ಪಣಜಿ:ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವವರು ಅದೆಷ್ಟೋ ಮಂದಿ. ತುರ್ತಾಗಿ ಹೋಗಲೇಬೇಕಾದ ಅನಿವಾರ್ಯತೆಯಿಂದಲೋ ಇಲ್ಲವೇ ಹೇಗೋ ರೈಲು ಬಂದು ಬಿಟ್ಟಿದೆ, ಹತ್ತಿಕೊಂಡೇ ಬಿಡುವ ಎಂದುಕೊಂಡು ಚಲಿಸುತ್ತಿರುವ ಟ್ರೇನ್​ ಒಳಗೆ ನುಗ್ಗುವ ಸಾಹಸ ಮಾಡುವವರೇ ಹೆಚ್ಚು.
ಈ ರೀತಿಯ ಅನೇಕ ಘಟನೆಗಳು ದಿನನಿತ್ಯ ಒಂದಿಲ್ಲೊಂದು ರೈಲು ನಿಲ್ದಾಣದಲ್ಲಿ ನಡೆಯುತ್ತಲೇ ಇರುತ್ತವೆ. ಎಷ್ಟೋ ಮಂದಿ ಪ್ರಾಣ ಕಳೆದುಕೊಳ್ಳುತ್ತಲೇ ಇದ್ದಾರೆ.ಇದೇ ರೀತಿ ಸರ್ಕಸ್​ ಮಾಡಲು ಹೋದ ವ್ಯಕ್ತಿಯೊಬ್ಬನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ರೈಲ್ವೆ ಸಚಿವಾಲಯ ಈ ವಿಡಿಯೋ ಹರಿಬಿಟ್ಟಿದೆ. ಇದರಿಂದ ರೈಲು ಹತ್ತಲು ಹೋದ ವ್ಯಕ್ತಿಯೊಬ್ಬ ಆಕಸ್ಮಿಕವಾಗಿ ಜಾರಿ ಬಿದ್ದಿದ್ದು, ಆರ್‌ಪಿಎಫ್ ಸಿಬ್ಬಂದಿ ಕ್ಷಣ ಮಾತ್ರದಲ್ಲಿ ಆತನನ್ನು ಸಾವಿನಿಂದ ಪಾರು ಮಾಡಿರುವುದನ್ನು ಕಾಣಬಹುದಾಗಿದೆ.
ಈ ಘಟನೆ ನಡೆದಿರುವುದು ಗೋವಾದ ವಾಸ್ಕೋಡ ಗಾಮಾ ರೈಲು ನಿಲ್ದಾಣದಲ್ಲಿ. ಪ್ರಯಾಣಿಕನೊಬ್ಬ, ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿದ್ದಾನೆ. ಆಗ ಸಮತೋಲನ ಕಳೆದುಕೊಂಡ ಆತ ಪ್ಲಾಟ್‌ಫಾರಂ ಹಾಗೂ ರೈಲಿನ ನಡುವೆ ಸಿಲುಕಿಕೊಂಡಿದ್ದಾನೆ. ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಆ ವ್ಯಕ್ತಿ ಕೂದಲೆಳೆಯ ಅಂತರದಲ್ಲಿ ಆತನನ್ನು ಸಾವಿನಿಂದ ಪಾರಾಗಿದ್ದಾನೆ.
Life saving act by RPF personnel at Vasco station in SWR!
At Vasco station,a passenger tried to board the moving train 02741 Vasco-Patna express &slipped into the gap between Platform and train
Passengers are requested not to board/deboard a moving train. It may risk your life.pic.twitter.com/zkIva0rAkJ
— Ministry of Railways (@RailMinIndia)March 11, 2021

ಈತನ ರಕ್ಷಣೆ ಮಾಡಿರುವವರು ರೈಲ್ವೆ ರಕ್ಷಣಾ ಪಡೆ ಸಿಬ್ಬಂದಿ ಕೆಎಂ ಪಾಟೀಲ್ ಎಂದು ಗುರುತಿಸಲಾಗಿದೆ. ಇವರಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.ಆದರೆ ಎಲ್ಲ ಸಮಯದಲ್ಲಿ ಅದೃಷ್ಟ ನಿಮಗೆ ಕೈಗೂಡುವುದಿಲ್ಲ. ಜೀವದ ಮೇಲೆ ನಿಮಗೆ ಪ್ರೀತಿ ಇದ್ದರೆ ಇಂಥ ದುಷ್ಕೃತ್ಯಕ್ಕೆ ಕೈಹಾಕಬೇಡಿ ಎಂದು ರೈಲ್ವೆ ಇಲಾಖೆ ಹೇಳಿದೆ.
ಪ್ರಾಣ ಕಳೆದುಕೊಂಡರೆ ನಿಮಗೆ ಏನೂ ಗೊತ್ತಾಗದೇ ಇರಬಹುದು. ಆದರೆ ಶಾಶ್ವತವಾಗಿ ಅಂಗವಿಕರಾಗಿ ಇರಬೇಕಾದ ಸ್ಥಿತಿ ಬಂದರೆ ಹೇಗೆ ಎನ್ನುವುದನ್ನೊಮ್ಮೆ ಊಹಿಸಿಕೊಳ್ಳಿ…
ಆಸ್ಪತ್ರೆಯಲ್ಲಿರೋ ದೀದಿ ಹತ್ರ ಇರೋದು ಒಂಬತ್ತೇ ಗ್ರಾಂ ಚಿನ್ನ, ಒಂದೇ ಒಂದು ಸ್ವಂತ ವಾಹನನೂ ಇಲ್ವಂತೆ!

10 ವರ್ಷ ಚೆನ್ನಾಗಿದ್ದ ನನ್​ ಗಂಡ ಪಕ್ಕದ್ಮನೆ ಮಹಿಳೆಯಿಂದಾಗಿ ಹಾದಿ ತಪ್ತಿದ್ದಾರೆ… ಪ್ಲೀಸ್​ ದಾರಿ ತೋರಿ…

ದಿಢೀರ್​ ಕುಸಿದು ಬಿತ್ತು ಅರಮನೆ ಗೋಡೆ; ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣ

ಕಾಂಗ್ರೆಸ್​ಗೆ ಬಿಗ್​ ಶಾಕ್​! ಪಕ್ಷ ತೊರೆದ 170 ಶಾಸಕರು: ಸಮೀಕ್ಷೆಯಿಂದ ಬಯಲಾಯ್ತು ಸತ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − nine =
Remember me
