ಅಯೋಧ್ಯೆ:ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಖಾತೆಗೆ ಕನ್ನ ಹಾಕಿರುವ ಕಳ್ಳರು ಲಕ್ಷಾಂತರ ರೂಪಾಯಿಗಳನ್ನು ವಿತ್​ಡ್ರಾ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ನಕಲಿ ಚೆಕ್​ಗಳನ್ನು ಬಳಸಿ ಈ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲಾಗಿದೆ.
ಲಖನೌದ ಬ್ಯಾಂಕ್​ನಲ್ಲಿ ಇರುವ ಖಾತೆಗಳಿಂದ ಹಣವನ್ನು ಲಪಟಾಯಿಸಲಾಗಿದೆ. ಎರಡು ಖಾತೆಗಳಿಂದ ಈ ಹಣವನ್ನು ವಿತ್​ಡ್ರಾ ಮಾಡಲಾಗಿದೆ. ಎರಡು ಬಾರಿ ಮೊದಲು ವಿತ್​ಡ್ರಾ ಮಾಡಲಾಗಿದೆ. ಮೂರನೆ ಬಾರಿ ಹಣ ವಿತ್​ಡ್ರಾ ಮಾಡಲು ಪ್ರಯತ್ನಿಸಿದಾಗ, ಬ್ಯಾಂಕ್​ನವರಿಗೆ ಸಂದೇಹ ಬಂದಿದೆ. ಅವರು ಕೂಡಲೇ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆಗಲೇ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊದಲು ಹಣವನ್ನು ಸೆಪ್ಟೆಂಬರ್ 1ರಂದು ವಿತ್​ಡ್ರಾ ಮಾಡಿಕೊಳ್ಳಲಾಗಿದೆ. ನಂತರ 3ನೇ ತಾರೀಖು ಮತ್ತೆ ಹಣವನ್ನು ವಿತ್​ಡ್ರಾ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕ್ಯಾಲಿಫೋರ್ನಿಯಾ ಧಗಧಗ: ಹರಡುತ್ತಲೇ ಸಾಗಿದೆ ಕಾಳ್ಗಿಚ್ಚು- 11 ಮಂದಿ ಬಲಿ
ಮೂರನೇ ಬಾರಿಗೆ ಲಖನೌದ ಬ್ಯಾಂಕ್ ಆಫ್ ಬರೋಡಾದಲ್ಲಿ 9.86 ಲಕ್ಷ ಚೆಕ್ ವಿತ್ ಡ್ರಾ ಮಾಡುವ ಸಂದರ್ಭದಲ್ಲಿ ಚಂಪತ್ ರಾಯ್ ಅವರಿಗೆ ಕರೆ ಹೋಗಿದೆ.
ಸದ್ಯ ಅಪರಿಚಿತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಇದಾಗಲೇ ನಕಲಿ ಚೆಕ್​ ಬಳಸಿ ಸುಮಾರು 6 ಲಕ್ಷ ರೂಪಾಯಿಗಳನ್ನು ವಿತ್ ಡ್ರಾ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದ್ದು, ನಿಖರ ಮಾಹಿತಿ ಬರಬೇಕಿದೆಯಷ್ಟೇ.
2024ರಲ್ಲಿಯೂ ಹಿಂದುತ್ವವೇ ಗೆಲ್ಲಲಿದೆ ಎಂದ ಸುಬ್ರಮಣಿಯನ್​ ಸ್ವಾಮಿ ಕೇಂದ್ರವನ್ನು ಟೀಕಿಸಿದ್ದೇಕೆ?

ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್​ ಹತ್ತಿದ್ದ ಕರೊನಾ ಸೋಂಕಿತೆ ತಲುಪಿದ್ದು ದೆಹಲಿ! ಆಗಿದ್ದೇನು?

ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!







ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + sixteen =
Remember me
