್​ಬ್ರಷನ್ನೇ​ ನುಂಗಿದ! ಮುಂದೇನಾಯ್ತು ನೋಡಿ…ಆದರೆ ಅದು ಸಾಧ್ಯವಾಗಲೇ ಇಲ್ಲ. ವರ್ಷಗಳು ಉರುಳುದಿವು, ದಶಕಗಳು ಕಳೆದವು. 10,20,30…ವರ್ಷವಾಗಿ 70 ವರ್ಷಗಳೇ ಕಳೆದವು. ಅಲ್ಲಿಂದ ಇಲ್ಲಿಯವರೆಗೂ ತನ್ನವರನ್ನು ಕಾಣಲು ಈಕೆ ಮಾಡಿದ ಸಾಹಸ ಕಾರ್ಯಗಳೇ ಇಲ್ಲ. ತನ್ನ ಪ್ರಾಂತ್ಯದಲ್ಲಿ ಇರುವ ಹಿಂದೂ ದೇವಾಲಯಕ್ಕೆ ಹೋಗಿ ದೇವರಿಗೆ ಈಕೆ ಇಷ್ಟೂ ವರ್ಷ ಕೇಳಿಕೊಳ್ಳುತ್ತಿದ್ದು ಒಂದೇ ಒಂದು ಕೋರಿಕೆ ಅಂತೆ. ನನ್ನ ಕುಟುಂಬಸ್ಥರನ್ನು ನಾನು ನೋಡಬೇಕು ಎಂದು. ಇದಕ್ಕಾಗಿ ದೇವರಿಗೆ ತುಪ್ಪದ ದೀಪವನ್ನೂ ಹಚ್ಚುತ್ತಿದ್ದೆ ಎನ್ನುತ್ತಾಳೆ 83 ವರ್ಷದ ಈ ವಯೋವೃದ್ಧೆ.ಆದರೆ ಈಕೆಯ ಆಸೆ ಈಡೇರಿದ್ದು ಸ್ವಾತಂತ್ರ್ಯ ಬಂದು 73 ವರ್ಷಗಳ ಬಳಿಕ. ಪಂಜಾಬ್​ ಪ್ರಾಂತ್ಯದ ಯುಟ್ಯೂಬ್​ ಚಾಲೆನ್​ನ ನಿರೂಪಕಿಯೊಬ್ಬಳು ಅಲ್ಲಿರುವ ಭಾರತೀಯರನ್ನು ಮಾತನಾಡಿಸುತ್ತಿದ್ದಳು. ಈ ವೇಳೆ ದಾಫಿಯಾ ಬಾಯಿಯೂ ಅದೃಷ್ಟವಶಾತ್​ ಈಕೆಯ ಕಣ್ಣಿಗೆ ಬಿದ್ದಿದ್ದಾರೆ. ಆಕೆಯನ್ನು ನಿರೂಪಕಿ ಮಾತನಾಡಿಸಿದಾಗ ತನ್ನ ಕೋರಿಕೆಯನ್ನು ಆಕೆ ಹೇಳಿದ್ದಾಳೆ.ಈ ಯೂಟ್ಯೂಬ್​ ಚಾನೆಲ್​ ಹೆಚ್ಚಾಗಿ ಪಾಕಿಸ್ತಾನದಲ್ಲಿರುವ ಭಾರತೀಯರನ್ನು ಕೇಂದ್ರೀಕರಿಸುವ ಹಿನ್ನೆಲೆಯಲ್ಲಿ ಇತ್ತ ಭಾರತದಲ್ಲಿ ಇರುವ ದಾಫಿಯಾ ಬಾಯಿ ಕುಟುಂಬಸ್ಥರೂ ಇದನ್ನು ನೋಡಿದ್ದಾರೆ. ಅವರಿಗಾದ ಸಂತೋಷ ಅಷ್ಟಿಷ್ಟಲ್ಲ ನಂತರ ಅದೇ ಚಾನೆಲ್​ಅನ್ನು ಸಂಪರ್ಕಿಸಿ ಆಕೆಯ ಜತೆ ಮಾತನಾಡಿಸುವಂತೆ ಕೋರಿಕೊಂಡಿದ್ದಾರೆ.70 ದಶಕಗಳ ತನ್ನ ಆಸೆ ಈ ರೀತಿ ಈಡೇರುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರುವ ದಾಫಿಯಾ ಬಾಯಿ, ವಿಡಿಯೋ ಕಾನ್​ಫರೆನ್ಸ್​ ಮೂಲಕ ತನ್ನ ಇಡೀ ಕುಟುಂಬದ ಜತೆ ಮಾತನಾಡಿದ್ದಾಳೆ. 266 ಕಿ.ಮೀ ದೂರದಲ್ಲಿರುವ ಬಿಕಾನೆರ್‌ನ ಮೊರ್ಖಾನಾ ಪಟ್ಟಣದಲ್ಲಿ ಇರುವ ಸೋದರಳಿಯರನ್ನು ಮತ್ತು ಮೊಮ್ಮಕ್ಕಳನ್ನು ಕಂಡು ಕಣ್ಣೀರಾಗಿದ್ದಾಳೆ. ಮೊಬೈಲ್​ ಫೋನ್​ನ ಸ್ಕ್ರೀನ್​ ಮೇಲೆ ತನ್ನವರನ್ನು ಕಂಡು ಆಕೆ ಸ್ಕ್ರೀನ್​ ಅನ್ನು ಚುಂಬಿಸುತ್ತಿರುವ ದೃಶ್ಯ ಎಂಥವರ ಮನಸ್ಸನ್ನೂ ಕಲಕುವಂತಿತ್ತು.ಉರ್ದು ಬಿಟ್ಟು ಬೇರೆ ಭಾಷೆಯನ್ನು ಮರೆತೇ ಬಿಟ್ಟಿದ್ದ ದಾಫಿಯಾ ತನ್ನ ಕುಟುಂಬಸ್ಥರ ಜತೆ ಮಾತನಾಡಲೂ ಪರದಾಡಬೇಕಾಯಿತು. ನಂತರ ಅಲ್ಲಿ ಉರ್ದು ಬಲ್ಲವರನ್ನು ಕರೆಸಿ, ಸಂಭಾಷಣೆಗಳನ್ನು ಟ್ರಾನ್ಸ್​ಲೇಟ್​ ಮಾಡಿ ಹೇಳಲಾಯಿತು.ತನ್ನ ಜೀವನ ಇಂದಿಗೆ ಸಾರ್ಥಕವಾಯಿತು ಎಂದ ದಾಫಿಯಾಬಾಯಿ, 70 ವರ್ಷ ಕಣ್ಣೀರಿನಲ್ಲಿಯೇ ಬದುಕು ಸವೆಸಿರುವ ಬಗ್ಗೆ ವಿವರಣೆ ನೀಡಿದ್ದಾಳೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − four =
Remember me
