ಲಖನೌ:ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಉತ್ತರ ಪ್ರದೇಶದ ಫರುಖಾಬಾದ್‌ ಕಾಮುಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಫರುಖಾಬಾದ್‌ ಕೋರ್ಟ್​ ಆದೇಶಿಸಿದೆ.
ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆಯಡಿ ಈತನ ವಿರುದ್ಧ ಕೇಸು ದಾಖಲಾಗಿತ್ತು. ಶಿಕ್ಷೆಯ ಜತೆಗೆ 60 ಸಾವಿರ ರೂ.ಗಳ ದಂಡವನ್ನು ಕೋರ್ಟ್​ ವಿಧಿಸಿದೆ.
ರಾಜ್ ಬಹದ್ದೂರ್ ಅಲಿಯಾಸ್ ಭಗತ್ ಎಂಬಾತ ಶಿಕ್ಷೆಗೆ ಒಳಗಾದವ. ಕನ್ನೌಜ್‌ನ ಕನ್ಶಿರಾಮ್ ಕಾಲೋನಿಯ ನಿವಾಸಿಯಾಗಿರುವ ಈತ ಕಳೆದ ಜನವರಿ 22 ರಂದು ರಾಜ್‌ಬಹಾದೂರ್ ಗ್ರಾಮದಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಕೊಲೆ ಮಾಡಿದ್ದ.
ಬಾಲಕಿಗೆ ಚಾಕಲೇಟ್​ ನೀಡುವ ಆಮಿಷ ಒಡ್ಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಈತ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಬಾಲಕಿ ಮನೆಗೆ ಹಿಂದಿರುಗದಿದ್ದಾಗ ಅವಳನ್ನು ಹುಡುಕಲು ಪ್ರಾರಂಭಿಸಿದ್ದರು. ನಂತರ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು.
ಜನವರಿ 23 ರ ಬೆಳಗ್ಗೆ ಹೊಲವೊಂದರಲ್ಲಿ 6 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಬಾಲಕಿಯ ಬಟ್ಟೆಗಳು ದೇಹದ ಬಳಿ ಬಿದ್ದಿದ್ದವು, ಅಷ್ಟೇ ಅಲ್ಲದೇ ಬಾಲಕಿಯ ಕಣ್ಣುಗಳೂ ನಾಪತ್ತೆಯಾಗಿದ್ದವು! ಈಗ ಈ ಕಾಮುಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಹನಿಮೂನ್​ನಲ್ಲೂ ದೂರವಿದ್ದ, ಔಷಧ ಕೊಟ್ರೂ ಹತ್ರ ಬರಲಿಲ್ಲ- ಪತಿಯ ವಿರುದ್ಧ ಪೊಲೀಸರಲ್ಲಿ ದೂರು!

ಟೀ ಶಾಪ್​ ತೆರವಿಗೆ ಬಂದ ಪೊಲೀಸ್​ ಅಧಿಕಾರಿಯ ಮುಖಕ್ಕೆ ಬಿಸಿಚಹ ಎಸೆದು ಜೈಲು ಪಾಲಾದಳು!

ನೌಕಾಪಡೆಯಲ್ಲಿ ನೌಕರಿಯ ಕನಸೀಗ ನನಸು- 210 ಹುದ್ದೆಗಳು ಖಾಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + nineteen =
Remember me
