ಪಟ್ನಾ:ಮೇವು ಹಗರಣ ಸೇರಿದಂತೆ ಕೆಲವು ಹಗರಣಗಳ ಸುಳಿಯಲ್ಲಿ ಸಿಲುಕಿ ಜೈಲುಪಾಲಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಅವರ ಫೋಟೋ ಮದುವೆ ಪತ್ರಿಕೆಯೊಂದರಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಘಟನೆ ನಡೆದಿದೆ.
ಬಿಹಾರದ ವೈಶಾಕಿ ಜಿಲ್ಲೆಯ ರಾಹುವಾ ಗ್ರಾಮದ ನಿವಾಸಿಯಾಗಿರುವ ಪವನ್ ಕುಮಾರ್ ತನ್ನ ಮದುವೆ ಕಾರ್ಡ್​ ಮೇಲೆ ಲಾಲು ಫೋಟೋ ಹಾಕಿದ್ದಾನೆ. ಮದುಮಗನ ಜಾಗದಲ್ಲಿ ಈ ಫೋಟೋ ಹಾಕಿ “ಮದುವೆಗೆ ಬನ್ನಿ- ಇವರನ್ನು ಬಿಡುಗಡೆ ಮಾಡಿ” ಎಂದು ಹೇಳಿ ಅದನ್ನು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಕಳುಹಿಸಿದ್ದಾನೆ.
ಅಷ್ಟಕ್ಕೂ ಈತ ಹೀಗೆ ಮಾಡಲು ಕಾರಣ, ಪವನ್​ಗೆ ಲಾಲು ಪ್ರಸಾದ್ ಯಾದವ್ ಅವರ ಮೇಲೆ ಬಹಳ ಪ್ರೀತಿಯಂತೆ. ಅವರು ಜೈಲಿನಲ್ಲಿ ಇರುವುದನ್ನು ನೋಡಲು ಆಗುತ್ತಿಲ್ಲವಂತೆ. ಆದ್ದರಿಂದ ಆರ್‌ಜೆಡಿಯು ಪಕ್ಷದ ಚಿಹ್ನೆ ಜತೆಗೆ ಲಾಲೂ ಅವರ ಫೋಟೋ ಹಾಕಿ ಅವರನ್ನು ಬಿಡುಗಡೆಗೊಳಿಸುವಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದಾನೆ.
ಪವನ್ ಕುಮಾರ್ ಮದುವೆ ಏಪ್ರಿಲ್ 23ರಂದು ನಡೆಯಲಿದ್ದು, ಮದುವೆ ಕಾರ್ಡ್​ ಅನ್ನು ಲಾಲೂ ಅವರ ಪುತ್ರ ಲಾಲು ಪ್ರಸಾದ್ ತೇಜಸ್ವಿ ಯಾದವ್, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಾಜಿ ಆರೋಗ್ಯ ಸಚಿವ ತೇಜ್ ಮಗ ಪವನ್, ಪ್ರತಾಪ್ ಯಾದವ್ ರಾಜ್ಯ ಅಧ್ಯಕ್ಷ ಜಗದಾನಂದ್ ಸಿಂಗ್ ಸೇರಿದಂತೆ ಹಲವು ನಾಯಕರಿಗೆ ಕಳುಹಿಸಿಕೊಟ್ಟಿದ್ದಾನೆ. ಫೋಟೋ ನೋಡಿ ಹಲವು ನಾಯಕರು ಆರಂಭದಲ್ಲಿ ದಂಗಾಗಿ ಹೋಗಿದ್ದಾರೆ.
ಲಾಲು ಪ್ರಸಾದ್ ಬಡಕುಟುಂಬದಿಂದ ಬಂದಿದ್ದಾರೆ. ನನಗೆ ಉನ್ನತ ಅಧಿಕಾರಿಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅವರನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ಈ ಮಾರ್ಗವನ್ನು ಆರಿಸಿಕೊಂಡಿದ್ದೇನೆ ಎಂದಿದ್ದಾನೆ ಪವನ್​. ಇದನ್ನು ಕೇಳಿ ನಾಯಕರು ಖುಷಿಪಟ್ಟು ಮದುಮಗನನ್ನು ಆಶೀರ್ವದಿಸಿದ್ದಾರೆ.
ಇದು ನನ್ನದು… ನೀನೂ ಬಟ್ಟೆ ಬಿಚ್ಚಿ ತೋರಿಸು ಎಂದು ಯುವಕರಿಗೆ ಗಾಳ ಹಾಕಿ ಬ್ಲ್ಯಾಕ್​ಮೇಲ್​ ಮಾಡ್ತಿದ್ದವರು ಅಂದರ್​

ಆದಾಯ ಇಲ್ಲದಿದ್ರೂ, ಹೆಂಡ್ತಿದೇ ತಪ್ಪಿನಿಂದ ಡಿವೋರ್ಸ್​ ಕೊಟ್ರೂ ಜೀವನಾಂಶ ಕೊಡಲೇಬೇಕಾ?

ಆನ್​ಲೈನ್​ ಮೀಟಿಂಗ್​ನಲ್ಲಿ ಬೆತ್ತಲೆಯಾದ ಸಂಸದ! ಬಟ್ಟೆ ಬದಲಾಯಿಸಲು ಹೋಗಿ ಮೊಬೈಲ್​ ಎದುರು ಬಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 10 =
Remember me
