ನವದೆಹಲಿ:ಪ್ರಧಾನಿ ನರೇಂದ್ರ ಮೋದಿಯವರ ಜೀವನಚರಿತ್ರೆಯುಳ್ಳ “ಪಿಎಂ ನರೇಂದ್ರ ಮೋದಿ” ಸಿನಿಮಾದ ಸಹ-ನಿರ್ಮಾಪಕ ಅಮಿತ್ ಬಿ ವಾಧ್ವಾನಿ ಅವರಿಗೆ ಕೊಲೆ ಬೆದರಿಕೆ ಬಂದಿದೆ.
ಈ ಕುರಿತು ಉದ್ಯಮಿಯೂ ಆಗಿರುವ ಅಮಿತ್ ಬಿ. ವಾಧ್ವಾನಿ ಅವರು ಸೈಬರ್ ಸೆಲ್‌ಗೆ ದೂರು ನೀಡಿದ್ದಾರೆ. ತಮಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಬಂದಿದೆ ಎಂದು ಆರೋಪಿಸಿದ್ದಾರೆ.
ತಾವು ಈ ಚಿತ್ರಕ್ಕೆ ಸಹ ನಿರ್ಮಾಪಕರಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಪ್ಟಿಮಿಸ್ಟಿಕ್ಸ್ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಬರಹಗಳು ಪ್ರಕಟಗೊಂಡಿದ್ದವು. ಇದರಲ್ಲಿಯೇ ತಮ್ಮ ಹಾಗೂ ತಮ್ಮ ಅಪ್ರಾಪ್ತ ಮಗನ ಫೋಟೋ ಬಳಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ವಾಧ್ವಾನಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಮುನಿರತ್ನಗೆ ಬಿಗ್​ ರಿಲೀಫ್: ತುಳಸಿ ಮುನಿರಾಜು ಅವರ ಅರ್ಜಿ ವಜಾ
ತಮ್ಮ ಕುಟುಂಬಸ್ಥರ ಬಗ್ಗೆಯೂ ಅತ್ಯಂತ ಅವಹೇಳನಕಾರಿಯಾಗಿ ಇಲ್ಲ ಉಲ್ಲೇಖಮಾಡಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.2019ರ ಮಾರ್ಚ್‌ನಲ್ಲಿ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆ ಆಗಿತ್ತು. ಮೋದಿ ಪಾತ್ರವನ್ನು ವಿವೇಕ್‌ ಓಬೆರಾಯ್‌ ನಿಭಾಯಿಸಿದ್ದರು. ಓಮಂಗ್‌ ಕುಮಾರ್‌ ನಿರ್ದೇಶನ ಮಾಡಿದ್ದರು. ಆ ಸಿನಿಮಾವನ್ನು ಈಗ ಮರು ಬಿಡುಗಡೆ ಮಾಡಲಾಗಿದೆ. ಅ.15ರಂದು ದೇಶಾದ್ಯಂತ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಮಾಹಿತಿಯೂ ಹೊರಬಿದ್ದಿದೆ.
‘ಲಾಕ್‌ಡೌನ್‌ ಬಳಿಕ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವ ಮೊದಲ ಸಿನಿಮಾ’ ಎಂಬ ವಾಕ್ಯವನ್ನು ಹೊಂದಿರುವ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ.
ಮಕ್ಕಳನ್ನು ಸೊಂಟಕ್ಕೆ ಕಟ್ಟಿ ಕಾಲುವೆಗೆ ಹಾರಿ ದಾವಣಗೆರೆ ಶಿಕ್ಷಕಿ ಆತ್ಮಹತ್ಯೆ!

ಉಸಿರಾಟದ ಸಮಸ್ಯೆ: ರಾಷ್ಟ್ರಪತಿ ಪದಕ ಪುರಸ್ಕೃತ ನಿವೃತ್ತ ಎಸ್​ಪಿ ನೂರುಲ್ಲಾ ವಿಧಿವಶ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:18 − three =
Remember me
