ಮಿಜೋರಾಂ:ಮಿಜೋರಾಂ-ತ್ರಿಪುರ ಗಡಿಯ ಸಮೀಪ ರಸ್ತೆ ನಿರ್ಮಾಣದ ವೇಳೆ ಉಂಟಾಗಿರುವ ಭೂಕುಸಿತದ ಜಾಗದಲ್ಲಿ ರಾಶಿರಾಶಿ ತಲೆಬುರುಡೆಗಳು ಹಾಗೂ ಮೂಳೆಗಳು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.
ಮಾಮಿತ್ ಜಿಲ್ಲೆಯ ತ್ರಿಪುರ ಗಡಿಯ ಸಮೀಪವಿರುವ ಟುಯಿಡಾಮ್-ಕಾವರ್ಟೆ ರಸ್ತೆ ನಿರ್ಮಾಣ ಹಂತದಲ್ಲಿದೆ. ಈ ಸಂದರ್ಭದಲ್ಲಿ ಬೆಟ್ಟವನ್ನು ಕೆಡವಲಾಗಿದೆ. ಭಾರಿ ಯಂತ್ರಗಳನ್ನು ಇದಕ್ಕೆ ಬಳಸಿದ್ದ ಹಿನ್ನೆಲೆಯಲ್ಲಿ ಬೆಟ್ಟ ಕುಸಿದು, ಭೂಕುಸಿತವೂ ಉಂಟಾಗಿದೆ. ಈ ಸಮಯದಲ್ಲಿ ಆ ಜಾಗದಲ್ಲಿ 12 ತಲೆಬುರುಡೆಗಳು, ಹಲವಾರು ಮೂಳೆಗಳು, ಕಿವಿಯೋಲೆಗಳನ್ನು ಹೋಲುವ ಆಭರಣಗಳು, ಧೂಮಪಾನದ ಪೈಪ್, ಮಣ್ಣಿನ ಮಡಕೆಗಳು ಸಿಕ್ಕಿದ್ದು, ಇದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಯಾವುದೇ ವೈಜ್ಞಾನಿಕ ವಿಶ್ಲೇಷಣೆ ಇಲ್ಲದೆ ಅವು ಎಷ್ಟು ಹಳೆಯವು ಎಂಬುದರ ಕುರಿತು ಪ್ರತಿಕ್ರಿಯಿಸುವುದು ನನಗೆ ಅಕಾಲಿಕವಾಗಿರುತ್ತದೆ. ಇದನ್ನು ಸದ್ಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇನ್ನಷ್ಟೇ ವರದಿ ಬರಬೇಕಿದೆ ಎಂದು ಮಾಮಿತ್ ಜಿಲ್ಲಾಧಿಕಾರಿ ಡಾ. ಲಾಲ್ರೋಜಾಮ ಹೇಳಿದ್ದಾರೆ.
ಇದನ್ನೂ ಓದಿ:ಈಚೆಗೆ ಭಾರಿ ಸುದ್ದಿ ಮಾಡಿದ್ದ ಡೊನಾಲ್ಡ್‌ ಟ್ರಂಪ್‌ ತಮ್ಮ ರಾಬರ್ಟ್‌ ನಿಧನ
ಭೂಕುಸಿತದ ಜಾಗದಲ್ಲಿ ಕಾರ್ಮಿಕರು ಈ ಅವಶೇಷಗಳನ್ನು ನೋಡಿದ್ದಾರೆ. ಇದನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಮಿಜೋರಾಂ ಗಡಿಯ ಸಮೀಪವಿರುವ ತ್ರಿಪುರಾದಲ್ಲಿರುವ ಜಂಪೂಯಿ ಬೆಟ್ಟಗಳಲ್ಲಿ ಮತ್ತು ಕಳೆದ ವರ್ಷ ಐಜಾಲ್‌ನಿಂದ 20 ಕಿ.ಮೀ ದೂರದಲ್ಲಿರುವ ಎರಡು ಸ್ಥಳಗಳಲ್ಲಿ ಕೂಡ ಇಂಥದ್ದೇ ಅವಶೇಷಗಳು ಸಿಕ್ಕಿದ್ದು ಅವಿನ್ನೂ ನಿಗೂಢವಾಗಿದೆ.
ಅದರ ಬಗ್ಗೆ ಅಧ್ಯಯನ ನಡೆಯುತ್ತಿದೆ ಎಂದು ಪುರಾತತ್ವಶಾಸ್ತ್ರಜ್ಞ ಉಪ ಅಧೀಕ್ಷಕ ಡಾ. ಸುಜೀತ್ ನಾಯನ್ ಹೇಳಿದ್ದಾರೆ.ಬಹುಶಃ ಇದು ಕ್ರಿ.ಶ 8 ರಿಂದ 14 ನೇ ಶತಮಾನದಷ್ಟು ಹಿಂದಿನದ್ದು ಇರಬಹುದು. ಮೇಲ್ನೋಟಕ್ಕೆ ಹೀಗೇ ತೋರುತ್ತಿದೆ. ಆದರೆ ಈಗಲೇ ಈ ಕುರಿತು ಖಚಿತವಾಗಿ ಹೇಳಲಾಗದು ಎಂದಿದ್ದಾರೆ ನಾಯನ್‌.
ಲ್ಯಾಂಡಿಂಗ್‌ ಆಗದೇ ಆಕಾಶದಲ್ಲೇ ಗಂಟೆಗಟ್ಟಲೆ ಹಾರಿದ ಸಂಸದ ಅನಂತ್‌ಕುಮಾರ್‌ ಇದ್ದ ವಿಮಾನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five + fourteen =
Remember me
