ನವದೆಹಲಿ:ಮುಂದಿನ ವರ್ಷ ಆಚರಿಸುತ್ತಿರುವ 75ನೇ ಸ್ವಾತಂತ್ರ್ಯೋತ್ಸವದ ವೇಳೆಗೆ ದೇಶದಲ್ಲಿ ಪ್ರತಿಯೊಬ್ಬರೂ ಮನೆ ಹೊಂದುವ ಮೂಲಕ ಸತಂತ್ರವಾಗಿ ಬಾಳುವಂಥ ಅವಕಾಶವನ್ನು ಕಲ್ಪಿಸುವುದು ನಮ್ಮ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿಯಲ್ಲಿ ನಿರ್ಮಾಣ ಆಗಿರುವ ಲೈಟ್​ ಹೌಸ್​ ಪ್ರಾಜೆಕ್ಟ್​ (ಹಗುರ ಮನೆ ಯೋಜನೆ) ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಪ್ರತಿಯೊಬ್ಬರಿಗೂ ಮನೆ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ ಎಂದರು.
ಕೈಗೆಟಕುವ ದರದಲ್ಲಿ ಸ್ಥಿರವಾದ ಮನೆಗಳನ್ನು ನಿರ್ಮಿಸಿಕೊಡುವ ಆಶಾ-ಭಾರತ ಯೋಜನೆ ದೇಶದಲ್ಲಿ ಮುಂದುವರಿದಿದ್ದು, ಆಧುನಿಕ ತಂತ್ರಜ್ಞಾನಗಳ ಮೂಲಕ ಮನೆಗಳನ್ನು ನಿರ್ಮಿಸಿಕೊಡುವ ಕೆಲಸಕ್ಕೆ ಸಂಶೋಧನೆ ಮತ್ತು ಸ್ಟಾರ್ಟ್ ಅಪ್ ಉದ್ಯಮಗಳ ಪ್ರಚಾರ ನಡೆಯುತ್ತಿದೆ ಎಂದು ಮೋದಿ ಹೇಳಿದರು.
ಈ ಯೋಜನೆಯಡಿ ಮನೆಗಳನ್ನು ಆರಂಭಿಕ ಹಂತಗಳಲ್ಲಿ ಇಂದೋರ್, ರಾಜ್​ಕೋಟ್, ಚೆನ್ನೈ, ರಾಂಚಿ, ಅಗರ್ತಲಾ ಮತ್ತು ಲಖನೌಗಳಲ್ಲಿ ನಿರ್ಮಿಸಲಾಗುತ್ತದೆ. ಪ್ರತಿ ಕಡೆಗಳಲ್ಲಿ ಸುಮಾರು ಸಾವಿರ ಮನೆಗಳನ್ನು ಮೂಲಭೂತ ಸೌಕರ್ಯಗಳೊಂದಿಗೆ ನಿರ್ಮಿಸಲಾಗುತ್ತದೆ.
ತಮಿಳುನಾಡು, ಆಂಧ್ರ ಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ರಾಜ್ಯಗಳು ನೈಸರ್ಗಿಕ ವಿಪತ್ತುಗಳಿಗೆ ಹೆಚ್ಚು ತುತ್ತಾಗಿವೆ. ಇಂತಹ ರಾಜ್ಯಗಳಿಗೆ ಗ್ಲೋಬಲ್ ಹೌಸಿಂಗ್ ಟೆಕ್ನಾಲಜಿ ಚಾಲೆಂಜ್-ಇಂಡಿಯಾ ಅಡಿಯಲ್ಲಿ ಹಗುರ ಮನೆಗಳು ಹೆಚ್ಚು ಉಪಯುಕ್ತವಾಗಲಿದೆ ಎಂದರು.ಸದ್ಯ ಈ ಮನೆಯನ್ನು ಇಂದೋರ್​ (ಮಧ್ಯ ಪ್ರದೇಶ), ರಾಜಕೋಟ್​ (ಗುಜರಾತ್​), ಚೆನ್ನೈ (ತಮಿಳುನಾಡು), ರಾಂಚಿ (ಜಾರ್ಖಂಡ), ಅಗರ್​ತಾಲಾ (ತ್ರಿಪುರ) ಮತ್ತು ಲಖನೌ (ಉತ್ತರ ಪ್ರದೇಶ) ಇಲ್ಲಿ ನಿರ್ಮಿಸಲಾಗುತ್ತದೆ.
ಏನಿದು ಲೈಟ್​ ಹೌಸ್​ ಪ್ರಾಜೆಕ್ಟ್ರ್?ಲೈಟ್ ಹೌಸ್ ಪ್ರಾಜೆಕ್ಟ್‌ಗಳು (ಎಲ್‌ಎಚ್‌ಪಿ) ಮಾದರಿ ವಸತಿ ಯೋಜನೆಗಳಾಗಿವೆ, ಈ ಯೋಜನೆಯ ಅಡಿಯಲ್ಲಿ ಮನೆಗಳನ್ನು ಇಟ್ಟಿಗೆ ಮತ್ತು ಗಾರೆಗಳಿಂದ ನಿರ್ಮಿಸಲಾಗುವುದಿಲ್ಲ. ಬದಲಾಗಿ, ಪ್ರತಿಯೊಂದು ಪ್ರದೇಶದ ಭೌಗೋಳಿಕ-ಹವಾಮಾನ ಮತ್ತು ಅಪಾಯದ ಪರಿಸ್ಥಿತಿಗಳಿಗೆ ಸೂಕ್ತವಾದ ಕೆಲವು ಪರ್ಯಾಯ ತಂತ್ರಜ್ಞಾನಗಳನ್ನು ಅಳವಡಿಸಿ ಮನೆ ನಿರ್ಮಿಸಲಾಗುತ್ತದೆ.
ಚೀನಾ, ಆಸ್ಟ್ರೇಲಿಯಾ, ಆಫ್ರಿಕನ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಅಲ್ಲಿಯ ಭೌಗೋಳಿಕ-ಹವಾಮಾನ ಮತ್ತು ಅಪಾಯದ ಪರಿಸ್ಥಿತಿಗಳಿಗೆ ಸೂಕ್ತವಾದ ಕೆಲವು ಪರ್ಯಾಯ ತಂತ್ರಜ್ಞಾನಗಳನ್ನು ಅಳವಡಿಸಿ ಮನೆ ನಿರ್ಮಿಸಲಾಗಿದೆ. ಅದನ್ನೇ ಇಲ್ಲಿಯೂ ನಿರ್ಮಾಣ ಮಾಡುವ ಗುರಿ ಸರ್ಕಾರ ಹೊಂದಿದೆ.
13 ದೇಶಗಳ ಕರೊನಾ ಬಿಕ್ಕಟ್ಟು ನಿರ್ವಹಣೆ: ಭಾರತದ ಪ್ರಧಾನಿಗೆ ಸಿಕ್ಕ ಸ್ಥಾನ ಎಷ್ಟು ಗೊತ್ತಾ?

ಯೋಜನಾ ಸಂಯೋಜಕರಾಗಿ: ಆರಂಭಿಕ 61 ಸಾವಿರ ರೂ. ವೇತನ ಪಡೆಯಿರಿ

ಹುಡುಗನಾಗಿದ್ದರೂ, ಹುಡುಗರನ್ನು ಕಂಡರೆ ಏನೇನೋ ಆಸೆ ಹುಟ್ಟುತ್ತಿದೆ: ಪ್ಲೀಸ್​ ಪರಿಹಾರ ಹೇಳಿ…

ಹೊಸ ವರ್ಷದ ಶುಭಾಶಯ ಕೋರಹೋಗಿ ಮಸಣ ಸೇರಿದ ಕಾರ್ಕಳದ ಯುವಕರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 1 =
Remember me
