ಬೆಂಗಳೂರು:ವಿಶ್ವದ ಅತಿ ದೊಡ್ಡ ವಿಮಾನ ಏರ್‌ಬಸ್‌ ಎ-380 ಸೂಪರ್‌ಜಂಬೋ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರುವ ಅಕ್ಟೋಬರ್​ 30ರಂದು ಲ್ಯಾಂಡ್‌ ಆಗಲಿದೆ. ಇದರಿಂದ ಇನ್ನು ದುಬೈ – ಬೆಂಗಳೂರು ನಡುವೆ ನೇರ ವಿಮಾನಯಾನ ಸೇವೆ ಆರಂಭವಾದಂತಾಗಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅತಿ ದೊಡ್ಡ ಏರ್ ಬಸ್ ಭೂಸ್ವರ್ಶ ಮಾಡಲಿದೆ.
ಒಟ್ಟು 72.75 ಮೀಟರ್‌ ಉದ್ದ, 24.45 ಮೀಟರ್‌ ಎತ್ತರ ಹೊಂದಿರುವ ಈ ವಿಮಾನದಲ್ಲಿ ಒಂದು ಬಾರಿ ಗರಿಷ್ಠ 853 ಮಂದಿ ಪ್ರಯಾಣಿಸಬಹುದಾಗಿದೆ. ಒಂದು ಬಾರಿಗೆ 3 ಸಾವಿರ ಸೂಟ್‌ಕೇಸ್‌ಗಳನ್ನು ತೆಗದುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ.
ಈ ಕುರಿತು ಯುಎಇ ವಿಮಾನಯಾನ ಸಂಸ್ಥೆ ಎಮಿರೇಟ್ಸ್‌ ಹೇಳಿಕೆ ಬಿಡುಗಡೆ ಮಾಡಿದೆ. ಅಕ್ಟೋಬರ್‌ 30 ರಿಂದ ಪ್ರತಿನಿತ್ಯ ಬೆಂಗಳೂರಿನಿಂದ ದುಬೈಗೆ ಸೇವೆ ನೀಡಲಾಗುವುದು ಎಂದು ಅದು ತಿಳಿಸಿದೆ. ಎಮಿರೇಟ್ಸ್‌ ಸಂಸ್ಥೆಯ ಏರ್‌ಬಸ್‌ ಎ-380 ವಿಮಾನ ಲ್ಯಾಂಡ್‌ ಆಗುವ ಎರಡನೇ ನಿಲ್ದಾಣ ಬೆಂಗಳೂರು ಆಗಲಿದೆ. ಈ ಮೊದಲು 2014ರಲ್ಲಿ ಎಮಿರೇಟ್ಸ್‌ ಸಂಸ್ಥೆ ಮುಂಬೈನಿಂದ ದುಬೈಗೆ ಈ ಸೇವೆಯನ್ನು ನೀಡಿತ್ತು.
ದುಬೈನಿಂದ ಟೇಕ್ ಆಫ್ ಆದ ಏರ್ ಬಸ್ ಆಕ್ಟೋಬರ್ 30 ರಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲಿದೆ. ಈ ಡಬ್ಬಲ್‌ ಡೆಕ್ಕರ್‌ ವಿಮಾನದಲ್ಲಿ ಮೂರು ದರ್ಜೆಯಲ್ಲಿ ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದೆ. ಎಕಾನಮಿ, ಬಿಸಿನೆಸ್‌, ಫಸ್ಟ್‌ ಕ್ಲಾಸ್‌ ಟಿಕೆಟ್‌ ಲಭ್ಯವಿದೆ.
ಬೋಯಿಂಗ್‌ 777 ಹೋಲಿಕೆ ಮಾಡಿದರೆ ಶೇ.45 ರಷ್ಟು ಹೆಚ್ಚು ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ. ವಿಶ್ವದ 30 ವಿಮಾನ ನಿಲ್ದಾಣಗಳಿಗೆ ಏರ್‌ಬಸ್‌ 380 ವಿಮಾನ ಸೇವೆಯನ್ನು ಎಮಿರೇಟ್ಸ್‌ ನೀಡುತ್ತಿದೆ. 1985ರಿಂದ ಎಮಿರೇಟ್ಸ್‌ ಭಾರತದಲ್ಲಿ ಸೇವೆ ನೀಡಲು ಆರಂಭಿಸಿದೆ.
2003 ರಲ್ಲಿ ಏರ್‌ಬಸ್‌ ಕಂಪನಿ ಈ ವಿಮಾನವನ್ನು ನಿರ್ಮಾಣ ಮಾಡಿದೆ. ಇಲ್ಲಿಯವರೆಗೆ 3 ಪರೀಕ್ಷಾರ್ಥ ವಿಮಾನ ಸೇರಿದಂತೆ ಒಟ್ಟು 254 ವಿಮಾನಗಳನ್ನು ಉತ್ಪಾದನೆ ಮಾಡಲಾಗಿದೆ.(ಏಜೆನ್ಸೀಸ್​)
VIDEO: ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಭಾರತದ ಅತಿ ಉದ್ದ ಸರಕು ರೈಲಿನ ಓಡಾಟ- ಇದಕ್ಕಿದೆ ಹಲವು ವಿಶೇಷತೆ…

FACT CHECK: ಸಾವರ್ಕರ್, ನೆಹರೂ- ಗಾಂಧಿಯ ಜೈಲು ಹೀಗಿತ್ತಾ? ವೈರಲ್​ ಆಗ್ತಿರೋ ಈ ಫೋಟೋದ ಅಸಲಿಯತ್ತು ಇಲ್ಲಿದೆ…

ಕಿಸ್​ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ರಾ…ರಾ…ರಕ್ಕಮ್ಮ ಬೆಡಗಿಗೆ ಬಂಧನದ ಭೀತಿ! ಇಡಿಯಿಂದ ಚಾರ್ಜ್​ಷೀಟ್​ ಸಲ್ಲಿಕೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty + 12 =
Remember me
