ಲಖನೌ:ಭಾರಿ ಗುಂಪು ಕಟ್ಟಿಕೊಂಡು ಮೆರವಣಿಗೆ ಮೂಲಕ ಉತ್ತರ ಪ್ರದೇಶದ ಹತ್ರಾಸ್​ ಗ್ರಾಮಕ್ಕೆ ಭೇಟಿನೀಡಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಹೋಗುತ್ತಿದ್ದ ಸಂದರ್ಭದಲ್ಲಿ ಭಾರಿ ಗಲಾಟೆಯಾದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿಚಾರ್ಜ್​ ನಡೆಸಿದ್ದಾರೆ.
19 ವರ್ಷದ ಯುವತಿಯ ಮೇಲೆ ಆಗಿರುವ ಗ್ಯಾಂಗ್​ರೇಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಕುಟುಂಬವನ್ನು ಭೇಟಿಯಾಗಲು ಮೆರವಣಿಗೆ ಮೂಲಕ ಕಾಂಗ್ರೆಸ್​ ಕಾರ್ಯಕರ್ತರು ಹೋಗುತ್ತಿದ್ದರು. ದಾರಿಯುದ್ದಕ್ಕೂ ಕಾಂಗ್ರೆಸ್​ ಕಾರ್ಯಕರ್ತರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದರು.
ದೆಹಲಿ ಮತ್ತು ಉತ್ತರ ಪ್ರದೇಶದ ನಡುವಿನ ಹೆದ್ದಾರಿಯಲ್ಲಿ (ಯಮುನಾ ಎಕ್ಸ್​ಪ್ರೆಸ್​ ವೇ) ಮೆರವಣಿಗೆ ನಡೆಸುತ್ತಿದ್ದ ಸಂದರ್ಭದಲ್ಲಿ ಗುಂಪನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್​ ನಡೆಸಿದ್ದಾರೆ. ಲಾಠಿಚಾರ್ಜ್​ ವೇಳೆ ರಾಹುಲ್​ ಗಾಂಧಿಯವರು ನೆಲಕ್ಕೆ ಬಿದ್ದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ: ಯೋಗಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್​
ಮೊದಲು ಎಲ್ಲರೂ ಕಾರಿನಲ್ಲಿ ಬರುತ್ತಿದ್ದರು. ಆದರೆ ಪೊಲೀಸರು ಅವರನ್ನು ಮಾರ್ಗಮಧ್ಯೆಯೇ ತಡೆದರು. ಈ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಹಾಗೂ ಭಾರಿ ಗುಂಪು ನಡೆದುಕೊಂಡು ಬರಲು ಶುರುಮಾಡಿತು. ಬೃಹತ್​ ಗುಂಪು ಇದ್ದುದರಿಂದ ಯಾವುದೇ ಕ್ಷಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಬಹುದು ಎಂದು ಅರಿತ ಪೊಲೀಸರು ಅವರನ್ನು ಅಲ್ಲಿಯೇ ತಡೆದು ಮುಂದುವರೆಯಲು ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್​ ಹಾಗೂ ಪ್ರಿಯಾಂಕಾ ನೇತೃತ್ವದ ಗುಂಪು ರಸ್ತೆಯಲ್ಲಿಯೇ ಕುಳಿತುಕೊಂಡಿದ್ದಾರೆ.
ಈ ಕುರಿತು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿರುವ ರಾಹುಲ್ ಹಾಗೂ ಪ್ರಿಯಾಂಕಾ, ಪೊಲೀಸರು ನನ್ನನ್ನು ತಳ್ಳಿದರು, ಲಾಠಿಚಾರ್ಜ್ ಮಾಡಿ ನನ್ನನ್ನು ನೆಲಕ್ಕೆ ಬೀಳಿಸಿದರು. ನಾನು ಕೇಳಲು ಬಯಸುತ್ತೇನೆ, ಮೋದಿಜಿ ಮಾತ್ರ ಈ ದೇಶದಲ್ಲಿ ನಡೆಯಲು ಸಾಧ್ಯವೇ? ಸಾಮಾನ್ಯ ವ್ಯಕ್ತಿ ನಡೆಯಲು ಸಾಧ್ಯವಿಲ್ಲವೇ? ನಮ್ಮ ವಾಹನವನ್ನು ನಿಲ್ಲಿಸಲಾಯಿತು, ಆದ್ದರಿಂದ ನಾವು ನಡೆಯಲು ಪ್ರಾರಂಭಿಸಿದೆವು’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಕರೊನಾ ವೈರಸ್​ ಹಿನ್ನೆಲೆಯಲ್ಲಿ ಇಷ್ಟೊಂದು ಮಂದಿಯ ಗುಂಪು ಬರುವುದು ಸರಿಯಲ್ಲ ಎಂದು ತಾವು ತಡೆದಿರುವುದಾಗಿ ಪೊಲೀಸರು ಹೇಳಿದರು. ಈ ನಡುವೆ, ಸಮಾಜವಾದಿ ಪಕ್ಷವು ಹತ್ರಾಸ್ ಗಡಿಯಲ್ಲಿ ಪ್ರತಿಭಟನೆ ನಡೆಸಿತು.
ನನ್ನ ಅಂಗಾಂಗ ದಾನ ಮಾಡಲು ಪ್ರತಿಜ್ಞೆ ಮಾಡಿರುವೆ: ಟ್ವಿಟರ್​ನಲ್ಲಿ ಹೇಳಿಕೊಂಡ ಅಮಿತಾಭ್

ಒಂದು ರೂಪಾಯಿ ದಂಡದ ವಿರುದ್ಧ ಪುನಃ ಸುಪ್ರೀಂ ಮೆಟ್ಟಿಲೇರಿದ ವಕೀಲ ಪ್ರಶಾಂತ್​ ಭೂಷಣ್​

ಆಹಾರ ನೀಡಿ ಎಂದರೆ ಬೇರೆಬೇರೆ ಚಟುವಟಿಕೆ: ಸ್ವಿಗ್ಗಿ, ಜೊಮಾಟೊ ವಿರುದ್ಧ ಗೂಗಲ್​ ಗರಂ- ನೋಟಿಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − 3 =
Remember me
