ನವದೆಹಲಿ:ಇಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ರಾಷ್ಟ್ರೀಯ ಸಾಕ್ಷರತಾ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದೆ.ಏಳು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಲ್ಲಿ ಸಾಕ್ಷರತೆಯ ಪ್ರಮಾಣ ಕುರಿತು ರಾಜ್ಯವಾರು ಮಾಹಿತಿಯನ್ನು ಈ ಪಟ್ಟಿಯಲ್ಲಿ ನೀಡಲಾಗುತ್ತದೆ.ಈ ಪಟ್ಟಿಯಲ್ಲಿ ಕೇರಳ ಪುನಃ ನಂ.1 ಸ್ಥಾನ ಪಡೆದುಕೊಂಡಿದೆ. ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಶೇ.96.2ರಷ್ಟಿದ್ದು, ಶೇ.66.4ರಷ್ಟು ಸಾಕ್ಷರತೆ ಹೊಂದಿರುವ ಆಂಧ್ರ ಪ್ರದೇಶ ಕೊನೆಯ ಸ್ಥಾನದಲ್ಲಿದೆ. ಈ ಸಮೀಕ್ಷೆಯ ಪ್ರಕಾರ ದೇಶದ ಸಾಕ್ಷರತಾ ಪ್ರಮಾಣ ಶೇಕಡಾ 77.7 ರಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. 73.5 ಹಾಗೂ ನಗರ ಪ್ರದೇಶಗಳಲ್ಲಿ ಶೇ 87.7 ರಷ್ಟು ಸಾಕ್ಷತರಾ ಪ್ರಮಾಣವಿದೆ.
ಇದನ್ನೂ ಓದಿ:ಆನ್​ಲೈನ್​ ಅವಾಂತರ- ಪ್ಯಾಂಟ್​ ಹಾಕದ ಅಪ್ಪ, ನಾನೂ ಹಾಕಿಲ್ಲ ಎಂದು ತೋರಿಸಿದ ಮತ್ತೊಬ್ಬ!ರಾಷ್ಟ್ರಮಟ್ಟದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ 84.7 ರಷ್ಟಿದ್ದರೆ, ಮಹಿಳೆಯರ ಪ್ರಮಾಣ 70.3 ರಷ್ಟಿದೆ. ಎಲ್ಲಾ ರಾಜ್ಯಗಳಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ ಮಹಿಳೆಯರಿಗಿಂತ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ.15ನೇ ಸ್ಥಾನದಲ್ಲಿರುವ ಕರ್ನಾಟಕದ ಸಾಕ್ಷರತಾ ಪ್ರಮಾಣ ಶೇಕಡಾ 77.2 ರಷ್ಟಿದೆ.ವಿವಿಧ ರಾಜ್ಯಗಳ ಸಾಕ್ಷರತೆ ಪ್ರಮಾಣ ಹೀಗಿದೆ (ಶೇಕಡಾವಾರು)
ಕೇರಳ   96.2ದೆಹಲಿ    88.7ಉತ್ತರಾಖಂಡ  87.6ಹಿಮಾಚಲ ಪ್ರದೇಶ 86.6ಅಸ್ಸಾಂ    85.9ಮಹಾರಾಷ್ಟ್ರ  84.8ಪಂಜಾಬ್​   83.7ಗುಜರಾತ್​   82.4ತಮಿಳುನಾಡು   82.9ಪಶ್ಚಿಮ ಬಂಗಾಳ   80.5ಹರಿಯಾಣ   80.4ಒಡಿಶಾ   77.3ಜಮ್ಮು ಮತ್ತು ಕಾಶ್ಮೀರ 77.3ಛತ್ತೀಸಗಢ   77.3ಕರ್ನಾಟಕ   77.2ಜಾರ್ಖಂಡ   74.7ಮಧ್ಯಪ್ರದೇಶ   73.7ಉತ್ತರ ಪ್ರದೇಶ   73ತೆಲಂಗಾಣ   72.8,ಬಿಹಾರ   70.9,ರಾಜಸ್ಥಾನ   69.7ಆಂಧ್ರಪ್ರದೇಶ  66.4
11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

ಪಬ್​ಜಿಗಾಗಿ ಅಜ್ಜನ ಜೀವಮಾನದ ಹಣ ಕದ್ದ ಮೊಮ್ಮಗ- ಪಾಸ್​ವರ್ಡ್​ ಹೇಳುವ ಮುನ್ನ ಎಚ್ಚರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 2 =
Remember me
