ಬೆಂಗಳೂರು:ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಮಗ ಹಾಗೂ ಕಾಂಗ್ರೆಸ್‌ನ ಶಾಸಕ ಭದ್ರಾವತಿಯ ಬಿ.ಕೆ. ಸಂಗಮೇಶ್ವರ ಅವರ ಸಹೋದರ ಬಿ.ಕೆ. ಶಿವಕುಮಾರ್‌ ಮಗಳ ವಿವಾಹ ನಾಳೆ ಗೋವಾದಲ್ಲಿ ನಡೆಯಲಿದೆ.
ಕಳೆದ ಆಗಸ್ಟ್​ ತಿಂಗಳಿನಲ್ಲಿ ಲಕ್ಷ್ಮಿ ಅವರ ಪುತ್ರ ಮೃಣಾಲ್​ ಹಾಗೂ ಬಿ.ಕೆ.ಶಿವಕುಮಾರ್​ ಅವರ ಪುತ್ರಿ ಡಾ. ಹಿತಾ ಅವರ ನಿಶ್ಚಿತಾರ್ಥ ನೆರವೇರಿತ್ತು. ಶಿವಮೊಗ್ಗದ ಸರ್ಜಿ ಛತ್ರದಲ್ಲಿ ನಿಶ್ಚಿತಾರ್ಥ ನಡೆದಿತ್ತು.
ಇದೀಗ ಇವರ ವಿವಾಹವನ್ನು ಗೋವಾದಲ್ಲಿ ನಡೆಸಲು ಎರಡೂ ಕುಟುಂಬಗಳು ರೆಡಿಯಾಗಿದ್ದು, ಗೋವಾದತ್ತ ಪ್ರಯಾಣ ಬೆಳೆಸಿದ್ದಾರೆ. ಮದುವೆಯು ಗೋವಾದ ಲೀಲಾಪ್ಯಾಲೇಸ್‌ ಹೋಟೆಲ್‌ನಲ್ಲಿ ನಡೆಯಲಿದೆ.
ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿಯಾಗಿದ್ದರೆ, ಸಂಗಮೇಶ್ ಭದ್ರಾವತಿಯ ಶಾಸಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬಯಲು ಸೀಮೆಯ ಲಕ್ಷ್ಮಿ ಅವರು ಮಲೆನಾಡಿದ ಮಗಳ ಅತ್ತೆಯಾಗಲಿದ್ದಾರೆ.
ಇದಾಗಲೇ ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಕೂಡ ಮಾಲಿನ್ಯದಿಂದ ದೂರವಿರಲು ಗೋವಾದಲ್ಲಿಯೇ ಸದ್ಯ ವಾಸ್ತವ್ಯ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇವರಿಬ್ಬರನ್ನೂ ವಿವಾಹಕ್ಕೆ ಆಮಂತ್ರಿಸಲಾಗಿದೆ.
ರೆಸಾರ್ಟ್​ನಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಕರೊನಾ ಹಿನ್ನೆಲೆಯಲ್ಲಿ ಮದುವೆಗೆ 500 ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಇದಾಗಲೇ ವಿವಿಧ ಪಕ್ಷಗಳ ಪ್ರಮುಖ ರಾಜಕಾರಣಿಗಳು ಈಗಾಗಲೇ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಂಬಂಧಿಗಳು ಮಂಗಳವಾರವೇ ಗೋವಾಗೆ ಬಂದಿದ್ದು ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ನಿನ್ನೆ ಬೆಳಗ್ಗೆಯಿಂದಲೇ ಮದುವೆ ಸಂಬಂಧಿತ ಸಂಪ್ರದಾಯಗಳು ಆರಂಭವಾಗಿದ್ದು, ಶುಕ್ರವಾರ ಪೂರ್ಣಗೊಳ್ಳಲಿದೆ ಎಂದು ಮೋಹನ್ ರೆಡ್ಡಿ ತಿಳಿಸಿದ್ದಾರೆ. ಶುಕ್ರವಾರ ಸಂಜೆ ಆರತಕ್ಷತೆ ನಡೆಯಲಿದೆ.
ಗಾಂಧಿ ಕುಟುಂಬದಲ್ಲಿ ತಲ್ಲಣ ಸೃಷ್ಟಿಸಿರುವ ಒಬಾಮಾ ಪುಸ್ತಕ ವಾರದಲ್ಲಿ 17 ಲಕ್ಷ ಕಾಪಿ ಸೇಲ್​

ನಕಲಿ ಆ್ಯಪ್​ನಿಂದ ಪ್ರಯಾಣಿಕರಿಗೆ ಟೋಪಿ! ಪೊಲೀಸರ ಎಚ್ಚರಿಕೆ ಇಲ್ಲಿದೆ ನೋಡಿ…

ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 − nine =
Remember me
