ಕ್ಯಾಲಿಫೋರ್ನಿಯಾ:ಕರೊನಾ ವೈರಸ್‌ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಮಾಸ್ಕ್‌ ಕಡ್ಡಾಯವಾಗಿದೆ. ಆದರೆ ಮೇಕಪ್‌ ಮಾಡಿಕೊಂಡು ಇತರರಿಗೆ ಪ್ರದರ್ಶನ ಮಾಡಬೇಕೆನ್ನುವ ಲಲನೆಯರಿಗೆ ಮಾತ್ರ ಈ ಮಾಸ್ಕ್‌ ನುಂಗಲಾರದ ತುತ್ತಾಗಿದೆ. ಅದರಲ್ಲಿಯೂ ಲಿಪ್‌ಸ್ಟಿಕ್‌ ಪ್ರಿಯರಿಗೆ ಮಾಸ್ಕ್‌ ಎನ್ನುವುದು ದೊಡ್ಡ ತಲೆನೋವಾಗಿಬಿಟ್ಟಿದೆ.
ಅಂಥದ್ದೇ ಒಂದು ಲಿಪ್‌ಸ್ಟಿಕ್‌ ಪ್ರಕರಣದಲ್ಲಿ ಅಮೆರಿಕದ ರೆಸ್ಟೋರೆಂಟ್‌ ಒಂದರಲ್ಲಿ ಇಬ್ಬರು ಮಹಿಳೆಯರ ನಡುವೆ ಕಿತ್ತಾಟ ಶುರುವಾಗಿದ್ದು, ಹೋಟೆಲ್‌ ಸಿಬ್ಬಂದಿ ಕೆಲಸ ಬಿಟ್ಟು ಹೋಗುವ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.
https://youtu.be/eBBrZvdeHKw
ಆಗಿದ್ದೇನೆಂದರೆ, ರೆಸ್ಟೋರೆಂಟ್‌ಗೆ ಮೇಕಪ್‌ ರಂಗಿನಿಂದ ಮುಳುಗಿರುವ ಯುವತಿಯೊಬ್ಬಳು ಮಾಸ್ಕ್‌ ಧರಿಸದೇ ಬರುತ್ತಾಳೆ. ಆಗ ರೆಸ್ಟೋರೆಂಟ್‌ನ ಮಹಿಳಾ ಸಿಬ್ಬಂದಿ ಮಾಸ್ಕ್‌ ಧರಿಸುವಂತೆ ಹೇಳುತ್ತಾಳೆ. ಅದಕ್ಕೆ ಕಾರಣ ಕೇಳಿದಾಗ ತಾನು ದುಬಾರಿ ಬೆಲೆಯ ಲಿಪ್‌ಸ್ಟಿಕ್‌ ಹಚ್ಚಿಕೊಂಡಿದ್ದು ಮಾಸ್ಕ್ ಧರಿಸಿದರೆ ಅದು ಹಾಳಾಗುತ್ತದೆ ಎಂದಿದ್ದಾಳೆ. ಆದರೆ ನಿಯಮದ ಪ್ರಕಾರ ಮಾಸ್ಕ್‌ ಧರಿಸಲೇಬೇಕು ಎಂದು ಸಿಬ್ಬಂದಿ ಹೇಳಿದ್ದಾಳೆ.
ಜಪ್ಪಯ್ಯ ಎಂದರೂ ಪಟ್ಟುಬಿಡದ ಆ ಯುವತಿ ಗಲಾಟೆ ಮಾಡಲು ಶುರು ಮಾಡಿದ್ದಾಳೆ. ಬರುವ ಗ್ರಾಹಕರನ್ನು ಸೌಜನ್ಯದಿಂದ ನೋಡಿಕೊಳ್ಳುವುದು ಸಿಬ್ಬಂದಿಯ ಕರ್ತವ್ಯ. ಆದರೆ ಮಾಸ್ಕ್‌ನಿಂದ ಆ ಯುವತಿ ರೇಗಿದ್ದಕ್ಕೆ ಸಿಬ್ಬಂದಿ ಕೂಡ ರೇಗಾಡಬೇಕಾಗಿ ಬಂತು. ನಂತರ ಇದು ಅತಿಯಾದರೆ ತನ್ನದೇ ತಪ್ಪು ಎಂದು ಕೆಲಸದಿಂದ ತೆಗೆದು ಹಾಕುತ್ತಾರೆ ಎಂದು ಅರಿಯ ಈ ಮಹಿಳಾ ಸಿಬ್ಬಂದಿ ನಿಮ್ಮಂಥವರಿಂದಲೇ ನಮಗೆ ಕೆಲಸ ಮಾಡಲು ಕಷ್ಟವಾಗುತ್ತೆ ಎಂದು ಹೇಳಿ ಕೆಲಸವನ್ನೇ ಬಿಟ್ಟು ಹೋಗಿದ್ದಾಳೆ.
ಸೂಪರ್‌ಮಾರ್ಕೆಟ್‌ಗೆ ನುಗ್ಗಿದ ಬಂದೂಕುಧಾರಿಗಳಿಂದ 10 ಮಂದಿ ಹತ್ಯೆ- ನಡುರಾತ್ರಿ ಭೀಕರ ಕೃತ್ಯ

ಅಮ್ಮ ವಿವಾಹಿತನ ಬಲೆಗೆ ಬಿದ್ದಿದ್ದಾಳೆ- ನನ್ನ ಮದುವೆಗಿದು ಅಡ್ಡಗಾಲಾಗುತ್ತಿದೆ… ಏನು ಮಾಡಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − eleven =
Remember me
