ಮುಂಬೈ:ಮಂಗಳೂರಿನ ದಿವಿತಾ ರೈ ಅವರು ‘ಲಿವಾ ಮಿಸ್ ದಿವಾ ಯೂನಿವರ್ಸ್​- 2022’ (LIVA Miss Diva Universe 2022) ಸೌಂದರ್ಯ ಸ್ಪರ್ಧೆಯ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ದಿವಿತಾ, ಮಿಸ್‌ ಯೂನಿವರ್ಸ್‌ 2022ಕ್ಕೆ ಭಾರತವನ್ನು ಪ್ರತಿನಿಧಿಸಲು ಅರ್ಹರಾಗಿದ್ದಾರೆ.
ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ 2021ರ ಮಿಸ್ ಯೂನಿವರ್ಸ್ ಹರ್ನಾಝ್ ಸಂಧು ಅವರು ಲಿವಾ ಮಿಸ್ ದಿವಾ 2022ರ ಪ್ರಶಸ್ತಿ ಕಿರೀಟವನ್ನು ದಿವಿತಾ ಅವರಿಗೆ ತೊಡಿಸಿದ್ದಾರೆ. ತೆಲಂಗಾಣದ ಪ್ರಗ್ಯಾ ಅಯ್ಯಗರಿ ಲಿವಾ ಮಿಸ್‌ ದಿವಾ ಸೂಪರ್‌ನ್ಯಾಷನಲ್‌ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಮಂಗಳೂರಿನ ದಿವಿತಾ ರೈ ಅವರು ದಿಲೀಪ್ ರೈ ಹಾಗೂ ತಾಯಿ ಪವಿತ್ರಾ ರೈ ಪುತ್ರಿ. ತಂದೆಯ ಉದ್ಯೋಗದ ಹಿನ್ನೆಲೆಯಲ್ಲಿ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಜೆಜೆ ಕಾಲೇಜ್ ಆಫ್ ಆರ್ಕಿಟೆಕ್ಚರ್​ನಲ್ಲಿ ಪದವಿ ಪಡೆದಿದ್ದಾರೆ. ಇವರ ಅಣ್ಣ ದೈವಿಕ್ ರೈ ಕ್ರಿಕೆಟಿಗ, ಭಾರತದ ಒಳಾಂಗಣ ಕ್ರಿಕೆಟ್ ತಂಡದ ಸದಸ್ಯರಾಗಿದ್ದಾರೆ. 2017ರ ಒಳಾಂಗಣ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿ ಇವರು ಇದ್ದರು.
ಮಿಸ್ ದಿವಾ ಯುನಿವರ್ಸ್ 2022 ಕಿರೀಟವನ್ನು ಗೆದ್ದ ಬಳಿಕ ಮಾತನಾಡಿದ ದಿವಿತಾ ಇಟ್ಸ್​ ಕ್ರೇಜಿ ಎಂದು ಉದ್ಗರಿಸಿದ್ದಾರೆ. “ನನಗೆ ಬಹಳ ಖುಷಿಯಾಗುತ್ತಿದೆ. ಈ ಕಿರೀಟ ನನಗೆ ಸಿಕ್ಕಿದೆ ಎಂದು ನನಗೆ ಬಂಬಲು ಸಾಧ್ಯವಾಗುತ್ತಿಲ್ಲ. ಇದನ್ನು ವರ್ಣಿಸಲು ಶಬ್ದಗಳೂ ಸಾಕಾಗುತ್ತಿಲ್ಲ, ನನ್ನ ಬಳಿ ನಿಜವಾಗಿಯೂ ಪದಗಳಿಲ್ಲ ಎಂದಿದ್ದಾರೆ.
ಮುಂಬೈನ ಮಹಾಲಕ್ಷ್ಮಿಯಲ್ಲಿರುವ ಫೇಮಸ್ ಸ್ಟುಡಿಯೊದಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಿತು. ಖ್ಯಾತ ತಾರಾ ಬಳಗದ ನಡುವೆ ನಡೆದ ಸಮಾರಂಭದಲ್ಲಿ ಮಿಸ್ ಯುನಿವರ್ಸ್ 2022 ಹರ್ನಾಝ್ ಕೌರ್ ಸಂಧು ಮತ್ತು ಮಾಜಿ ಮಿಸ್ ಯುನಿವರ್ಸ್ ಲಾರಾದತ್ತಾ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.(ಏಜೆನ್ಸೀಸ್​)
ಚಿತ್ರದುರ್ಗದ ವಿದ್ಯಾರ್ಥಿನಿಗೆ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ; ಬೆಂಗಳೂರಿನಲ್ಲಿ ಇಂದು ಪ್ರದಾನ

ಪತ್ನಿಯನ್ನು ಕಾಪಾಡಲು ಹೋದ ಬಳ್ಳಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇನ್ನಿಲ್ಲ: ಸಾವಲ್ಲೂ ಒಂದಾದ ದಂಪತಿ!

VIDEO: ಸ್ಪೇಸ್‌-ಎಕ್ಸ್​ನಿಂದ ಮತ್ತೊಂದು ಸಾಧನೆ: 54 ಸ್ಟಾರ್‌ಲಿಂಕ್ ಬ್ರಾಡ್‌ಬ್ಯಾಂಡ್ ಉಪಗ್ರಹ ಯಶಸ್ವಿ ಉಡಾವಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
