ಮಧುರೈ:ತಮಿಳುನಾಡಿನಲ್ಲಿ ಕರೊನಾ ಸೋಂಕಿನ ಪ್ರಮಾಣ ಅಲ್ಪ ಇಳಿಯುತ್ತಿದ್ದಂತೆಯೇ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಜೂನ್ 21ರವರೆಗೆ ಮತ್ತೆ ಲಾಕ್​ಡೌನ್ ವಿಸ್ತರಣೆ ಮಾಡಿದ್ದರೂ ಕೆಲವೊಂದು ಸಡಿಲಿಕೆ ಇದ್ದು, ಅದರಲ್ಲಿ ಮದ್ಯದಂಗಡಿ ತೆರೆಯುವುದೂ ಒಂದಾಗಿದೆ.
ಮದ್ಯವನ್ನು ಕಾಣದೇ ಕಂಗೆಟ್ಟು ಹೋಗಿದ್ದ ಎಣ್ಣೆಪ್ರಿಯರಿಗೆ ಇದು ಹೇಳಿಕೊಳ್ಳಲಾರದಷ್ಟು ಸಂತಸ ನೀಡಿದೆ. ಬೆಳಗ್ಗೆ ಮದ್ಯದಂಗಡಿಯೊಂದು ತೆರೆಯುತ್ತಿದ್ದಂತೆಯೇ ದೌಡಾಯಿಸಿ ಎಣ್ಣೆಪ್ರಿಯನೊಬ್ಬ, ಅಂಗಡಿ ಮುಂದೆ ಹೋಗಿ ದೀಪ ಬೆಳಗಿದ್ದಾನೆ. ನಂತರ ಮದ್ಯದ ಬಾಟಲಿ ತೆಗೆದುಕೊಂಡು ಆರತಿ ಬೆಳಗಿ ನಮಸ್ಕಾರ ಮಾಡಿದ್ದಾನೆ.
ಇದರ ವಿಡಿಯೋ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ಗಳ ಸುರಿಮಳೆಯೇ ಸುರಿಯುತ್ತಿದೆ. ಮದ್ಯದಂಗಡಿಯನ್ನು ತೆರೆಯದೇ ಬೇಸರದಲ್ಲಿರುವ ಕೆಲ ಮದ್ಯಪ್ರಿಯರು ನಾವು ಇಲ್ಲಿಂದಲೇ ಅದಕ್ಕೆ ನಮಸ್ಕಾರ ಮಾಡಿರುವುದಾಗಿ ಕಮೆಂಟ್‌ ಹಾಕುತ್ತಿರುವುದು ವಿಶೇಷ. ಮಾತ್ರವಲ್ಲದೇ, ಬಹುತೇಕ ಮಂದಿ ಈ ವಿಡಿಯೋ ನೋಡಿ ಆನಂದ ಪಟ್ಟುಕೊಂಡಿದ್ದು, ನಮ್ಮ ರಾಜ್ಯದಲ್ಲಿಯೂ ಇಂಥ ಸೌಭಾಗ್ಯ ಯಾವಾಗ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ…
#WATCH| A local in Madurai worships bottles of liquor after Tamil Nadu govt permits the reopening of liquor shops in the statepic.twitter.com/sIp9LUR0GM
— ANI (@ANI)June 14, 2021

ಮೊಬೈಲ್‌ನಲ್ಲಿದ್ದ ಅಂಕುಡೊಂಕು ಪಟ್ಟಿಯ ಫೋಟೋದಲ್ಲಿ ಮೈಸೂರು ಯುವಕನ ಕೊಲೆಗಾರನ ಸುಳಿವು!

ಪರ ಪುರುಷನ ಜತೆ ಸಂಬಂಧ: ಮಹಿಳೆಯ ಬಟ್ಟೆಗಳನ್ನು ಕಿತ್ತೆಸೆದು ಬೆತ್ತಲೆ ಮೆರವಣಿಗೆ ಮಾಡಿದ ಗ್ರಾಮಸ್ಥರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
