ನವದೆಹಲಿ: ಕಲಿಯಲು ವಯಸ್ಸಿನ ಹಂಗು ಇಲ್ಲದಿರುವಾಗಿ ಕಾನೂನು ಪದವಿ ಕಲಿಯಲು ವಯಸ್ಸಿನ ಮಿತಿ ಏಕೆ ಮಾಡಿದ್ದು?
ಇದು 77 ವರ್ಷದ ವೃದ್ಧೆಯ ಪ್ರಶ್ನೆ. ಇದೇ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಇವರೀಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.
ಕಾನೂನು ಪದವಿ ಪಡೆಯಲು ಗರಿಷ್ಠ ವಯೋಮಿತಿ ನಿಗದಿಪಡಿಸಿ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ರೂಪಿಸಿರುವ ನಿಯಮವನ್ನು ಉತ್ತರ ಪ್ರದೇಶದ ಶಹಿಬಾಬಾದ್‌ ನಿವಾಸಿ ರಾಜಕುಮಾರಿ ತ್ಯಾಗಿ ಎಂಬುವವರು ಪ್ರಶ್ನಿಸಿದ್ದಾರೆ.
ಐದು ವರ್ಷಗಳ ಕಾನೂನ ಪದವಿ ಪ್ರವೇಶ ಪಡೆಯಲು ಗರಿಷ್ಠ 20 ವರ್ಷ ಮೀರಬಾರದು ಮತ್ತು ಮೂರು ವರ್ಷಗಳ ಕಾನೂನು ಪದವಿಗೆ ಗರಿಷ್ಠ 30 ವರ್ಷ ಮೀರಬಾರದು ಎಂದು ಬಿಸಿಐ ನಿಯಮ ರೂಪಿಸಿದೆ. ಈ ನಿಯಮವನ್ನು ಪ್ರಶ್ನಿಸಿ ಈಗಾಗಲೇ ಕೆಲವು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅದಿನ್ನೂ ವಿಚಾರಣೆ ಹಂತದಲ್ಲಿದೆ. ಇದೀಗ ತ್ಯಾಗಿ ಅವರೂ ಕೋರ್ಟ್​ ಮೊರೆ ಹೋಗಿದ್ದು, ಈ ನಿಯಮ ರದ್ದು ಮಾಡುವಂತೆ ಕೋರಿದ್ದಾರೆ.
ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಳೆಯಿಂದ ಸೇವೆಗಳು ಆರಂಭ: ಸಂಪೂರ್ಣ ವಿವರ ಇಲ್ಲಿದೆ…
ಪತಿ ಮೃತಪಟ್ಟ ಬಳಿಕ ಏಕಾಂಗಿಯಾಗಿರುವ ರಾಜಕುಮಾರಿ ತ್ಯಾಗಿ ಅವರಿಗೆ ಜಮೀನಿನ ದಾಖಲೆಗಳು ಮತ್ತು ಉಯಿಲು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕಾನೂನಿನ ಜ್ಞಾನ ಪಡೆದುಕೊಳ್ಳುವ ಹಂಬಲ, ಇದೇ ಕಾರಣಕ್ಕೆ ಮೂರು ವರ್ಷದ ಕಾನೂನು ಪದವಿ ಪಡೆಯಲು ಮುಂದಾಗಿದ್ದರು. ಆದರೆ ಬಿಸಿಐ ರೂಪಿಸಿರುವ ನಿಯಮದಿಂದಾಗಿ ಅವರಿಗೆ ಪ್ರವೇಶ ಸಿಗಲಿಲ್ಲ.
ಇದನ್ನೀಗ ಇವರು ಕೋರ್ಟ್​ನಲ್ಲಿ ಪ್ರಶ್ನಿಸಿದ್ದಾರೆ. ಈ ನಿಯಮದಿಂದಾಗಿ ಕಾನೂನಿನ ಮುಂದೆ ಎಲ್ಲರೂ ಸಮಾನರು ಹಾಗೂ ಯಾವುದೇ ವೃತ್ತಿ ಹೊಂದುವ ಅವಕಾಶವನ್ನು ನಿರಾಕರಿಸುತ್ತದೆ ಎಂದು ಅವರು ವಾದಿಸಿದ್ದಾರೆ. ಸಂವಿಧಾನದ ಅನ್ವಯ ತನ್ನ ಹಕ್ಕು ಕಾಪಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ನಿನ್ನ ಬಿಟ್ಟು ಅರೆ ಕ್ಷಣ ಇರಲಾರೆ ಎಂದಾಕೆ ಕಾಲ್​ ಮಾಡಿದ್ರೂ ಸ್ವೀಕರಿಸಿಲ್ಲ ಎಂದು ಈತ ಹೀಗೆ ಮಾಡೋದಾ?

16 ಬಾರಿ ಬಂಧಿಸಿದ್ದ ಪೊಲೀಸ್​ ಅಧಿಕಾರಿಗೇ ಕಿಡ್ನಿ ಕೊಟ್ಟು ಕಾಪಾಡಿದಳು!

ಮಾಸ್ಕ್​ ಧರಿಸಿ ಬಂದರು, ಸ್ಯಾನಿಟೈಸರ್​ ಹಾಕಿಕೊಂಡರು… ಆಮೇಲೆ ಏನು ಮಾಡಿದ್ರು ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × two =
Remember me
