ನವದೆಹಲಿ:ಎಲ್ಲಾದರೂ ವಾಹನದಲ್ಲಿ ಹೋಗುವಾಗ ಎದುರಿಗೆ ಹುಲಿ ಬಂದರೆ ಅದರಲ್ಲಿಯೂ ಮೂರು ಮೂರು ಹುಲಿ ಒಟ್ಟಿಗೇ ಬಂದರೆ ಹೇಗಿರುತ್ತೆ? ನೆನೆಸಿಕೊಂಡರೇ ಭಯ ಆಗುತ್ತಲ್ವಾ? ಆದರೆ ಇಲ್ಲೊಂದು ಅಂಥದ್ದೇ ಘಟನೆ ನಡೆದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಆದರೆ ಈ ಹುಲಿಗಳು ಥಟ್‌ ಎಂದು ಎದುರಿಗೆ ಬರಲಿಲ್ಲ. ಬದಲಿಗೆ ಟೂರಿಸ್ಟ್​ ವ್ಯಾನ್​ನಲ್ಲಿ ಪ್ರವಾಸಿಗರು ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಟೂರಿಸ್ಟ್‌ ವಾಹನವಾಗಲೀ, ಯಾವುದೇ ವಾಹನ ಆಗಲಿ ಹತ್ತಿರ ಹುಲಿಗಳು ಬಂದರೆ ಜೀವವೇ ಬಾಯಲ್ಲಿ ಬಂತಂತೆ ಆಗುವುದು ನಿಜವಲ್ಲವೇ?
ಇಂಥ ವಿಡಿಯೋವನ್ನು ಐಎಫ್​ಎಸ್​ ಅಧಿಕಾರಿ ಸುಶಾಂತ್‌ ನಂದ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಂಥ ಹಲವಾರು ವಿಡಿಯೋಗಳನ್ನು ಇವರು ಆಗಾಗ್ಗೆ ಶೇರ್‌ ಮಾಡುತ್ತಲೇ ಇರುತ್ತಾರೆ. ಇದೀಗ ಈ ವಿಡಿಯೋದಲ್ಲಿ ಅರಣ್ಯದ ಮಧ್ಯೆ ವ್ಯಾನ್​ ನಿಂತಂತೆಯೇ ಮೂರು ದೈತ್ಯಾಕಾರದ ಹುಲಿಗಳು ಒಂದಾದ ಮೇಲೊಂದು ಬಂದು ವಾಹನವನ್ನು ಸುತ್ತುವರೆಯುವುದನ್ನು ನೋಡಬಹುದು. ಮಾತ್ರವಲ್ಲದೇ ವಾಹನವನ್ನು ಹತ್ತಿ ಪ್ರವಾಸಿಗರನ್ನು ನೋಡುತ್ತಿದೆ. ನೋಡುಗರಿಗೆ ಇದು ಒಂದು ರೀತಿಯಲ್ಲಿ ರೋಮಾಂಚನ ಎನಿಸಿದರೂ ವಾಹನದ ಒಳಗೆ ಇರುವವರ ಗತಿ ಹೇಗಿರಬಹುದು? ಇದೇನೂ ಹೇಳಬೇಕಾಗಿಲ್ಲ ಅಲ್ವಾ?
ಈ ವಿಡಿಯೋ ನೀವೂ ನೋಡಿ:
Buffet lunchpic.twitter.com/61gjheO8GC
— Susanta Nanda (@susantananda3)July 10, 2021

ಬ್ಯಾಂಕ್​ನಲ್ಲಿ ಉದ್ಯೋಗಕ್ಕೆ ಕಾಯುತ್ತಿರುವಿರಾ? ಐಬಿಪಿಎಸ್​ನಿಂದ 5,830 ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ

ಇದು ಹಿಂದೂ-ಮುಸ್ಲಿಂ ದುರಂತ ಲವ್​ ಸ್ಟೋರಿ: ಹಸೆಮಣೆ ಏರಲು ಸಿದ್ಧವಾದವರಿಗೆ ಕೊಳ್ಳಿ ಇಟ್ಟ ‘ಲವ್​ ಜಿಹಾದ್​’

VIDEO: ಗೆಳೆಯನ ಜತೆಗೆ ಆಮೀರ್​ಖಾನ್​ ಪುತ್ರಿ ಕಳೆದ ಮೋಜಿನ ಕ್ಷಣಗಳ ವಿಡಿಯೋ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − ten =
Remember me
