ಹೈದರಾಬಾದ್:ಜೊಮ್ಯಾಟೋದ ಮೂಲಕ ಚಿಕನ್‌ ಬಿರಿಯಾನಿ ಪಾರ್ಸೆಲ್‌ ತರಿಸಿಕೊಂಡ ವ್ಯಕ್ತಿಯೊಬ್ಬ, ಬಿರಿಯಾನಿಯಲ್ಲಿ ಲೆಗ್‌ಪೀಸ್‌ ಇಲ್ಲದೇ ಭಾರಿ ನಿರಾಸೆಗೆ ಒಳಗಾಗಿ, ಸಿಟ್ಟಿನಿಂದ ಸಚಿವರಿಗೆ ದೂರು ದಾಖಲು ಮಾಡಿದ್ದಾನೆ. ಈ ದೂರನ್ನು ನೋಡಿ ಸಚಿವರು ಸುಸ್ತಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮಾಷೆಗೆ ವಸ್ತುವಾಗಿ ವೈರಲ್‌ ಆಗುತ್ತಿದೆ.ಅಷ್ಟಕ್ಕೂ ಆಗಿರುವುದು ಏನೆಂದರೆ ತೋಟಕುರಿ ರಘುಪತಿ ಎಂಬುವವರು ಬಿರಿಯಾನಿ ತರಿಸಿಕೊಂಡಿದ್ದಾರೆ. ಆದರೆ ಅದಲ್ಲಿ ಲೆಗ್‌ಪೀಸ್ ಇರಲಿಲ್ಲ. ಕೂಡಲೇ ಸಿಟ್ಟುಗೊಂಡ ಅವರು, ತೆಲಂಗಾಣದ ನಗರಾಭಿವೃದ್ಧಿ ಸಚಿವ ಕೆಟಿ ರಾಮರಾವ್ ಅವರನ್ನು ಟ್ವಿಟರ್‌ನಲ್ಲಿ ಟ್ಯಾಗ್‌ ಮಾಡಿ ದೂರು ದಾಖಲಿಸಿದ್ದಾರೆ. ಸಾಮಾನ್ಯವಾಗಿ ರಾಮರಾವ್‌ ಅವರು ಜನತೆಯ ಮನವಿಗೆ ಸ್ಪಂದಿಸುವ ಕಾರಣ, ಈ ರೀತಿ ಟ್ಯಾಗ್‌ ಮಾಡಿದ್ದಾರೆ.
ಬಿರಿಯಾನಿಯ ಗುಣಮಟ್ಟ ಚೆನ್ನಾಗಿಲ್ಲ, ನಾನು ಆರ್ಡರ್ ಮಾಡಿದ್ದ ಬಿರಿಯಾನಿಯಲ್ಲಿ ಹೆಚ್ಚುವರಿ ಮಸಾಲೆ ಇಲ್ಲ, ಲೆಗ್‌ಪೀಸ್‌ ಇಲ್ಲ ಎಂದು ಫೋಟೋ ಸಹಿತ ಟ್ವೀಟ್‌ ಮಾಡಿದ್ದಾರೆ. ಈಗ ನಾನೇನು ಮಾಡಬೇಕು ಹೇಳಿ ಎಂದಿದ್ದಾರೆ. ಅದನ್ನು ನೋಡಿದ ಸಚಿವರಿಗೆ ಏನು ಉತ್ತರಿಸಬೇಕು ಎಂದು ತಿಳಿಯಲಿಲ್ಲ. ಆದರೂ ಹಾಸ್ಯದ ರೂಪದಲ್ಲಿ ಪ್ರತಿಕ್ರಿಯಿಸಿರುವ ಅವರು, ನಿಮ್ಮ ಬಿರಿಯಾನಿಯಲ್ಲಿ ಲೆಗ್‌ ಇಲ್ಲದಿದ್ದರೆ ನಾನು ಏನು ಮಾಡಬೇಕು ಎಂದು ನೀವು ನಿರೀಕ್ಷಿಸಿರುವಿರಿ? ಲೆಗ್‌ಪೀಸ್‌ ಎಲ್ಲಿಂದ ಕೊಡಲಿ? ನನ್ನನ್ನೇಕೆ ಟ್ಯಾಗ್‌ ಮಾಡಿರುವಿರಿ ಸಹೋದರ ಎಂದು ಪ್ರಶ್ನಿಸಿದ್ದಾರೆ.
And why am I tagged on this brother? What did you expect me to do 🤔🙄https://t.co/i7VrlLRtpV— KTR (@KTRTRS)May 28, 2021
And why am I tagged on this brother? What did you expect me to do 🤔🙄https://t.co/i7VrlLRtpV
ಇದೀಗ ಭಾರಿ ವೈರಲ್‌ ಆಗಿದ್ದು, ಜನರು ತಮಾಷೆಯಾಗಿ ಕಮೆಂಟ್‌ ನೀಡುತ್ತಿದ್ದಾರೆ. ಕರೊನಾದಿಂದ ಭಯಭೀತರಾಗಿರುವ ಜನರಿಗೆ ಇದು ತುಂಬಾ ಮನರಂಜನೆ ನೀಡುತ್ತಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ ಟೀಚರ್‌ ಲೈಂಗಿಕ ಸಂಬಂಧ ಬೆಳೆಸಿದ್ದಾರೆ, ಪ್ಲೀಸ್‌ ಬೇರೆ ಮದ್ವೆಯಾಗೋಕೆ ಬಿಡ್ಬೇಡಿ- ಯುವತಿ ಗೋಳಾಟ
‘ಆಮೀರ್‌ಖಾನ್‌ ಎದುರು ಖ್ಯಾತ ವೈದ್ಯ ಬಿಚ್ಚಿಟ್ಟಿದ್ದಾರೆ ನೋಡಿ ಮೆಡಿಕಲ್‌ ಮಾಫಿಯಾ ರಹಸ್ಯ- ಈಗೇನ್‌ ಮಾಡ್ತೀರಾ?’
ಮದ್ವೆಯಾಗಿ ಮಗುವಾದ್ರೂ ಕಾಡುತ್ತಿದ್ದ ಪ್ರಿಯಕರ: ತಾನೇ ಮುಂದೆ ನಿಂತು ತಾಳಿ ಕಟ್ಟಿಸಿದ ಪತಿರಾಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + ten =
Remember me
