ಬೆಂಗಳೂರು:ಕರೊನಾ ಸೋಂಕಿನ ನಡುವೆ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ರೈಲ್ವೆ ಸಿಬ್ಬಂದಿ, ಅಧಿಕಾರಿಗಳಿಗೆ ರೈಲ್ವೆ ಸಚಿವ ಪೀಯೂಷ್ ಗೋಯಲ್ ನಲ್ಮೆಯ ಮತ್ತು ಆತ್ಮಸ್ಥೈರ್ಯ ತುಂಬು ಪತ್ರ ಬರೆದಿದ್ದಾರೆ.
ಕರೊನಾ ಎರಡನೇ ಅಲೆ ದೇಶದೆಲ್ಲೆಡೆ ಶುರುವಾಗಿದೆ. ಎಲ್ಲೆಡೆ ಲಾಕ್‌ಡೌನ್ ಕುರಿತಾದ ಚರ್ಚೆಗಳು ನಡೆಯುತ್ತಿವೆ. ಹೀಗಿದ್ದರೂ, ದೇಶದ ಸಾರಿಗೆ ವ್ಯವಸ್ಥೆಯನ್ನು ಸದೃಢವಾಗಿಸಲು ಮತ್ತು ಆರ್ಥೀಕತೆಗೆ ಕೊಡುಗೆ ನೀಡಲು ರೈಲ್ವೆ ಸಿಬ್ಬಂದಿ ತಮ್ಮ ಕೆಲಸ ಮುಂದುವರಿಸಿದ್ದಾರೆ. ಕರೊನಾ ಸೋಂಕಿನ ಭೀತಿಯ ನಡುವೆಯೇ ಕೆಲಸ ಮಾಡುತ್ತಿರುವ ರೈಲ್ವೆ ಸಿಬ್ಬಂದಿಯನ್ನು ಶ್ಲಾಘಿಸಲು ಪೀಯೂಷ್ ಗೋಯಲ್ ಪತ್ರ ಬರೆದು ರೈಲ್ವೆ ವಿಭಾಗಗಳಿಗೆ ಕಳುಹಿಸಿದ್ದಾರೆ. ಪತ್ರದ ಸಾರಾಂಶ ಹೀಗಿದೆ….
ನಲ್ಮೆಯ ರೈಲ್ವೆ ಕುಟುಂಬದ ಸದಸ್ಯರೆ..
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದರ್ಶಿ ನಾಯತ್ವದ ಬಗ್ಗೆ ಉಲ್ಲೇಖಿಸಿದ್ದಾರೆ. ಜತೆಗೆ ಕರೊನಾ ಸಂಕಷ್ಟದ ನಡುವೆ 2020-21ನೇ ಆರ್ಥಿಕ ವರ್ಷ ಮುಗಿದಿದೆ. ಈ ಅವಧಿಯಲ್ಲಿ ನಿಮ್ಮ ದೃಢತೆ, ಸಂಕಲ್ಪ ಮತ್ತು ನಿರ್ಧಾರಗಳಿಂದ ರೈಲ್ವೆ ಇಲಾಖೆ ಉತ್ತಮ ಸೇವೆ ಸಲ್ಲಿಸಿದೆ.
ಕೋವಿಡ್ 19 ಸೋಂಕಿನ ಸಂದರ್ಭದಲ್ಲಿ ನಮ್ಮ ರೈಲ್ವೆ ಕುಟುಂಬ ದೇಶ ಸೇವೆಗೆ ತನ್ನನ್ನೇ ಸಮರ್ಪಿಸಿಕೊಂಡಿತು. ಇಡೀ ಜಗತ್ತು ಸ್ತಬ್ಧವಾದರೂ ರೈಲ್ವೆ ಸಿಬ್ಬಂದಿ ಒಂದು ದಿನವೂ ರಜೆ ಪಡೆಯದೇ ಆರ್ಥಿಕತೆಯ ಚಕ್ರ ಚಲಿಸುವಂತೆ ಮಾಡಿದ್ದಾರೆ. ದೇಶದ ವಿದ್ಯುತ್ ಸ್ಥಾವರಕ್ಕೆ ಬೇಕಾದ ಕಲ್ಲಿದ್ದಲು, ರೈತರಿಗೆ ರಸಗೊಬ್ಬರ, ಬಳಕೆದಾರರಿಗೆ ದವಸ ಧಾನ್ಯಗಳು ಸೇರಿ ಇನ್ನಿತರ ವಸ್ತುಗಳ ಪೂರೈಕೆ ಮಾಡಲಾಗಿದೆ. ನಿಮ್ಮ ಮನೋಬಲ ಮತ್ತು ಸಹಿಷ್ಣುತೆಯಿಂದಾಗಿಯೇ ಸಂಕಷ್ಟವನ್ನು ಸುಯೋಗವಾಗಿ ಪರಿವರ್ತಿಸಲು ಸಾಧ್ಯವಾಯಿತು.
ದೂರದ ಊರುಗಳಲ್ಲಿ ಸಿಲುಕಿದ್ದ 63 ಲಕ್ಷ ನಾಗರಿಕರನ್ನು ಅವರ ಕುಟುಂಬದವರೊಂದಿಗೆ ಸೇರಿಸಲು 4,621 ಶ್ರಮಿಕ ವಿಶೇಷ ರೈಲು ಸೇವೆ ನೀಡಲಾಯಿತು. ಲಾಕ್‌ಡೌನ್ ಮಿತಿಗಳಿದ್ದರೂ 370 ಸುರಕ್ಷತಾ ಮತ್ತು ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಲಾಯಿತು. ಕಿಸಾನ್ ರೈಲು ಸೇವೆ ಮೂಲಕ ಅನ್ನದಾತರಿಗೆ ದೊಡ್ಡ ಮಾರುಕಟ್ಟೆಗಳನ್ನು ಸಂಪರ್ಕಿಸುವ ಮಾಧ್ಯವಾಗಿ ಕೆಲಸ ಮಾಡಿದ್ದೇವೆ. ನಿಮ್ಮ ಕೆಲಸದಿಂದಲೇ ಲಕ್ಷಾಂತರ ಜನರ ಮನಸು ಮತ್ತು ಹೃದಯ ಗೆದ್ದಿದ್ದೀರಿ.
ಈ ಅವಧಿಯಲ್ಲಿ 1,233 ದಶಲಕ್ಷ ಟನ್ ಸರಕು ಸಾಗಣೆ ಉತ್ಪನ್ನಗಳನ್ನು ಲೋಡ್ ಮಾಡಲಾಗಿದೆ. 6,015 ರೂಟ್ ಕಿ.ಮೀ. ರೈಲು ಮಾರ್ಗ ವಿದ್ಯುದ್ಧೀಕರಣ ಮಾಡಲಾಗಿದೆ. ಇವೆಲ್ಲವೂ ನಿಮ್ಮ ಶ್ರಮಕ್ಕೆ ಸಾಕ್ಷಿ.
ನಿಮ್ಮ ಸಮರ್ಪಣೆ ಮತ್ತು ಅಗಾಧ ಪರಿಶ್ರಮಕ್ಕೆ ನನ್ನ ಧನ್ಯವಾದಗಳು. ಈ ಉತ್ತೇಜನಾತ್ಮಕ ತಂಡದೊಂದಿಗೆ ನಾವು ದಾಖಲೆಗಳನ್ನು ಮುರಿಯುತ್ತೇವೆ, ಬೃಹತ್ ಗುರಿಗಳನ್ನು ಸಾಧಿಸುತ್ತೇವೆ, ನಮ್ಮ ಕಾರ್ಯಕ್ಷಮತೆಯಿಂದ ಇತರರಿಗೆ ಮಾದರಿಯಾಗುತ್ತೇವೆ ಹಾಗೂ ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ಸಲ್ಲಿಸುತ್ತೇವೆ ಎಂದು ವಿಶ್ವಾಸದಿಂದ ಹೇಳುತ್ತೇನೆ.
ಜೈ ಹಿಂದ್ಪೀಯೂಷ್ ಗೋಯಲ್
ಮಗು ಗರ್ಭದಲ್ಲಿದ್ದಾಗಲೇ ಮತ್ತೊಮ್ಮೆ ಗರ್ಭ ಧರಿಸಿದ ಮಹಿಳೆ- ನಂಬಲು ಆಗ್ತಿಲ್ವಾ? ಈ ಘಟನೆ ಓದಿ..

ಸಿಡಿ ಲೇಡಿಯ ಪರ ವಕೀಲನಿಗೆ ಬಂತು ಕುತ್ತು… ವಕೀಲಿವೃತ್ತಿ ನಡೆಸುವ ಪರವಾನಗಿ ಆಯ್ತು ಅಮಾನತು!

ಅತ್ಯಾಚಾರ ಸಂತ್ರಸ್ತೆಯ ದೂರು ಸ್ವೀಕರಿಸಲು ಮಲಗು ಬಾ ಎಂದ ಎಸಿಪಿ! ಕಾಮುಕ ಪೊಲೀಸ್​ ವಜಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 17 =
Remember me
