ನವದೆಹಲಿ:ಲತಾ ಮಂಗೇಶ್ಕರ್​, ಇವರ ಹೆಸರು ಕೇಳದವರೇ ಇಲ್ಲ ಎನ್ನಬಹುದೇನೋ. ಸಂಗೀತ ಕ್ಷೇತ್ರ ಕಂಡ ಅಪರೂಪದ ಕಲಾವಿದೆಗೆ ನಟ ಅಮಿತಾಭ್​ ಬಚ್ಚನ್​ ವಾಯ್ಸ್‌ ಆಫ್‌ ಮಿಲೇನಿಯಂ (ಸಹಸ್ರಮಾನದ ಸ್ವರ ದೇವತೆ) ಎಂದೇ ಸಂಬೋಧಿಸುತ್ತಾರೆ.
ಇಂದು ಈ ಮಹಾನ್​ ತಾರೆಯ ಜನುಮ ದಿನ. 91 ವರ್ಷಗಳನ್ನು ಪೂರೈಸಿರುವ ಲತಾ ಮಂಗೇಶ್ಕರ್​ ಅವರ ಜೀವನದ ಅತ್ಯಂತ ಕಹಿ ಘಟನೆಯೊಂದನ್ನು ಹಿಂದಿ ಬರಹಗಾರರಾದ ಪದ್ಮಾ ಸಚ್‌ದೇವ್ ಅವರು ತಮ್ಮ ‘ಐಸಾ ಕಹಾನ್ ಸೆ ಲಾವೂನ್’ ಎಂಬ ಪುಸ್ತಕದಲ್ಲಿ ಬಿಚ್ಚಿಟ್ಟಿದ್ದಾರೆ.
ಹೌದು. ಅದು ಅರವತ್ತರ ದಶಕ. ಆಗ ಲತಾ ಮಂಗೇಶ್ಕರ್​ ಅವರ ಹೆಸರು ತುತ್ತು ತುದಿಯಲ್ಲಿ ಇದ್ದ ಸಮಯವದು. ಅದೇ ಸಮಯದಲ್ಲಿ ಸುಮಾರು ಮೂರು ತಿಂಗಳು ಇವರು ಹಾಸಿಗೆ ಹಿಡಿದಿದ್ದರು. ಇದೇ ಕಾರಣಕ್ಕೆ ಅವರಿಗೆ ಹಾಡಲೂ ಸಾಧ್ಯವಾಗಿರಲಿಲ್ಲ.
ಅಷ್ಟಕ್ಕೂ ಅವರಿಗೆ ಆಗಿದ್ದೇನೆಂದರೆ ಅವರಿಗೆ ವಿಷ ಪ್ರಾಶನವಾಗಿತ್ತು! ಸ್ಲೋ ಪಾಯ್​ಸನ್​ (ನಿಧಾನವಾಗಿ ವಿಷಪ್ರಾಶನ) ಮಾಡಲಾಗಿತ್ತು.
ಇದನ್ನೂ ಓದಿ:ಆಗ ಓಕೆ ಎಂದು, ಈಗ ಕೃಷಿಕರ ದಾರಿ ತಪ್ಪಿಸುತ್ತಿರುವವರಿಗೆ ಸಚಿವೆ ನಿರ್ಮಲಾ ಹಾಕಿದರೊಂದು ಸವಾಲು…
ಪದ್ಮಾ ಸಚ್‌ದೇವ್ ಅವರು ಪುಸ್ತಕದಲ್ಲಿ ಉಲ್ಲೇಖಿಸಿರುವುದು ಹೀಗೆ: 33 ವರ್ಷದ ಲತಾ ಮಂಗೇಶ್ಕರ್​ ಅವರು ಅಕ್ಷರಶಃ ನಲುಗಿ ಹೋಗಿದ್ದರು. ಒಂದು ದಿನ ಅವರಿಗೆ ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡಿತ್ತು. ಎರಡು-ಮೂರು ಬಾರಿ ವಾಂತಿಯಾಗಿತ್ತು. ಚಲಿಸುವ ಸ್ಥಿತಿಯಲ್ಲಿಯೂ ಅವರು ಇರಲಿಲ್ಲ. ದೇಹದಲ್ಲಿ ಹೇಳಿಕೊಳ್ಳಲಾಗದ ಸಂಕಟ, ನೋವು…
ದಿನೇ ದಿನೇ ತಲಾ ಕುಗ್ಗಿಹೋದರು, ದುರ್ಬಲರಾದರು. ನಂತರ ಮೂರು ತಿಂಗಳು ಬೆಡ್​ರೆಸ್ಟ್​ನಲ್ಲಿ ಇರಬೇಕಾಯಿತು. ಹಾಡಲು ಅಸಾಧ್ಯವಾಯಿತು. ಅವರು ನೋವಿನಿಂದ ಬಳಲುತ್ತಿದ್ದರು, ಸರಿಯಾಗಿ ತಿನ್ನಲೂ ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಕೋಲ್ಡ್ ಸೂಪ್​ ಒಂದನ್ನೇ ಸೇವಿಸಲು ಶಕ್ಯರಾಗಿದ್ದರು.
ಆದರೆ ತಮಗೆ ವಿಷವನ್ನು ನೀಡಿದವರಾರು ಎಂದು ಕೊನೆಗೂ ಲತಾ ಗುಟ್ಟುಬಿಟ್ಟುಕೊಡಲಿಲ್ಲ. ಅದಿನ್ನೂ ನಿಗೂಢವಾಗಿಯೇ ಇದೆ. ಘಟನೆಯ ನಂತರ, ಅವರ ಅಡುಗೆಯವನು ತನ್ನ ಸಂಬಳವನ್ನು ತೆಗೆದುಕೊಳ್ಳದೆ ಮನೆಯಿಂದ ಹೊರಟುಹೋದನೆಂದು ಹೇಳಲಾಗುತ್ತದೆ. ಆತ ಕೆಲವು ಬಾಲಿವುಡ್ ವ್ಯಕ್ತಿಗಳ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಅಷ್ಟೇ ವಿಷಯ ತಿಳಿದಿರುವುದು ಬಿಟ್ಟರೆ ಹೆಚ್ಚಿಗೆ ಏನೂ ಗೊತ್ತಿಲ್ಲ ಎಂದು ಬರೆದಿದ್ದಾರೆ.
ಕರೊನಾದ ನಡುವೆಯೇ ಮೆದುಳು ತಿನ್ನುವ ಭೀಕರ ಅಮೀಬಾ ಪತ್ತೆ- ಇಬ್ಬರು ಮಕ್ಕಳ ಸಾವು

ನಭಕ್ಕೆ ನೆಗೆಯಲಿದೆ ಶೌಚಗೃಹ: ನಾಸಾದಿಂದ ನಾಳೆಯೇ ಮುಹೂರ್ತ ಫಿಕ್ಸ್​

ಏಟಾದ ಕಾಲಲ್ಲೇ ಪೂರನ್​ ಸಾಧನೆಗೆ ಮೂಕರಾದ ತೆಂಡೂಲ್ಕರ್​: ಜೀವಮಾನದಲ್ಲೇ ನೋಡಿದ ಅತ್ಯುತ್ತಮ ಕ್ಯಾಚ್‌ ಎಂದರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
