ಛತ್ತೀಸಗಢ :ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಸಂಪೂರ್ಣ ಬಂದ್‌ ಆಗಿವೆ. ಇದಾಗಲೇ ಸಾಕಷ್ಟು ಎಣ್ಣೆಪ್ರಿಯರು ತಿಂಗಳಿಗಾಗುವಷ್ಟು ಮದ್ಯವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದಾರೆ.
ಸರ್ಕಾರಕ್ಕೆ ಭಾರಿ ಆದಾಯ ತಂದುಕೊಡುವ ಮದ್ಯದಂಗಡಿ ಮುಚ್ಚಿದರೆ ನಷ್ಟ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಮನೆಯ ಬಾಗಿಲಿಗೇ ಮದ್ಯವನ್ನು ಪೂರೈಕೆ ಮಾಡಲು ಸರ್ಕಾರವೊಂದು ಮುಂದಾಗಿದೆ. ಅಂದ ಹಾಗೆ ಇಂಥದ್ದೊಂದು ಅವಕಾಶ ಕಲ್ಪಿಸಿರುವುದು ಛತ್ತೀಸಗಢ ಸರ್ಕಾರ.
ಛತ್ತೀಸಗಢ ರಾಜ್ಯದಲ್ಲಿ ಮದ್ಯ ಹೋಂ ಡೆಲಿವರಿ ಪ್ರಾರಂಭ ಮಾಡಲಾಗುವುದು ಎಂದು ಅಬಕಾರಿ ಸಚಿವ ಕವಾಸಿ ಲಖ್ಮಾ ತಿಳಿಸಿದ್ದಾರೆ. ಲಾಕ್‌ಡೌನ್‌ನಿಂದ ಸರ್ಕಾರಕ್ಕೆ ಉಂಟಾಗಿರುವ ನಷ್ಟವನ್ನು ತುಂಬುವ ಕಾರಣಕ್ಕೆ ಮನೆ ಬಾಗಿಲಿಗೆ ಮದ್ಯ ತಲುಪಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮದ್ಯ ಮಾರಾಟ ಸ್ಥಗಿತಗೊಂಡರೆ ಬೊಕ್ಕಸಕ್ಕೆ ಭಾರಿ ನಷ್ಟ ಎಂದು ಅವರು ಹೇಳಿದ್ದಾರೆ.
ಕದ್ದುಮುಚ್ಚಿ ಅಂಗಡಿಗೆ ಹೋಗಿ ಮದ್ಯ ಖರೀದಿ ಮಾಡುತ್ತಿರುವವರಿಗೆ ಮಾತ್ರ ಸ್ವಲ್ಪ ಇರುಸುಮುರುಸಾಗಿದೆ. ಆದರೆ ಮದ್ಯ ಸಿಗುವ ಖುಷಿಯಲ್ಲಿ ಎಲ್ಲರೂ ಇದ್ದಾರೆ.ಕರೊಆ ಸೋಂಕು ಪ್ರಕರಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಮದ್ಯ ಹೋಂ ಡೆಲಿವರಿಗೆ ಸರ್ಕಾರ ಪ್ರತ್ಯೇಕ ಪೋರ್ಟಲ್ ತೆರೆದಿದೆ.
ಕೋವಿಡ್‌ ಸಂಕಷ್ಟಕ್ಕೆ ಮತ್ತೊಮ್ಮೆ ಧಾವಿಸಿದ ಇನ್‌ಫೋಸಿಸ್‌- 100 ಕೋಟಿ ರೂ. ಬಿಡುಗಡೆಗೆ ಆದೇಶ

ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಹಾರ್ದಿಕ್‌ ಪಟೇಲ್‌ ತಂದೆ ಕರೊನಾ ಸೋಂಕಿಗೆ ಬಲಿ

ನಾನೂ ಬದುಕುತ್ತಿದ್ದೆ… ಉಸಿರು ನಿಲ್ಲುವ ಮೊದಲು ನಟ ಬರೆದುಕೊಂಡ ಕೊನೆಯ ಸಾಲುಗಳು ಕಣ್ಣೀರು ತರಿಸುತ್ತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seventeen =
Remember me
