ಲಖನೌ:ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಬಂದಿದ್ದು, ಇನ್ನು ಉಳಿದಿರುವುದು ನಾಲ್ಕು ದಿನಗಳು ಮಾತ್ರ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಪ್ರದೇಶ ಪೊಲೀಸರ ವಾಟ್ಸ್‌ಆ್ಯಪ್‌ ತುರ್ತು ಡಯಲ್ ಸಂಖ್ಯೆ ‘112’ಕ್ಕೆ ಅಪರಿಚಿತರಿಂದ ಈ ಬೆದರಿಕೆ ಬಂದಿರುವುದಾಗಿ ಮೂಲಗಳು ಹೇಳಿವೆ. ಏಪ್ರಿಲ್ 29ರ ಸಂಜೆ ತುರ್ತು ನಂಬರ್‌ಗೆ ಬೆದರಿಕೆ ಸಂದೇಶ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕೊಲೆ ಬೆದರಿಕೆ ಹಾಕಿದವರು ಯಾರು ಎಂಬ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಕಣ್ಗಾವಲು ತಂಡವನ್ನು ರಚನೆ ಮಾಡಲಾಗಿದೆ.
ಅಷ್ಟಕ್ಕೂ ಯೋಗಿ ಅವರಿಗೆ ಈ ಹಿಂದೆ ಕೂಡ ಸಾಕಷ್ಟು ಬಾರಿ ಕೊಲೆ ಬೆದರಿಕೆ ಬಂದಿವೆ. ಕಳೆದ ಸೆಪ್ಟೆಂಬರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಆದಿತ್ಯನಾಥ್‌ಗೆ ಬೆದರಿಕೆ ಕರೆಗಳು ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಪೈಕಿ ನವೆಂಬರ್‌ನಲ್ಲಿ ಬಂದಿದ್ದ ಕೊಲೆ ಬೆದರಿಕೆಯನ್ನು ಕಳಿಸಿದ್ದವ 15 ವರ್ಷದ ಬಾಲಕನಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದರು. ರಿಮಾಂಡ್‌ ಹೋಂಗೆ ಆತನನ್ನು ಕಳುಹಿಸಲಾಗಿದೆ.ಯೋಗಿ ಆದಿತ್ಯನಾಥ ಅವರಿಗೆ 2017 ರಲ್ಲಿ ಜೆಡ್‌ಪ್ಲಸ್ ಭದ್ರತೆ, ವಿವಿಪಿ ಸಶಸ್ತ್ರ ಭದ್ರತಾ ಸುರಕ್ಷತೆ ನೀಡಲಾಗಿತ್ತು. ಸದ್ಯ ಇವರಿಗೆ 25-28 ಸಶಸ್ತ್ರ ಕಮಾಂಡೋಗಳ ಭದ್ರತೆ ನೀಡಲಾಗಿದೆ. ಬೆದರಿಕೆ ಕರೆಯಿಂದಾಗಿ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. ಅವರ ಸಂಚಾರಕ್ಕೆ ಸಿಐಎಸ್ಎಫ್ ಕಮಾಂಡೋಗಳ ತಂಡವು ಭದ್ರತೆ ಒದಗಿಸುತ್ತಿದೆ.
ಮೆಟ್ರೊ ಮೇಲ್ಸೆತುವೆ ಕುಸಿದು ಭಾರಿ ದುರಂತ- 13 ಮಂದಿಯ ದಾರುಣ ಸಾವು: ಅವಶೇಷದಡಿ ನೂರಾರು ಪ್ರಯಾಣಿಕರು

ವಿಚ್ಛೇದನದ ಪ್ರಕರಣ ಬಾಕಿ ಇರುವಾಗಲೇ ಗಂಡ ತೀರಿಕೊಂಡರು- ಅವರ ಆಸ್ತಿ ನನಗೆ ಸಿಗುವುದಿಲ್ಲವೆ?

ಸಂಪೂರ್ಣ ಲಾಕ್‌ಡೌನ್‌ ಮಾಡಿದ್ದಾಗ ಕೇಂದ್ರವನ್ನು ಎರ್ರಾಬಿರ್ರಿ ಬೈದಿದ್ದ ರಾಹುಲ್‌ ಕೊಟ್ಟರೀಗ ಈ ಒಂದು ಸಲಹೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
