ಕೋಲಂಬೊ:ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆ ನಡುವೆ ಅಧ್ಯಕ್ಷರಾಗಿದ್ದ ಗೋತಬಯ ರಾಜಪಕ್ಸ ಜುಲೈ 14ರ ರಾತ್ರಿ ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಗೋತಬಯ ಅವರ ರಾಜೀನಾಮೆಗೆ ಆಗ್ರಹಿಸಿ ನಾಗರಿಕರು ದಂಗೆಯೇಳುವ ಮೂಲಕ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ್ದರು. ಈ ಬೆನ್ನಲ್ಲೇ ರಾಷ್ಟ್ರಪತಿ ಭವನದಿಂದ ತಲೆಮರೆಸಿಕೊಂಡಿದ್ದ ಗೋತಬಯ ಕೊನೆಗೂ ತಮ್ಮ ಸ್ಥಾನಕ್ಕೆ ಇ-ಮೇಲ್​ ಮೂಲಕ ರಾಜೀನಾಮೆ ನೀಡಿದ್ದು, ಅದನ್ನು ಇಂದು ಸ್ಪೀಕರ್​ ಅಂಗೀಕರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀಲಂಕಾ ಸದ್ಯ ಶಾಂತವಾಗಿದೆ. ಗೋತಬಯ ಅವರ ರಾಜೀನಾಮೆಗೆ ಆಗ್ರಹಿಸಿ ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಂಡಿದ್ದ ಇಲ್ಲಿಯ ಜನರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ, ಸದ್ಯ ಪರಿಸ್ಥಿತಿ ತಿಳಿಯಾಗಿರುವುದಾಗಿ ವರದಿಯಾಗಿದೆ.
ಹೊಸ ಅಧ್ಯಕ್ಷರನ್ನು ಇನ್ನು ಏಳು ದಿನಗಳಲ್ಲಿ ನೇಮಕ ಮಾಡುವುದಾಗಿ ಸ್ಪೀಕರ್​ ಹೇಳಿದ್ದಾರೆ. ಅಲ್ಲಿಯವರೆಗೂ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿರುವ ರನಿಲ್ ವಿಕ್ರಮ ಸಿಂಘೆ ಅವರೇ ಮುಂದುವರೆಯಲಿದ್ದಾರೆ. ಈ ನಡುವೆಯೇ ಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಅಂದು ಯುದ್ಧ ಗೆದ್ದ ಹೀರೋ, ಈಗ ದಿವಾಳಿ ತಂದ ವಿಲ್ಲನ್

ಡೊನಾಲ್ಡ್​ ಟ್ರಂಪ್​ ಮೊದಲ ಪತ್ನಿ, ಸುಪ್ರಸಿದ್ಧ ಮಾಡೆಲ್ ಇವಾನಾ ನಿಗೂಢ ಸಾವು: ಪೊಲೀಸರಿಂದ ತನಿಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 14 =
Remember me
